ಕಿಚ್ಚ ಸುದೀಪ್ ಮತ್ತು ಶಿವಣ್ಣ ನಡುವೆ ಬಿಗ್​ ಫೈಟ್​​! ಕಾರಣ ಏನು ಗೊತ್ತಾ?!

ಕಿಚ್ಚ ಸುದೀಪ್ ಹಾಗು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಬ್ಬರು ಬೆಸ್ಟ್ ಫ್ರೆಂಡ್ಸ್. ಹೀಗಾಗಿ ಈ ಸ್ನೇಹಿತರಿಬ್ಬರು ಒಟ್ಟಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಬೇಕು ಅಂತ ವಿಲನ್ ಮೂವಿ ಮಾಡಿದ್ರು. ಆದ್ರೆ ಈಗ ಕಿಚ್ಚ ಶಿವಣ್ಣನ ಇಬ್ಬರ ಮಧ್ಯೆ ಬಿಗ್ ಫೈಟ್ ಶುರುವಾಗಿದೆ.. ಅದು ಯಾಕೆ..? ಇಬ್ಬರ ಮಧ್ಯೆ ಅಂತದ್ದೇನಾಯ್ತು..? ನೋಡೋಣ ಬನ್ನಿ.

ad


ಸುದೀಪ್ ಹಾಗು ಶಿವರಾಜ್ ಕುಮಾರ್ ಇಬ್ಬರ ಮಧ್ಯೆ ಇರೋ ಫ್ರೆಂಡ್ಶಿಪ್ ಈಗ ಕನ್ನಡದ ಯಾವ ಸ್ಟಾರ್ ಹೀರೋಗಳ ಮಧ್ಯೆಯೂ ಇಲ್ಲ. ಸುದೀಪ್ ಹಾಗು ಶಿವರಾಜ್ಕುಮಾರ್ ಫ್ಯಾಮಿಲಿ ಸ್ನೇಹಿತರು ಹೌದು.. ಹೀಗಾಗಿ ಈ ಜೋಡಿಯನ್ನ ನಿರ್ದೇಶಕ ಪ್ರೇಮ್ ಒಟ್ಟಿಗೆ ತೋರಿಸಬೇಕು ಅಂತ ವಿಲನ್ ಸಿನಿಮಾ ಮಾಡಿದ್ರು,. ವಿಲನ್ನಲ್ಲಿ ಸುದೀಪ್ ಶಿವರಾಜ್ಕುಮಾರ್ ಕಾಂಬಿನೇಷನ್ ಪ್ರೇಕ್ಷಕರಿಗೆ ಮೋಡಿ ಮಾಡಿದ್ದು ಕಣ್ಣ ಮುಂದೆಯೇ ಇದೆ.

ಹೌದು, ಕಿಚ್ಚ ಶಿವಣ್ಣನ ಮಧ್ಯೆ ಈಗ ಹೊಸ ಪೈಟೋಟಿ ಶುರುವಾಗಿದೆ. ಈ ಪೈಪೋಟಿ ಪರ್ಸನಲ್ ಫೈಲ್ನಲ್ಲಲ್ಲಾ.. ಬೆಳ್ಳಿತೆರೆ ಮೇಲೆ.. ಅದಕ್ಕೆ ಕಾರಣ ಆಗಿದ್ದು, ಶಿವಣ್ಣ ನಟಿಸ್ತಿರೋ ಇನ್ನೂ ಶೂಟಿಂಗ್ ಹಂತದಲ್ಲಿರೋ ಆನಂದ್ ಚಿತ್ರ ಹಾಗು ಕಿಚ್ಚ ಅಭಿನಯದ ಪೈಲ್ವಾನ್ ಸಿನಿಮಾ..
ಕರುನಾಡ ಹೆಬ್ಬುಲಿ ಕಿಚ್ಚ ಸುದೀಪ್ ಪೈಲ್ವಾನ್ ಆಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಪೈಲ್ವಾನ್ ಮೂವಿ ಶೂಟಿಂಗ್ ಆಲ್ ಮೋಸ್ಟ್ ಮುಗಿದು ಹೋಗಿದೆ. ಇತ್ತ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸದ್ದಿಲ್ಲದೇ ಆನಂದ್ ಅಂತ ಸಿನಿಮಾ ಮಾಡ್ತಿದ್ದಾರೆ. ಪೈಲ್ವಾನ್ ಹಾಗು ಆನಂದ್ ಚಿತ್ರಗಳು ಆಗಸ್ಟ್ನಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಮೇಲೆ ಬರ್ತಿವೆ.. ಅಲ್ಲಿಗೆ ಬೆಳ್ಳಿತೆರೆಯಲ್ಲಿ ಹಬ್ಬದ ದಿನ ಇಬ್ಬರು ಸ್ಟಾರ್ಸ್ ಕಾದಾಟ ಶುರುವಾಗುತ್ತೆ.


ಸ್ಯಾಂಡಲ್ವುಡ್ ಬಿಗ್ ಸ್ಟಾರ್ಸ್ ಸಿನಿಮಾಗಳು ಈ ವರ್ಷ ಒಂದೇ ದಿನ ಇದುವರೆಗೂ ಬಿಡುಗಡೆ ಆಗಿಲ್ಲ. ಆದ್ರೆ ಕಿಚ್ಚ ಶಿವಣ್ಣ ಈಗ ಒಂದೇ ದಿನ ತೆರೆ ಮೇಲೆ ಬರೋ ಪ್ಲಾನ್ ಮಾಡಿದ್ದಾರೆ. ಇದು ಇಬ್ಬರ ಫ್ಯಾನ್ಸ್ ಮಧ್ಯೆ ಬೇಸರ ಮೂಡಿಸಬಹುದು. ಯಾಕಂದ್ರೆ ವಿಲನ್ ಸಿನಿಮಾದ ಬಳಿಕ ಪ್ರೇಕ್ಷಕರು ಶಿವಣ್ಣ ಮತ್ತು ಸುದೀಪ್ರನ್ನ ಸ್ಪರ್ಧಿಗಳಾಗಿ ನೋಡುತ್ತಿಲ್ಲ. ಇಬ್ಬರನ್ನು ಸ್ನೇಹಿತರಂತೆ ನೋಡುತ್ತಾರೆ. ಹೀಗಿರುವಾಗ ಕಿಚ್ಚ ಶಿವಣ್ಣನ ಸಿನಿಮಾಗಳು ಒಂದೇ ದಿನ ಬಂದ್ರೆ ಹೇಗ್ ಇರುತ್ತೆ..? ಏನೇನ್ ಆಗುತ್ತೆ ಅನ್ನೋ ಲೆಕ್ಕಾಚಾರ ಗಾಂಧಿನಗರದಲ್ಲಿ ಶುರುವಾಗಿದೆ.