ಮತ್ತೊಂದು ಲಗಾನ್ ಸಿನೇಮಾ !! ಇದು ಕಪಿಲ್ ದೇವ್, ಕಿರ್ಮಾನಿ- ವಿಶ್ವಕಪ್ ಕಥೆ !!

1983 ರಲ್ಲಿ ಭಾರತ ವಿಶ್ವಕಪ್​​ ಗೆದ್ದಿದ್ದು ಸದಾಕಾಲ ಭಾರತೀಯ ಮೈನವಿರೇಳಿಸುವ ಸಂಗತಿ. ಇಂದಿಗೂ ಕ್ರಿಕೇಟ್​​ ಪ್ರಿಯರು ಆ ಕ್ಷಣವನ್ನು ಮೆಲುಕು ಹಾಕಿ ಸಂಭ್ರಮಿಸುತ್ತಾರೆ. ಸಧ್ಯದಲ್ಲೇ 1983 ರ ವಿಶ್ವಕಪ್​​ನ ರೋಚಕ ಕ್ಷಣಗಳು ಹಾಗೂ ಕಪಿಲ್ ದೇವ್ ಅವರ ಸಾಧನೆ ತೆರೆಯ ಮೇಲೆ ಬರಲಿದೆ. ಇದರಲ್ಲಿ ಕನ್ನಡಿಗ ವಿಕೇಟ್ ಕೀಪರ್ ಸೈಯ್ಯದ್ ಕಿರ್ಮಾನಿ ತಮ್ಮ ಪಾತ್ರವನ್ನು ತಾವೆ ನಿರ್ವಹಿಸಲಿದ್ದು, ಸ್ವತಃ ಅವರೆ ಈ ವಿಚಾರ ಖಚಿತಪಡಿಸಿದ್ದಾರೆ.

ಬಾಲಿವುಡ್​​ನ ನಿರ್ದೇಶಕ ಕಬೀರ್ ಖಾನ್ 1983 ರಲ್ಲಿ ಭಾರತ ವಿಶ್ವಕಪ್ ಗೆದ್ದ ಅವಿಸ್ಮರಣೀಯ ಕ್ಷಣವನ್ನು ತೆರೆ ಮೇಲೆ ತರಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮೂವಿ ಲಾಂಚ್​ ಕೂಡಾ ಆಗಿದೆ. ಆದರೇ ಇನ್ನು ಚಿತ್ರದ ಹೆಸರು ಫೈನಲ್​ ಆಗಿಲ್ಲ. ಕಪಿಲ್ ದೇವ್ ಬಯೋಪಿಕ್​ ರೀತಿಯಲ್ಲಿ ಚಿತ್ರ ಮೂಡಿಬರಲಿದೆ ಎನ್ನಲಾಗಿದೆ.

ಅಂದು ತಂಡದ ನಾಯಕರಾಗಿದ್ದ ಕಪಿಲ್ ದೇವ ಪಾತ್ರವನ್ನು ರಣವೀರ್ ಸಿಂಗ್ ನಿರ್ವಹಿಸಲಿದ್ದಾರೆ. ಅಂದು ಗೆಲುವಿನ ತಂಡದಲ್ಲಿದ್ದ ಕನ್ನಡಿಗ ವಿಕೇಟ್​ ಕೀಪರ್ ಕಿರ್ಮಾನಿ ಪಾತ್ರವನ್ನು ಸ್ವತಃ ತಾವೆ ಅಭಿನಯಿಸಲಿದ್ದಾರೆ. ಈ ಬಗ್ಗೆ ಸ್ವತಃ ಕಿರ್ಮಾನಿಯವರೇ ಮಾಹಿತಿ ನೀಡಿದ್ದು, ನನ್ನ ಪಾತ್ರವನ್ನು ನಾನೇ ಮಾಡಲಿದ್ದೇನೆ. ಈ ಬಗ್ಗೆ ಈಗಾಗಲೇ ನಿರ್ದೇಶಕರ ಜೊತೆ ಮಾತುಕತೆ ನಡೆದಿದೆ. ನನಗೂ ಸಿನಿಮಾ ರಂಗಕ್ಕೂ ನಂಟಿದೆ ಹೀಗಾಗಿ ನನ್ನ ಪಾತ್ರ ನಾನೇ ಅಭಿನಯಿಸಲಿದ್ದೇನೆ. ಈಗಾಗಲೇ ಉಳಿದ ಪಾತ್ರಗಳಿಗಾಗಿ ಆಯ್ಕೆ ಆರಂಭವಾಗಿದ್ದು, ಸಧ್ಯದಲ್ಲೇ ಶೂಟಿಂಗ್ ಕೂಡ ಆರಂಭವಾಗಲಿದೆ. 1983 ರ ವಿಶ್ವಕಪ್​​ ಬಳಿಕವೇ ದೇಶದಲ್ಲಿ ಕ್ರಿಕೆಟ್​ ಹೆಚ್ಚು ಜನಪ್ರಿಯವಾಗಿದ್ದು, ಈ ಬಗ್ಗೆ ಚಿತ್ರ ನಿರ್ಮಾಣವಾಗ್ತಿರೋದು ಖುಷಿ ತಂದಿದೆ ಎಂದಿದ್ದಾರೆ.