ಟೆಕ್ಕಿ ಜೊತೆ ಒಳ್ಳೆ ಹುಡುಗನ ಕಲ್ಯಾಣ- ಹೊಸ ಸಿಎಂ ಎದುರು ಮದ್ವೆ ಆಗ್ತಿನಿ ಎಂದ ಪ್ರಥಮ!!

As soon Engagement On Bigg Boss Season 4 winner Pratham.
As soon Engagement On Bigg Boss Season 4 winner Pratham.

ಸ್ಯಾಂಡಲ್​​ವುಡ್​ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಿದೆ. ಸ್ಯಾಂಡಲವುಡ್​ನ ಒಳ್ಳೆ ಹುಡುಗ ಖ್ಯಾತಿಯ ಬಿಗ್ ಬಾಸ್​ ವಿಜೇತ ಪ್ರಥಮಗೆ ಕಂಕಣ ಕೂಡಿಬಂದಿದ್ದು,  ಮೈಸೂರು ಮೂಲದ ಟೆಕ್ಕಿಯೊಂದಿಗೆ ಪ್ರಥಮ್​​ ಹಸೆಮಣೆ ಏರಲಿದ್ದಾರೆ. ಧರ್ನುಮಾಸದ  ಬಳಿಕ ನಿಶ್ಚಿತಾರ್ಥ ನಡೆಯಲಿದ್ದು,  2018 ಮೇ ವೇಳೆಗೆ ಮದುವೆ ನಡೆಯಲಿದೆ.

ಮೂಲಗಳ ಪ್ರಕಾರ ಎರಡು ಕುಟುಂಬದ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಸಧ್ಯದಲ್ಲೇ ನಿಶ್ಚಿತಾರ್ಥದ ಡೇಟ್​ ಅನೌನ್ಸ್​ ಆಗಲಿದೆ. ಬಿಗ್ ಬಾಸ್​ 4 ನೇ ಸೀಸನ್​ ಗೆದ್ದ ಬಳಿಕ ಸಾಕಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ  ತೊಡಗಿಕೊಂಡಿದ್ದ ಪ್ರಥಮ್ ಸಧ್ಯ ಎಮ್​ಎಲ್​​ಎ ಚಿತ್ರದ ಚಿತ್ರಿಕರಣದಲ್ಲಿ ತೊಡಗಿದ್ದಾರೆ. ಅಲ್ಲದೇ ಇನ್ನು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ.

 

ಇನ್ನು ಮದುವೆ ಬಗ್ಗೆ ಬಿಟಿವಿನ್ಯೂಸ್​ ಜೊತೆ ಎಕ್ಸಕ್ಲೂಸಿವ್​ ಆಗಿ ಮಾತನಾಡಿದ  ಪ್ರಥಮ, ನಾವಿಬ್ಬರು ಒಳ್ಳೆಯ ಸ್ನೇಹಿತರು, ಲವರ್ಸ್​ ಕೂಡ. ಶ್ರೀಮಂತರ ಮನೆಯ ಹುಡುಗಿಯಾಗಿದ್ದರೂ  ಸರಳವಾಗಿರುವ ಹುಡುಗಿ ಆಕೆ. ನನ್ನ ಕಷ್ಟಕಾಲದಲ್ಲಿ ನನಗೆ ಬೆನ್ನುಲುಬಾಗಿ ನಿಂತಿದ್ದರು.

ನಾವಿಬ್ಬರು ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ನಮ್ಮಿಬ್ಬರ ಕುಟುಂಬಗಳೂ ಇದ್ದಕ್ಕೆ ಒಪ್ಪಿವೆ. ಧನುರ್​ ಮಾಸದ ನಂತರ ಎಂಗೇಜ್​ಮೆಂಟ್​. ಎಲೆಕ್ಷನ್​ ಮುಗಿದ ನಂತರ ಮದುವೆ ಆಗುತ್ತೇವೆ. ಮದುವೆಗೆ ಹೊಸ ಮುಖ್ಯಮಂತ್ರಿ ಕರೆಯಬೇಕೆಂದಿದ್ದೇನೆ. ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಚಿತ್ರದ ಎಲ್ಲ ಮುಗಿದ ಬಳಿಕ ಮದುವೆಯಾಗಲಿದ್ದೇನೆ ಎಂದರು. ಒಟ್ಟಿನಲ್ಲಿ ಹೊಸ ವರ್ಷಕ್ಕೆ ಸ್ಯಾಂಡಲವುಡ್​​ನಲ್ಲಿ ಗಟ್ಟಿಮೇಳದ ಸದ್ದು ಕೇಳಲಿದ್ದು,  ಒಳ್ಳೆ ಹುಡುಗ ಪ್ರಥಮ ಹೊಸಬಾಳಿಗೆ ಕಾಲಿಡಲಿದ್ದಾರೆ.