ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ- ಮೋಸ ಹೋದ ನಟಿ ಯಾರು ಗೊತ್ತಾ?

Bengaluru : Sandalwood Actress got cheated by Actor - Actress Radhika Shetty reacts

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಸುದ್ದಿ ಮಾಡಿದ್ದು, ನಟಿಯೊಬ್ಬರು ಪ್ರೀತಿಸಿ ಮದುವೆಯಾದ ನಟ ತನಗೆ ಕೈಕೊಟ್ಟಿದ್ದು, ನ್ಯಾಯ ಕೊಡಿಸಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಸ್ಯಾಂಡಲವುಡ್​​​​ನಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಚಿತ್ರರಂಗ ಬೆಚ್ಚಿ ಬಿದ್ದಿದೆ.

ad


ನಮಿತ್ ಆಯ್​ ಲವ್​​ ಯೂ ಚಿತ್ರದ ನಟ ಅದೇ ಚಿತ್ರದಲ್ಲಿ ನಟಿಸಿದ್ದ ರಾಧಿಕಾ ಶೆಟ್ಟಿಗೆ ಮೋಸ ಮಾಡಿದ್ದು, ಪ್ರೀತಿ-ಪ್ರೇಮದ ಹೆಸರಿನಲ್ಲಿ ಆಕೆಗೆ ವಂಚಿಸಿದ್ದಾನೆ ಎನ್ನಲಾಗಿದೆ. ನಮಿತಾ ಅಯ್​ ಲವ್ ಯೂ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರ ನಡುವೆಯೂ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರು ಮದುವೆಯಾಗಿದ್ದರು. ಮದುವೆಗೆ ನಟಅಮಿತ್ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು.
ಆದರೂ ಅಮಿತ್ ರಾಧಿಕಾಳ ಜೊತೆ ಚೆನ್ನಾಗಿದ್ದ ಎನ್ನಲಾಗಿದೆ. ಆದರೇ ಈಗ ಕೆಲ ದಿನಗಳಿಂದ ಅಮಿತ್ ಪತ್ನಿಯನ್ನು ನಿರ್ಲಕ್ಷ್ಯಿಸಿದ್ದು, ಇದರಿಂದ ಮನನೊಂದ ನಟಿ ರಾಧಿಕಾ ಇದೀಗ ರಾಜರಾಜೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದು, ನ್ಯಾಯಕೊಡಿಸುವಂತೆ ಒತ್ತಾಯಿಸಿದ್ದಾಳೆ.

 

 

ಆದರೇ ಅಮಿತ್ ಕೂಡ ರಾಧಿಕಾ ವಿರುದ್ಧ ಪ್ರತಿದೂರು ನೀಡಿದ್ದು, ತನಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದ್ದಾನೆ. ರಾಧಿಕಾಗೆ ಈ ಮೊದಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅಮಿತ್ ಕುಟುಂಬಸ್ಥರು ಆಕೆಯನ್ನು ವಿರೋಧಿಸಿದ್ದಾರೆ ಎನ್ನಲಾಗಿದೆ. ಇದೀಗ ನಟನಿಂದ ಮೋಸ ಹೋಗಿದ್ದೇನೆ ಎಂದು ಆರೋಪಿಸಿರುವ ರಾಧಿಕಾ ನ್ಯಾಯಕ್ಕೆ ಆಗ್ರಹಿಸುತ್ತಿದ್ದಾರೆ. ಇನ್ನು ಎರಡು ಕಡೆಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.