ಖ್ಯಾತ ನಟ, ನಿರ್ದೇಶಕ ಕಾಶೀನಾಥ್ ಇನ್ನಿಲ್ಲ !! ಮರೆಯಾದ ಸಿನಿದಿಗ್ಗಜರ ಗುರು !!

Bengaluru: Sandalwood Director ,Actor Kashinath Passes Away.

2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಸಿನಿತಾರೆ, ನಿರ್ದೇಶಕ ಕಾಶೀನಾಥ್ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ad


ಬೆಂಗಳೂರಿನ ಬಸವನಗುಡಿಯಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಹಳ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾಶಿನಾಥ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಂದಾಪುರ ಸಮೀಪದ ಕೋಣಿಯಲ್ಲಿ ಜನಿಸಿದ ಅವರು, ಖ್ಯಾತ ನಟ, ನಿರ್ದೇಶಕ ಉಪೇಂದ್ರ, ವಿ ಮನೋಹರ್, ಸುನೀಲ್ ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು.

 

ಅಮರ ಮಧುರ ಪ್ರೇಮ, ಅನುಭವ, ಅನಾಮಿಕ, ಅವಳೇ ನನ್ನ ಹೆಂಡ್ತಿ, ಮಿಥಿಲೆಯ ಸೀತೆಯರು, ಅದೃಷ್ಟ ರೇಖೆ, ಲವ್ ಮಾಡಿ ನೋಡು, ಮೀಸೆ ಹೊತ್ತ ಗಂಡಸಿಗೆ ದಿಮ್ಯಾಂಡಪ್ಪೋ ಡಿಮ್ಯಾಂಡು ಸೇರಿದಂತೆ 43 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ನಟಿಸಿದ ಕೀರ್ತಿ ಇವರದು. ಇವರ ನಿರ್ದೇಶನದ ‘ಶ್’ ಚಿತ್ರವಂತೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. ಇವರ ಅಜಗಜಾಂತರ(1991) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (1997) ಎಂದು ರೀಮೇಕ್ ಮಾಡಲಾಗಿತ್ತು.

 

ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಚಿತ್ರಗಳನ್ನೂ ನಿರ್ಮಿಸಿ, ನಿರ್ದೇಶಿಸಿ, ಚಿತ್ರಕಥೆ ಬರೆದಿದ್ದರು. 43 ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ, ಅವನೇ ನನ್ನ ಗಂಡ ಮುಂತಾದ ಸಿನಿಮಾಗಳಲ್ಲಿ ಕಾಶಿನಾಥ್ ನಟನೆ ಮಾಡಿದ್ದರು. 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. ಒಂದು ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದವರು ಕಾಶೀನಾಥ್. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ. ಕಾಶೀನಾಥ್ ಅಗಲುವಿಕೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಬಹಳ ದೊಡ್ಡ ನಷ್ಟ.