ನಟಿ ಮೇಘನಾಗೆ ಆ ನಿರ್ಮಾಪಕ ಮಾಡಿದ್ದೇನು ? ತಾಯಿ ಸಮ್ಮುಖದಲ್ಲೇ ನಡೆದ ಘಟನೆ !!

ಇದು ಸ್ಯಾಂಡಲ್​​ವುಡ್​ನ ಮತ್ತೊಂದು ಸ್ಫೋಟಕ ಸುದ್ದಿ. ನಿರ್ಮಾಪಕನೊಬ್ಬನ ವಿರುದ್ದ ಸ್ಯಾಂಡಲ್ ವುಡ್ ನಟಿ ಮೇಘನಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಿನೇಮಾ ನಿರ್ಮಾಪಕ ಜಗದೀಶ್ ಎಂಬವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಮೇಘನಾ ದೂರಿನಲ್ಲಿ ತಿಳಿಸಿದ್ದಾರೆ. ಈ ಲೈಂಗಿಕ ಕಿರುಕುಳ ಪ್ರಕರಣದ ಹಿಂದಿನ ಕತೆ ಬೇರೆಯೇ ಇದೆ. ಚಿಕ್ಕಮಗಳೂರಿನಲ್ಲಿ ದೇವರಗುಡ್ಡ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಐವರು ನಾಯಕಿಯರ ಪೈಕಿ ಮೇಘನಾ ಕೂಡಾ ಒಬ್ಬರು. ದಿನಾ ಲೇಟಾಗಿ ಚಿತ್ರೀಕರಣಕ್ಕೆ ಬರುತ್ತಿದ್ದ ಮೇಘನಾರನ್ನು ನಿರ್ಮಾಪಕ ಜಗದೀಶ್ ಪ್ರಶ್ನಿಸಿದ್ದಾರೆ.

ಮೊನ್ನೆಯೂ ಮತ್ತೆ ಲೇಟಾಗಿ ಬಂದಾಗ ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ತಾಯಿಯ ಎದುರೇ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಹಲ್ಲೆಗೂ ಮುಂದಾಗಿದ್ದಾರೆ ಎನ್ನುವುದು ಮೇಘನಾ ಆರೋಪ. ಮಹಿಳೆಯರ ಮೇಲೆ ಹಲ್ಲೆ ನಡೆಸುವುದು ಕೂಡಾ ಮಹಿಳಾ ದೌರ್ಜನ್ಯ ಆಗೊದ್ರಿಂದ ಲೈಂಗಿಕ ದೌರ್ಜನ್ಯ ದೂರು ಸಲ್ಲಿಸಲಾಗಿದೆ.