ಅರ್ಜುನ್ ಸರ್ಜಾ ನಟಿಯನ್ನು ತಬ್ಬಿದ ವಿಡಿಯೋ ಫುಲ್​ ವೈರಲ್​​! ವಿಡಿಯೋದಲ್ಲಿರುವ ನಟಿ ನೋಡಿದ್ರೆ ಬೆಚ್ಚಿಬೀಳ್ತಿರಾ ನೀವು!!

ನಿನಗಾಗಿ ಸುಂದರಿ ರಾಧಿಕಾ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಈಗ ರಾಧಿಕಾ ಕುಮಾರಸ್ವಾಮಿಯಾಗಿ ಮಿಂಚುತ್ತಿರುವ ಈ ಚೆಲುವೆ 2002ರಲ್ಲಿ ನಿನಗಾಗಿ ಕನ್ನಡ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟು ಸಿನಿ ಜರ್ನಿ ಆರಂಭಿಸಿದ್ದರು. ಇಂತಿಪ್ಪ ರಾಧಿಕಾ ಅವರ ವಿಡಿಯೋವೊಂದು ಈ ಸಖತ್ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ.

 

ಹೌದು ರಾಧಿಕಾ ಹಾಗೂ ಅರ್ಜುನ್ ಸರ್ಜಾ ಕಾಂಟಾಕ್ಟ್​​ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಹೋಮ್ಲಿ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಅರ್ಜುನ್ ಸರ್ಜಾ ಜೊತೆ ಮೈಚಳಿ ಬಿಟ್ಟು ನಟಿಸಿದ್ದಾರೆ. ಇದೇ ಚಿತ್ರದಲ್ಲಿ ಅಚ್ಚ ಕೆಂಪಿನ ಸೀರೆ ಕಂಗೊಳಿಸುವ ರಾಧಿಕಾ ಅರ್ಜುನ್​ ಸರ್ಜಾರನ್ನು ತಬ್ಬಿಕೊಳ್ಳುವ ವಿಡಿಯೋವೊಂದು ಈಗ ಲೀಕ್​ ಆಗಿದ್ದು, ಎಲ್ಲೆಡೆ ವೈರಲ್​ ಆಗಿದೆ.

ಈ ವಿಡಿಯೋ ನೋಡಿದ ರಾಧಿಕಾ ಅಭಿಮಾನಿಗಳು ಮತ್ತಷ್ಟು ಹೆಚ್ಚಿರುವ ರಾಧಿಕಾ ಸೌಂದರ್ಯನೋಡಿ ಫುಲ್​ ಖುಷಿಯಾಗಿದ್ದಾರೆ. ಮದುವೆ ಹಾಗೂ ಮಗಳು ಹುಟ್ಟಿದ ಬಳಿಕ ಬಹುತೇಕ ಕನ್ನಡ ಚಿತ್ರದಿಂದ ನಾಪತ್ತೆಯಾಗಿದ್ದ ರಾಧಿಕಾ ಕುಮಾರಸ್ವಾಮಿ, ಇದೀಗ ಸಾಲು-ಸಾಲು ಚಿತ್ರಗಳ ಮೂಲಕ ಇಂಡಸ್ಟ್ರಿಗೆ ವಾಪಸ್ಸಾಗಿದ್ದಾರೆ.


ಈ ಹಿಂದೆ ಕನ್ನಡ, ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ನಟಿಸಿದ ರಾಧಿಕಾ ಪ್ರಸ್ತುತ ಸಿನಿಮಾಗಳಲ್ಲಿ ಫುಲ್​​​ ಬ್ಯುಸಿ ಆಗಿದ್ದಾರೆ. ಸದ್ಯ ರಾಧಿಕಾ ಕುಮಾರಸ್ವಾಮಿ ರಾಜೇಂದ್ರ ಪೊನ್ನಪ್ಪ, ಭೈರ ದೇವಿ ಹಾಗು ಧಮಯಂತಿ,ಕಾಂಟಾಕ್ಟ್ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸ್ತಿದ್ದಾರೆ.

Btv News Live @ 10.23 AM

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಏಪ್ರಿಲ್ 26, 2019