ಯಶ್ ಬರ್ತ್ ಡೇಗೆ ನಟಿ ರಾಧಿಕ ಗಿಫ್ಟ್ ನೀಡಿಲ್ಲವೇಕೆ ? ರಾಕಿಂಗ್ ಸ್ಟಾರ್ ಗೆ ರಾಧಿಕ ಈವರೆಗೆ ಕೊಟ್ಬಿಟ್ಟಿದ್ದೇನು ಗೊತ್ತಾ ?

Bengaluru: Rocking Star Yash Birthday Celebrations 2018.Bengaluru: Rocking Star Yash Birthday Celebrations 2018.
Bengaluru: Rocking Star Yash Birthday Celebrations 2018.

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮದುವೆಯಾದ ನಂತರ ಪತ್ನಿ ರಾಧಿಕಾ ಜೊತೆ ಎರಡನೇ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಯಶ್ ಗೆ ರಾಧಿಕಾ ಏನು ಗಿಫ್ಟ್ ನೀಡುತ್ತಾಳೆ ಎಂದು ಕುತೂಹಲ ಇತ್ತು. ಆದರೆ ನಟಿ ರಾಧಿಕಾ ಗಿಫ್ಟ್ ಅನ್ನೇ ನೀಡದೆ ಖಾಲಿ ಕೈಯ್ಯಲ್ಲಿ ಶುಭ ಕೋರಿದ್ದಾರೆ.

೩೩ ನೇ ವಸಂತ ಕ್ಕೆ ಕಾಲಿಟ್ಟಿರುವ ಯಶ್ ಹೊಸಕೆರೆಹಳ್ಳಿಯ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು.ನಿನ್ನೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ರಾಜಾಹುಲಿ ಯಶ್ ಮನೆ ಮುಂದೇ ನೆರೆದಿದ್ದು ತಮ್ಮ ನೆಚ್ಚಿನ ನಟನಿಗಾಗಿ ಕಾಯುತ್ತಿದ್ದರು. ಬೆಳಗ್ಗೆ ಯಶ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕೇಕ್ ಕತ್ತರಿಸಿ, ನೆಚ್ಚಿನ ನಟನಿಗೆ ಶುಭಹಾರೈಸಿ,ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.ಈ ವೇಳೆ ಯಶ್ ಬಹುನೀರಿಕ್ಷಿತ ಚಿತ್ರ ಕೆಜಿಎಫ್ ನ ಮೇಕಿಂಗ್ ಟೀಸರ್ ನ್ನು ಚಿತ್ರತಂಡ ಯಶ್ ಗೆ ಉಡುಗೊರೆಯಾಗಿ ನೀಡಿತು.
ಇನ್ನು ಪೋಸ್ಟರ್ ಹಾಗೂ ಯಶ್ ಹೇರ್ ಸ್ಟೈಲ್ ನಿಂದಲೇ ಸುದ್ದಿ ಮಾಡಿರುವ ಕೆಜಿಎಫ್ ಸಿನಿಮಾ ಮೇಕಿಂಗ್ ಟೀಸರ್ ಕೂಡಾ ಅಭಿಮಾನಿಗಳ ಮನಸೆಳೆದಿದೆ.

 

 

 

ಅಭಿಮಾನಿಗಳು ಮಾತ್ರವಲ್ಲದೇ ಸ್ಯಾಂಡಲ್ ವುಡ್ ನ ಹಿರಿ-ಕಿರಿಯ ನಟ-ನಟಿಯರು ಯಶ್ ಗೆ ದೂರವಾಣಿ ಕರೆಮಾಡಿ, ಮನೆಗೆ ಭೇಟಿ ನೀಡಿ ಶುಭಹಾರೈಸಿದ್ದಾರೆ. ತಮಗೆ ಹರಿದು ಬಂದ ಶುಭಾಶಯಗಳ ಮಹಾಪೂರದಿಂದ ಖುಷಿಯಾಗಿರುವ ನಟ ಯಶ್ ಖುಷಿ ವ್ಯಕ್ತಪಡಿಸಿದ್ದು ಧನ್ಯವಾದ ಹೇಳಿದ್ದಾರೆ.ಇನ್ನು ಯಶ್ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಯಾವುದೇ ಗಿಫ್ಟ್ ನೀಡದೇ ವಿಶ್ ಮಾಡಿದ್ದು ತಮ್ಮ ಪೇಸ್ ಬುಕ್ ಪೇಜ್ ನಲ್ಲೂ ರಾಧಿಕಾ ಯಶ್ ಗೆ ಶುಭಹಾರೈಸಿದ್ದಾರೆ. ಯಾಕ್ರೀ ಗಂಡನಿಗೆ ಬರ್ತ್ ಡೇ ಗಿಫ್ಟ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ರೆ “ನಾನು ನನ್ನದೆಲ್ಲವನ್ನೂ ಯಶ್ ಗೆ ನೀಡಿದ್ದೇನೆ. ಇನ್ನು ನೀಡೋಕೆ ನನ್ನ ಬಳಿ ಏನೂ ಇಲ್ಲ” ಎಂದು ತುಂಟತನದ ನಗೆ ಬೀರಿದ್ದಾರೆ.