ಸೀರಿಯಲ್ ಮಾಡಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ !! ಮನೆಮನೆಗೆ ದೊಡ್ಮನೆ !!

ಕರುನಾಡ ಚಕ್ರವರ್ತಿ ಹಾಗೂ ಸ್ಯಾಂಡಲವುಡ್​​ನ ಹ್ಯಾಟ್ರಿಕ್ ಸ್ಟಾರ್ ಡಾ.ಶಿವರಾಜ್ ಕುಮಾರ್ ಧಾರಾವಾಹಿ ನಿರ್ಮಾಣದತ್ತ ಮುಖ ಮಾಡಿದ್ದಾರೆ. ತಮ್ಮದೇ ಹೋಂ ಬ್ಯಾನರ್​​ ಆರಂಭಿಸಿರುವ ಶಿವರಾಜಕುಮಾರ್, ಅದಕ್ಕೆ ಶ್ರೀಮುತ್ತು ಸಿನಿ ಸರ್ವಿಸ್​​ ಎಂದು ಹೆಸರಿಟ್ಟಿದ್ದಾರೆ.

ಶ್ರೀಮುತ್ತು ಸರ್ವೀಸ್​​ನ ಮೊದಲ ಕೊಡುಗೆಯಾಗಿ ಡಾ.ಶಿವರಾಜಕುಮಾರ್ ಸಿರೀಯಲ್​​ ನಿರ್ಮಿಸಲಿದ್ದು, ಇದಕ್ಕೆ ಶಿವಣ್ಣ ದ್ವಿತೀಯ ಪುತ್ರಿ ನಿವೇದಿತಾ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಈ ಧಾರಾವಾಹಿಯ ಮುಹೂರ್ತ ಸಮಾರಂಭ ನಡೆಯಿತು.

ಶಿವಣ್ಣನ ಹೋಂ ಬ್ಯಾನರ್​ನ ಮೊದಲ ಸಿರೀಯಲ್​ ಗೆ ಮಾನಸ ಸರೋವರ ಎಂದು ಹೆಸರಿಡಲಾಗಿದೆ. ಸೀರಿಯಲ್​ನಲ್ಲಿ ಹಿರಿಯ ನಟಿ ಪದ್ಮಾವಾಸಂತಿ ಹಾಗೂ ಪ್ರಣಯರಾಜ್ ಶ್ರೀನಾಥ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಮಾನಸ ಸರೋವರ ಚಿತ್ರದ ಮುಂದುವರಿದ ಭಾಗ ಎಂದು ಹೇಳಲಾಗುತ್ತಿದೆ.