ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಸ್ಯಾಂಡಲ್ ವುಡ್ ನ ಆ ಖ್ಯಾತ ನಟಿ ಯಾರು????

 

ರಾಜಕೀಯ ಸಿದ್ಧಿಗಾಗಿ ಕಾಲಭೈರವನ ಮೊರೆ ಹೋದ ಚಿತ್ತಾರದ ಚೆಲುವೆ!!

ಕರ್ನಾಟಕದಲ್ಲಿ ವಿಧಾನಸಭೆ ಚುಣಾವಣೆ ಅಧಿಕೃತ ಘೋಷಣೆ ಇನ್ನು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಲಿಗೆ ಕನ್ನಡ ಸ್ಯಾಂಡಲ್​ವುಡ್​​ನ ಚಿತ್ತಾರದ ಚೆಲುವೆ ಖ್ಯಾತ ಚಿತ್ರನಟಿ ಅಮೂಲ್ಯ ಸೇರ್ಪಡೆ ಕೂಡ ಬಹುತೇಕ ಖಚಿತವಾಗಿದ್ದು, ಅಮೂಲ್ಯ ನಡೆ ಕೂಡಾ ಇದಕ್ಕೆ ಪುಷ್ಠಿ ನೀಡಿದೆ.


ಹೌದು ಸಧ್ಯದಲ್ಲೇ ರಾಜಕೀಯ ಸೇರ್ಪಡೆಯಾಗಲಿರುವ ಅಮೂಲ್ಯ ಇದರ ಮೊದಲ ಹಂತ ಎಂಬಂತೆ ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಪತಿ ಹಾಗೂ ಕುಟುಂಬದ ಜೊತೆ ತೆರಳಿ ಕಾರ್ತೀಕ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದಿಚುಂಚನಗಿರಿ ಮಠದ ಕಾಲಭೈರವ್​ ನಿಗೆ ಮೂರು ಅಮಾವಾಸ್ಯೆಗಳಂದು ಪೂಜೆ ಮಾಡಿದರೇ ರಾಜಕೀಯ ಯೋಗ ಲಭಿಸುತ್ತದೆ ಎಂಬ ಪ್ರತೀತಿ ಇದೆ.
ಈ ಹಿನ್ನೆಲೆಯಲ್ಲೇ ಈ ಹಿಂದೆ ಮಾಜಿ ಪ್ರಧಾನಿ ಎಚ್​.ಡಿ.ದೇವೆಗೌಡ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳು ಮೂರು ವಾರಗಳ ಕಾಲಭೈರವ ಅಮಾವಾಸ್ಯೆ ಪೂಜೆ ಸಲ್ಲಿಸಿದ್ದಾರೆ. ಅದರಂತೆ ಅವರಿಗೆ ಅಧಿಕಾರ ಕೂಡ ಲಭ್ಯವಾಗಿದೆ.

ಅಮಾವಾಸ್ಯೆಯಂದು ಕಾಲಭೈರವೇಶ್ವರನಿಗೆ ಪೂಜೆ: ಅಮಾವಾಸ್ಯೆ ಸಂದರ್ಭದಲ್ಲಿ ಕಾಲಭೈರವನಿಗೆ ಖುದ್ದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಗಳು ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಲವು ಗಣ್ಯರು ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ದಶಕಗಳಿಂದಲೂ ಈ ಅಮಾವಾಸ್ಯೆ ಪೂಜೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಇದೀಗ ಅಮೂಲ್ಯ, ತಮ್ಮ ಪತಿ ಜಗದೀಶ್ , ಮಾವ ರಾಮಚಂದ್ರ ಹಾಗೂ ಅತ್ತೆ ಜೊತೆ ಪೂಜೆಯಲ್ಲಿ ಸತತ ಮೂರು ಗಂಟೆಗಳ ಕಾಲ ಭಾಗಿಯಾದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಖುದ್ದು ಅಮೂಲ್ಯ ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಹಾಲಿ ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಅಮೂಲ್ಯ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದೀಗ ಇವತ್ತಿನ ಪೂಜೆ ಈ ವದಂತಿಗಳಿಗೆ ಇದು ಮತ್ತಷ್ಟು ಪುಷ್ಠಿ ನೀಡುತ್ತಿದೆ.
ಆದರೇ ಅಮೂಲ್ಯ ಕುಟುಂಬದ ಮೂಲಗಳು ಇದನ್ನು ನಿರಾಕರಿಸಿದ್ದು, ಅಮೂಲ್ಯ ಸ್ವತಃ ತಮ್ಮ ಮಾವ ಹಾಗೂ ಮಾಜಿ ಕಾರ್ಪೋರೇಟರ್ ಜಿ.ಎಚ್.ರಾಮಚಂದ್ರ ಅವರ ರಾಜಕೀಯ ಅಭ್ಯುದಯಕ್ಕಾಗಿ ಈ ಪೂಜೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಈ ಭಾರಿ ರಾಜಕಾರಣಕ್ಕೆ ತಾರಾಮೆರಗು ಖಚಿತವಾಗಿದ್ದು, ಅಮೂಲ್ಯ ಅಧಿಕೃತ ಸೇರ್ಪಡೆಯೊಂದೆ ಬಾಕಿ ಉಳಿದಿದೆ.

ಅಮೂಲ್ಯ