ಅಪ್ಪ-ಮಗನ ಎಂಟ್ರಿಗೆ ಹೇಗಿದೆ ‘ಕ್ರೇಜಿ’ ತಯಾರಿ..?

ಕೆಲ ತಿಂಗಳ ಹಿಂದೆ ಪ್ರದೀಪ್ ವರ್ಮ ಊರ್ವಿ ಅನ್ನೋ ಪ್ರಯೋಗಾತ್ಮಕ ಸಿನಿಮಾ ಮಾಡಿದ್ರು. ಈ ಚಿತ್ರ ಮೂಲಕ ಸಮಾಜದಲ್ಲಿ ಹೆಣ್ಣಿನ ಮೇಲಾಗುತ್ತಿರೋ ಶೋಷಣೆಯನ್ನ ಕಮರ್ಶಿಯಲ್​​ ಎಲಿಮೆಂಟ್ಸ್​​ ಮೂಲಕ ತೆರೆದಿಟ್ಟಿದ್ರು. ಈ ಚಿತ್ರಕ್ಕೆ ಪ್ರೇಕ್ಷಕನ ಮೆಚ್ಚುಗೆ ಸಿಕ್ಕಿತ್ತು. ಇದೀಗ ಡೈರೆಕ್ಟರ್ ಪ್ರದೀಪ್​​ ವರ್ಮಾ ಹೊಸ ಸಾಹಸಕ್ಕೆ ಕೈ ಹಾಕಲು ಸಜ್ಜಾಗಿದ್ದಾರೆ.
ಹೌದು… ಪ್ರದೀಪ್​ ನಿರ್ದೇಶನದ ಹೊಸ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್​​ ಹಾಗು ಮನೋರಂಜನ್​ ತೆರೆಹಂಚಿಕೊಳ್ಳಲಿದ್ದಾರೆ. ಡಾಕ್ಟರ್ ರಾಜ್​ಕುಮಾರ್ ​ ಫ್ಯಾಮಿಲಿ ಬಿಟ್ರೆ ಅಪ್ಪ – ಮಗ ಒಂದಾಗಿ ನಟಿಸ್ತಿರೋದು ರವಿಚಂದ್ರನ್​ ಫ್ಯಾಮಿಲಿಯಲ್ಲೇ

adರವಿಚಂದ್ರನ್ ಹಾಗು ಮನು ಜೊತೆಯಾಗಿ ನಟಿಸ್ತಿರೋ ಸಿನಿಮಾ ಸ್ಟೋರಿ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಇದು ಕಂಪ್ಲೀಟ್​​ ಮ್ಯೂಸಿಕಲ್​ ಸಿನಿಮಾವಂತೆ. ಇಬ್ಬರು ಸಂಗೀತಗಾರರ ಮೇಲೆ ಕತೆ ಹೆಣೆಯಾಲಿಗಿದೆ. ಅಪ್ಪ-ಮಗನ ರಿಲೆಷನ್ ಶಿಫ್​ ಮತ್ತು ಅವ್ರ ಮಧ್ಯೆ ನಡೆಯೋ​ ಸಂಘರ್ಷದ ಕಥೆ ಚಿತ್ರದಲ್ಲಿರಲಿದೆ. ಈ ಕತೆಯನ್ನ ಮನು ಹಾಗು ರವಿಚಂದ್ರನ್ ಒಪ್ಪಿಕೊಂಡಿದ್ದು, ನಿರ್ದೇಶಕ ಪ್ರದೀಪ್ ವರ್ಮಾ ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ತ್ದಾರೆ. ಆ ನಂತ್ರ ಇನ್ನುಳಿದ ಪಾತ್ರಗಳ ಬಗ್ಗೆ ಮಾಹಿತಿ ಸಿಗಲಿದೆ.