ನಟಿ ಸಿಂಧು‌ ಮೆನನ್ ಮೇಲೆ ಎಫ್.ಐ.ಆರ್!!

ಬೆಂಗಳೂರಿನಲ್ಲಿ ಕನ್ನಡದ ಖ್ಯಾತ ನಾಯಕ ನಟಿ ಮೇಲೆ ಎಫ್ ಐಆರ್ ದಾಖಲಾಗಿದೆ. ನಟಿ ಸಿಂಧು ಮೆನನ್ ಮತ್ತು ಸಹೋದರ್ ಕಾರ್ತಿಕ್ ಸೇರಿ ಇಬ್ಬರ ಮೇಲೆ ವಂಚನೆ ಪ್ರಕರಣ ಆರ್ ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ad


ಬ್ಯಾಂಕ್ ಆಫ್ ಬರೋಡಾ ದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾರ್ ಖರೀದಿ ಮಾಡಲು 36 ಲಕ್ಷ ಲೋನ್ ಪಡೆದಿದ್ರು. ಕಾರ್ ಖರೀದಿಸದ ನಂತರ ಪ್ರತಿ ತಿಂಗಳು ಹಣವನ್ನು ಬ್ಯಾಂಕ್ ಗೆ ಕಟ್ಟದೆ ತಲೆಮರೆಸಿಕೊಂಡಿದ್ದಾರೆ. ನಟಿ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕೆನ್ ಕಾರ್ ಡೀಲರ್ ಆಗಿ ಕೆಲಸ ಮಾಡಿಕೊಂಡಿದ್ದು ಆತನೇ ಪ್ರೈ.ಲಿಮಿಟೆಡ್ ಕಂಪನಿ ಇದೆ ಅಂತ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಆಫ್ ಬರೋಡಾ ಗೆ ಲೋನ್ ನೀಡುವಂತೆ ಅರ್ಜಿಯನ್ನು ಕಳೆದ ವರ್ಷ ಮಾರ್ಚ್ ನಲ್ಲಿ ಸಲ್ಲಿಸಿದ್ದ. ಲೋನ್ ಪಡೆದುಕೊಂಡ ನಂತರ ಬ್ಯಾಂಕ್ ಗೆ ಯಾವುದೇ ಕಾರ್ ನ ಒರಿಜಿನಲ್ ದಾಖಲೆಗಳನ್ನು ನೀಡದೆ ಆರು ತಿಂಗಳ ಬಳಿಕ ಟಾಕ್ಸ್ ಇನ್ ವಾಯ್ಸ್ ನ್ನು ಬ್ಯಾಂಕ್ ಗೆ ನೀಡಿದ್ದು ಬ್ಯಾಂಕ್ ನವರು ನಾಗಶ್ರೀ ಐಸಿಐಸಿಐ ಬ್ಯಾಂಕ್ ಖಾತೆಗೆ 36 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ರು.

ಹಣ ಪಡೆದ ಬಳಿಕ ಬ್ಯಾಂಕ್ ಗೆ ಹಣ ಪಾವತಿ ಮಾಡದೆ ಇದ್ರು.ಹಲವಾರು ಬಾರಿ ಸಂರ್ಪಕಿಸಿದ್ರು ಪ್ರತಿಕ್ರಿಯೆ ನೀಡಿರಲ್ಲಿಲ.ಈ ಹಿನ್ನಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ ದ ಬ್ಯಾಂಕ್ ಮ್ಯಾನೇಜರ್ ಆರ್ ಎಂ.ಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ರು.ದೂರಿನ್ವಯ ಪೊಲೀಸ್ರು ನಟಿ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ವರ್ಮ, ಸ್ನೇಹಿತೆ ನಾಗಶ್ರೀ ಹಾಗೂ ಮೂರನೇ ಆರೋಪಿ ಯಾಗಿ ನಟಿ ಸಿಂಧು ಮೆನನ್ ಶಿವಣ್ಣ ಸುಧಾ ರಾಜಶೇಖರ್ ವಿರುದ್ಧ FIR ದಾಖಲು ಮಾಡಿದ್ದಾರೆ.. ಸದ್ಯ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ಹಾಗೂ ನಾಗಶ್ರೀ ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಅಮೆರಿಕಾದಲ್ಲಿ ತಲೆ ಮರೆಸಿಕೊಂಡಿರುವ ನಟಿ ಹಾಗೂ ಇತರರಿಗೆ ಆರ್ ಎಂ.ಸಿ ಯಾರ್ಡ್ ಪೊಲೀಸ್ರು ಬಲೆ ಬೀಸಿದ್ದಾರೆ.