ಪ್ರೇಮಬರಹಕ್ಕಾಗಿ ಚಾಲೆಂಜಿಂಗ್ ಸ್ಟಾರ್ ಸಖತ್ ಸ್ಟೆಪ್!!

Challenging star Darshan and Sarja family danced in 'Prema Baraha' Film.
Challenging star Darshan and Sarja family danced in 'Prema Baraha' Film.

ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟ್ ಟೆಡ್ ಸಿನಿಮಾ ಪ್ರೇಮ ಬರಹ ಚಿತ್ರದ ಕೊನೆಯ ಹಾಡಿನಶೂಟಿಂಗ್ ಭರದಿಂದ ಸಾಗ್ತಿದೆ.ಬೆಂಗಳೂರಿನ ಓಲ್ಡ್ ಎರ್ಪೋರ್ಟ್ ರೋಡಿನಲ್ಲಿರೋ ಆಂಜನೇಯ ದೇವಸ್ಥಾನದ ರಸ್ತೆಯ ಬಳಿ ಈ ಸ್ಪೆಶಲ್ ಸಾಂಗ್ ಚಿತ್ರೀಕರಣ ನಡಿತಿದೆ.

 

ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಸ್ಟ್ ರೋಲ್ ನಲ್ಲಿ ಸ್ಟೆಪ್ ಹಾಕಿದ್ದಾರೆ.ವಿಶೇಷ ಅಂದ್ರೆ ದಚ್ಚು ಜೊತೆಗೆ ನಟ ಚಿರಂಜೀವಿ,ಧ್ರುವ ಸರ್ಜಾ,ಅರ್ಜುನ್ ಸರ್ಜಾ ಕೂಡ ಸಾತ್ ನೀಡಿದ್ದಾರೆ.

ಆಕ್ಷ್ಯನ್​ ಕಿಂಗ್​ ಅರ್ಜುನ ನಿರ್ದೇಶನದ ಈ ಚಿತ್ರದಲ್ಲಿ  ನಟ ದರ್ಶನ ಗೆಸ್ಟ್​​ ರೋಲ್​ನಲ್ಲಿ ಅಭಿನಯಿಸಿದ್ದು, ಕೇಸರಿ ಡ್ರೆಸ್​​ನಲ್ಲಿ ಮಾಸ್​ ಹಾಡಿಗೆ  ಚಾಲೆಜಿಂಗ್​ ಸ್ಟಾರ್​​ ದರ್ಶನ  ಸಖತ್​ ಸ್ಟೆಪ್​ ಹಾಕಿದರು.

ಇನ್ನು ಈ ಚಿತ್ರದಲ್ಲಿ  ನಟ ಚಿರಂಜೀವಿ,ಧ್ರುವ ಸರ್ಜಾ,ಅರ್ಜುನ್ ಸರ್ಜಾ ಕೂಡ ಅಭಿನಯಿಸಿದ್ದು, ಅಲ್ಲದೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ನಾಯಕಿಯಾಗಿ ಅಭಿನಯಿಸ್ತಿರೋ ಚೊಚ್ಚಲ ಚಿತ್ರ ಇದಾಗಿದೆ. ಬಿಗ್ ಬಾಸ್ ಖ್ಯಾತಿಯ ಚಂದನ್ ನಾಯಕನಾಗಿ ಪ್ರೇಮ ಬರಹ ಅದೃಷ್ಟ ಪರೀಕ್ಷೆ ಮಾಡ್ತಿದ್ದಾರೆ. ದರ್ಶನ ನಟಿಸಿರೋ ಹಾಡು ಚಿತ್ರದ ಹೈಲೈಟ್​​ ಆಗಲಿದೆ.