ಬಿಗ್ ಬಾಸ್ ಸಂಜನಾ‌ ಮದುವೆಯಂತೆ- ವರನ್ಯಾರು ಗೊತ್ತಾ?

Bigg Boss Kannada 4 Contestant Sanjana 's Marriage On 2019.

ಸ್ಯಾಂಡಲ್​ವುಡ್​ನಲ್ಲಿ ಮತ್ತೊಬ್ಬ ನಟಿ ಹಸೆಮಣೆ ಏರುತ್ತಿದ್ದಾರೆ. ಹೌದು ಬಿಗ್ ಬಾಸ್​ ಖ್ಯಾತಿಯ ಚೆಲುವೆ ಸಂಜನಾಗೆ ಕಂಕಣಕೂಡಿ ಬಂದಿದ್ದು, ತಮ್ಮ ಮೂರು ವರ್ಷದ ಸ್ನೇಹಿತ ಗೌರವ್ ರಾಯ್​ ಜೊತೆ ಸಂಜನಾ ಮುಂದಿನ ಜನವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈ ಬಗ್ಗೆ ಸ್ವತಃ ಸಂಜನಾ ಬಿಟಿವಿ ನ್ಯೂಸ್​ ಜೊತೆ ಮಾತನಾಡಿದ್ದು, 2019 ರಲ್ಲಿ ಮದುವೆ ನಡೆಯಲಿದೆ ಎಂದಿದ್ದಾರೆ.


ಸಂಜನಾ ಮತ್ತು ಗೌರವ್ ರಾಯ್ ಪರಸ್ಪರ 3 ವರ್ಷದಿಂದ ಸ್ನೇಹಿತರಾಗಿದ್ದು, ಸಂಜನಾ ಬಿಗ್​ ಬಾಸ್​ಗೆ ತೆರಳುವ ಮುನ್ನಾದಿನ ಗೌರವ್ ಸಂಜಯಗೆ ಪ್ರಪೋಸ್​ ಮಾಡಿದ್ದರಂತೆ. ತಕ್ಷಣವೇ ಸಂಜನಾ ಗ್ರೀನ್ ಸಿಗ್ನಲ್​ ಕೊಟ್ಟಿದ್ದರಂತೆ. ಆದರೇ ಬಿಗ್ ಬಾಸ್ ಮುಗಿಸಿ ಬರುವವರೆಗೂ ಗೌರವ ತನಗಾಗಿ ಕಾಯುತ್ತಾರೆ ಎನ್ನಿಸಿರಲಿಲ್ಲವಂತೆ. ಆದರೇ ಬಿಗ್ ಬಾಸ್​​ ಮುಗಿಸಿ ವಾಪಸ ಬರುವರೆಗೂ ಗೌರವ್ ತನಗಾಗಿ ನೂರಾರು ಮೆಸೆಜ್ ಗಳ ಜೊತೆ ಕಾಯುತ್ತಿದ್ದರಂತೆ. ಇದನ್ನು ನೋಡಿ ಸಂಜನಾ ಖುಷಿಯಿಂದ ಮದುವೆಗೆ ಸಿದ್ಧವಾಗಿದ್ದಾರೆ.

ಇನ್ನು ಸಂಜನಾ-ಗೌರವ್ ರಾಯ್ ಮದುವೆಗೆ ಪರಸ್ಪರ ಎರಡು ಕುಟುಂಬದ ಹಿರಿಯರು ಒಪ್ಪಿಕೊಂಡಿದ್ದು, ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ 2019 ರಲ್ಲಿ ಮತ್ತೊಂದು ಅದ್ದೂರಿ ಕಲ್ಯಾಣಕ್ಕೆ ಸ್ಯಾಂಡಲವುಡ್​ ಸಜ್ಜಾಗಿದೆ. ಇನ್ನು ಈ ಹಿಂದೆ ಬಿಗ್​ ಬಾಸ್​​ ದೃಶ್ಯಾವಳಿ ಗಮನಿಸಿ ಸಂಜನಾ ಬಿಗ್​ಬಾಸ್​​ನ ಪ್ರತಿ ಸ್ಪರ್ಧಿಯಾಗಿದ್ದ ಭುವನ್​​ರನ್ನೇ ವರಿಸುತ್ತಾರೆ ಎಂದು ಮಾತು ಕೂಡ ಕೇಳಿಬಂದಿತ್ತು. ಇದೀಗ ಈ ಎಲ್ಲ ವಿವಾದಗಳಿಗೆ ತೆರೆ ಬಿದ್ದಂತಾಗಿದ್ದು, ಸಂಜನಾ ತಮ್ಮ ಬಹುಕಾಲದ ಗೆಳೆಯನ ಜೊತೆ ಹೊಸಜೀವನಕ್ಕೆ ಕಾಲಿರಿಸಲಿದ್ದಾರೆ.