ಸ್ಯಾಂಡಲವುಡ್​​​ನಲ್ಲಿ ಬಿಸಿ ಏರಿಸುತ್ತಿದೆ ಬಿಗ್​ಬಾಸ್​​ ಜಯಶ್ರೀ ಪೋಟೋಶೂಟ್​​! ಗ್ಲಾಮರ್​ ಡಾಲ್​ ನೋಡಿ ಹೈಕ್ಳು ಫುಲ್​ ಫಿದಾ!!

ಆಕೆ ಪ್ರೀತಿಯ ಬಲೆಯಲ್ಲಿ ಬೀಳುವ ಹುಚ್ಚು ಹಂಬಲ ಅಂತಾ ಪಡ್ಡೆಗಳ ಕನಸು ಕದ್ದ ಚಂದ್ರ ಚಕ್ಕೋರಿ. ಅವಕಾಶಗಳಿಗೆ ಬೆಳ್ಳಿ ಮಂಚ ಹತ್ತಲೇಬೇಕು ಅಂತಾ ಹೇಳಿ ಚಂದನವನದಲ್ಲಿ ಕಿಡಿ ಹಚ್ಚಿದ ಸುರಸುಂದರಿ. ಈಗ ಆ ಬೆಡಗಿ ಸಖತ್ ಹಾಟ್​ ಲುಕ್​ಗೆ ಸ್ಯಾಂಡಲ್​ವುಡ್​ ಮಂದಿ ಕಳೆದು ಹೋಗಿದ್ದಾರೆ. ಯಾರೋ ಇದು ಗ್ಲಾಮರ್ ಡಾಲ್ ಅಂತಾ ಪಡ್ಡೆ ಹೈಕ್ಳು ಪಿಳಿ ಪಿಳಿ ಕಣ್ ಬಿಡ್ತಿದ್ದಾರೆ.

ಜಯಶ್ರೀ… ಬಿಗ್​​ಬಿಸ್ ಮೂಲಕ ಖ್ಯಾತಿಗೆ ಬಂದ ಚೆಲುವೆ. ನೋಡೋದಿಕ್ಕೆ ಯಾವ ಹಿರೋಯಿನ್​ಗೂ ಕಡಿಮೆ ಇಲ್ಲ ಮುದ್ದು ಮುಖದ ಸುಂದರಿ, ಓರೆ ನೋಟದ ಮದನಾರಿ, ಕಣ್ಣಲ್ಲೇ ಕುಕ್ಕೋ ಒಯ್ಯಾರಿ..ಗಾಂಧಿನಗರದ ಮಂದಿಗೆ ಉಪ್ಪು, ಹುಳಿ, ಕಾರ ತಿನ್ನಿಸಿದ್ದ ಈ ನಟಿ, ಶಿರಾಡಿ ಘಾಟ್​ನಲ್ಲೂ ಜರ್ನಿ ಮಾಡಿದ್ರು. ಈಗ ನನಗೆ ಕನ್ನಡ ಗೊತ್ತಿಲ್ಲ ಅಂತಾ ತೆರೆಮೇಲೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ. ಒಟ್ನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಬ್ಯಸುಯಾಗ್ತಿರೋ ನಟಿ.

ಸ್ಯಾಂಡಲ್​ವುಡ್​ ಮಂದಿ ಈ ಬೆಡಗಿಯನ್ನ ಕ್ಯೂಟ್ ಗರ್ಲ್ ಅಂತಷ್ಟೇ ಕರೆಯುತಿತ್ತು. ಆದ್ರೆ ನಾನು ಬೋಲ್ಡ್ ಪಾತ್ರಕ್ಕೂ ಸೈ ಅಂತಾ ಹೇಳೋದಿಕ್ಕೆ ಜಯಶ್ರೀ ಫೋಟೋಶೂಟ್ ಮಾಡಿಸಿದ್ದಾರೆ. ಈ ಹಾಟ್ ಫೋಟೋಶೂಟ್ ನೋಡಿದ ಗಂಡ್ ಹೈಕ್ಳು ಸಖತ್ ಹಾಟ್ ಮಗ ಈ ಸುಂದ್ರಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಸ್​, ನಟಿ ಜಯಶ್ರೀ ಫೋಟೋಶೂಟ್ ಎಂದಿನಂತಿಲ್ಲ. ಈ ಬಾರಿ ಸಿಕ್ಕಾಪಟ್ಟೆ ಡಿಫರೇಂಟ್​.. ಬೆಡ್​ಶೀಟ್ ಹೊಡ್ಕೊಂಡು ಸಖತ್​ ಮತ್ತೇರಿಸೋ ಲುಕ್​ ಕೊಟ್ಟಿದ್ದಾರೆ.

ಇಷ್ಟೇ ಇಲ್ಲ, ಇನ್ನೂ ಕಣ್ತುಂಬ ನಶೆ ಚೆಲ್ಲಿದ ಬಿಗ್​ಬಾಸ್​ ಕೈ ಯಲ್ಲಿ ಸಿಗರೇಟು ಹಿಡಿದಿದ್ದಾರೆ. ಹೀಗೆ ಸಖತ್​ ಮಾಸ್​ & ಸೆಕ್ಸಿ ಲುಕ್​​ನಲ್ಲಿ ಪೋಸ್​​ ಕೊಟ್ಟಿದ್ದಾರೆ.ಮತ್ತೊಂದು ಫೋಟೋದಲ್ಲಿ ವೈಟ್ ಡ್ರೆಸ್​ ಹಾಕಿ ಸಣ್ಣನ ಕಿರು ನಗೆ ಬೀರಿರುವ ಬೋಲ್ಡ್ ಅಂಡ್​ ಹಾಟ್​ ಫೋಟೋ ನೋಡಿದ ಗಾಂಧಿನಗರ ವಾರೇ ವಾವ್ ಜಯಶ್ರೀ ಎಂದಿದೆ.

ಒಟ್ನಲ್ಲಿ ಗ್ಲಾಮರ್ ಡಾಲ್ ಜಯಶ್ರೀ ಸಖತ್​ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಯಶ್ರೀ ಹಾಟ್ ಅವತಾರ ನೋಡಿದ ಗಾಂಧಿನಗರದ ಚಿತ್ತ ಜಯಶ್ರೀಯತ್ತ ತಿರುಗಿದೆ.