ನೀಲಿತಾರೆಯಾದ ನಟಿ ರಮ್ಯಾಕೃಷ್ಣ..!

ರಮ್ಯಾಕೃಷ್ಣ ಒಂದು ಕಾಲದ ಟಾಪ್​ ಹೀರೋಯಿನ್​​.. ಸೌತ್​ನ ಎಲ್ಲಾ ಬಿಗ್​ ಸ್ಟಾರ್ಸ್​ ಜೊತೆ ನಟಿಸಿರೋ ನಾಯಕಿ. ಅಂದು ಸ್ಟಾರ್ ನಾಯಕಿ ಆಗಿದ್ದ ಈಕೆ ಈಗ ಅತಿ ಹೆಚ್ಚು ಬೇಡಿಕೆ ಹೊಂದಿರುವ ಪೋಷಕ ನಟಿ. ಅಂದಹಾಗೆ ರಮ್ಯಾಕೃಷ್ಣ ವಯಸ್ಸು ಈಗ 46. ಆದ್ರೂ ರಮ್ಯಕೃಷ್ಣ ಈಗ ಸಖತ್ ಹಾಟ್ ಅಂಡ್ ಬೋಲ್ಡ್.

ad

ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರ ನಿರ್ವಹಿಸಿದ ನಂತರ ರಮ್ಯಕೃಷ್ಣ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಬಾಲಿವುಡ್ ನಲ್ಲೂ ಈ ನಟಿಯ ಬಗ್ಗೆ ಟಾಕ್ ಶುರುವಾಗಿದೆ. ಈಗ ಬರ್ತಿರೋ ಎಲ್ಲಾ ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು ರಮ್ಯಾ ಬಳಿ ಒಂದು ಪಾತ್ರ ಮಾಡುವಂತೆ ಕೇಳ್ಕೊತ್ತಿದ್ದಾರೆ.

ಅಂದಹಾಗೆ ಬಹುಭಾಷಾ ನಟಿ ರಮ್ಯಾಕೃಷ್ಣ ಬಹುತೇಕ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿ, ಅಮ್ಮ, ಅತ್ತೆ, ಖಳನಾಯಕಿ ಹೀಗೆ ಆಲ್ ಮೋಸ್ಟ್ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಆದ್ರೀಗ, ತಮ್ಮ ಜೀವನದಲ್ಲೇ ಅತಿ ಹೆಚ್ಚು ಚಾಲೆಂಜಿಂಗ್ ಆಗಿದ್ದ ಪಾತ್ರವನ್ನ ಹೊಸ ಚಿತ್ರದಲ್ಲಿ ಮಾಡಿದ್ದಾರೆ.

 

 

ಹೌದು ಇದೇ ಮೊದಲ ಬಾರಿಗೆ ರಮ್ಯಾ ನೀಲಿ ತಾರೆ ಪಾತ್ರದಲ್ಲಿ ನಟಿಸಿದ್ದಾರೆ. ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ತಮಿಳಿನ ‘ಸೂಪರ್ ಡಿಲೆಕ್ಸ್’ ಚಿತ್ರದಲ್ಲಿ ರಮ್ಯಕೃಷ್ಣ ನೀಲಿತಾರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗ್ಲೇ ಈ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದೆ.

 

ಟ್ರೇಲರ್​ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಚಿತ್ರದಲ್ಲಿ ಮಹಿಳೆಯ ಪಾತ್ರದಲ್ಲಿ ಅಭಿನಯಿಸಿರುವ ವಿಜಯ್ ಸೇತುಪತಿ ನಟಿಸಿದ್ದಾರೆ. ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ, ಮಿಸ್ಕಿನ್, ಫಹಾದ್ ಫಾಸಿಲ್, ರಮ್ಯಕೃಷ್ಣ ಅಭಿನಯದ ಸಿನಿಮಾದಲ್ಲಿ ವಿಶಿಷ್ಟ ಕತೆ ಇದೆ ಎನ್ನುವುದನ್ನು ಟ್ರೈಲರ್ ಹೇಳುತ್ತದೆ.

ಈ ಸಿನಿಮಾದಲ್ಲಿ ನೀಲಿತಾರೆಯ ಪಾತ್ರ ಮಾಡಿರುವ ರಮ್ಯಾ ಒಂದು ದೃಶ್ಯಕ್ಕಾಗಿ ಸುಮಾರು 37 ಟೇಕ್ ತೆಗೆದುಕೊಂಡಿದ್ದಾರಂತೆ. ಎರಡು ದಿನ ಸಮಯ ಬೇಕಾಯಿತು ಎಂದು ಸ್ವತಃ ರಮ್ಯಾಕೃಷ್ಣ ಹೇಳಿಕೊಂಡಿದ್ದಾರೆ. ಆದ್ರೆ ಆ ದೃಶ್ಯ ಯಾವುದು ಅನ್ನೋದನ್ನು ರಿವೀಲ್​ ಮಾಡಿಲ್ಲ. ಮಾರ್ಚ್ 29ಕ್ಕೆ ಈ ಸಿನಿಮಾ ತೆರೆಮೇಲೆ ಬರಲಿದೆ.