ಅಬ್ಬರದ “ಭರಾಟೆ” ಅದ್ದೂರಿ ಕ್ಲೈಮ್ಯಾಕ್ಸ್…!

ರೋರಿಂಗ್ ಸ್ಟಾರ್ “ಶ್ರೀಮುರಳಿ” ಅವರ ಅಭಿನಯದಲ್ಲಿ ಮೂಡಿ ಬರ್ತಾ ಇರೋ ಭರಾಟೆ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಕುತೂಹಲ ಕೆರಳುವಂತೆ ಮಾಡಿದೆ. ಕಾರಣ ಇಷ್ಟೇ . ಚಿತ್ರದ ಕ್ಲೈಮಾಕ್ಸ್ ನ ಸಾಹಸ ದೃಶ್ಯಕ್ಕೆ10 ಜನ ವಿಲನ್ ಗಳು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಆರ್ಭಟಿಸುತ್ತಿದ್ದಾರೆ. ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ,ಅವಿನಾಶ್, ಶರತ್ ಲೋಹಿತಾಶ್ವ, ಉಗ್ರಂ ಮಂಜು ನೀನಾಸಂ ಅಶ್ವತ್ಥ್, ದೀಪಕ್, ರಾಜವಾಡೆ, ಮನಮೋಹನ್ ಕ್ಲೈಮಾಕ್ಸ್ ನಲ್ಲಿ ಅಬ್ಬರಿಸಿದ್ದಾರೆ.

ad

ಅದ್ರಲ್ಲೂ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ಮೂವರು ಸಹೋದರರು ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಇನ್ನೊಂದು ಇಂಟೆರೆಸ್ಟಿಂಗ್ ವಿಚಾರ.. ರವಿವರ್ಮ ಸಾಹಸ ಸಂಯೋಜನೆಯಲ್ಲಿ 80 ಜನ ಬಾಡಿ ಬಿಲ್ಡರ್ಸ್ ,400 ಜನ ಜೂನಿಯರ್ಸ್ ಆರ್ಟಿಸ್ಟ್ , 60 ಲಕ್ಷ ವೆಚ್ಚದ ಬೃಹತ್ ಸೆಟ್ನಲ್ಲ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ಸತತ 8 ದಿನ ಶರವೇಗದಿಂದ ನಡೆಯುತ್ತಿದೆ.

ಚೇತನ್ ಕುಮಾರ್ ಅವರ ನಿರ್ದೇಶನದ ಈ ಚಿತ್ರಕ್ಕೆ ಮೋಹನ್ ಬಿ ಕೆರೆ ಕಲಾ ನಿರ್ದೇಶನ ಮಾಡಿದ್ದಾರೆ. ಸುಪ್ರೀತ್ ಅವರ ನಿರ್ಮಾಣದಲ್ಲಿ “ಭರಾಟೆ” ಚಿತ್ರ ಅದ್ದೂರಿಯಾಗಿ ಮೂಡಿಬರಲಿದೆ.