ಯಜಮಾನ ಸಿನಿಮಾ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್

ಯಜಮಾನ ಚಿತ್ರ ತಂಡದಿಂದ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ..

ಯಜಮಾನ ಸಿನಿಮಾ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡ ದರ್ಶನ್, ವಿದ್ಯಾರ್ಥಿಗಳಿಗೆ ಪರೀಕ್ಷೆ, ಕ್ರಿಕೆಟ್ ಪಂದ್ಯ ಇದ್ದರೂ ಸಿನಿಮಾ ಸಕ್ಸಸ್ ಆಗಿದೆ ಎಂದು ಹೇಳಿದರು ನಂತರ ಮಂಡ್ಯ ಚುನಾವಣೆ ಪ್ರಚಾರಕ್ಕೆ ಬರ್ತಿರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ದರ್ಶನ್, ‘ಇದು ಕೇವಲ ಯಜಮಾನ ಚಿತ್ರದ ಸುದ್ದಿಗೋಷ್ಟಿ ,ಯಜಮಾನ ಸಿನಿಮಾ ಬಗ್ಗೆ ಏನಾದರೂ ಕೇಳಿ ಹೇಳ್ತಿನಿ , ಬೇರೆ ವಿಚಾರಗಳನ್ನ ಬೇರೆ ಕಡೆ ನಾನು ಮಾತನಾಡುತ್ತೇನೆ’ ಎಂದು ಹೇಳಿದರು.

 

ನಂತರದಲ್ಲಿ ಯಜಮಾನ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಕೇಳುತ್ತಿದ್ದಂತೆ ಗರಂ ಆದ ನಟ ದರ್ಶನ್ ‘ಸಿನಿಮಾ ಕಲೆಕ್ಷನ್ ಬಗ್ಗೆ ಕಟ್ಟಿಕೊಂಡ ಏನ್ ಮಾಡ್ತಿರಾ ನಿಮ್ಗೆ ಅದ್ರಿಂದ ಉಪಯೋಗ ಆಗೋದಾದ್ರೆ ಹೇಳಿ ಪೂರ್ತಿ ದಾಖಲೆ ಕೊಡ್ತಿನಿ, ಅಷ್ಟೂ ಬೇಕಂದ್ರೆ ನೀವೇ ಎಷ್ಟು ಥಿಯೇಟರ್ ಗಳಲ್ಲಿ ಚಿತ್ರ ಇದೆ ,ಒಂದು ಶೋಗೆ ಎಷ್ಟು ಕಲೇಕ್ಷನ್ ಆಗುತ್ತೆ ,ಹಾಗೇ ದಿನಕ್ಕೆ ಎಷ್ಟು ಕಲೆಕ್ಷನ್ ಆಗುತ್ತೆ ಅಂತ ಲೆಕ್ಕ ಹಾಕಿ’ ಎಂದೆಲ್ಲಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಇನ್ನೂ ದರ್ಶನ್ ನಟನೆಗೆ ಚಿತ್ರವೊಂದಕ್ಕೆ ೧೯ ಕೋಟಿ ಸಂಭಾವನೆ ಆಫರ್ ಬಂದಿದೆ ಎನ್ನುವ ವಿಚಾರಕ್ಕೆ ಉತ್ತರಿಸಿದ ದರ್ಶನ್ , ‘ಯಾರು ಸಾರ್ ನಿಮಗೆ ಹೇಳಿದ್ದು ಹಾಗಿದ್ರೆ ಕರ್ಕೊಂಡು ಬನ್ನಿ ಸಾರ್ ಬೆಳಿಗ್ಗೇನೇ ಸಿನಿಮಾ ಮಾಡ್ತಿನಿ, ನೀವು ಹೀಗೆ ಹೇಳಿ ಹೇಳಿ ಐಟಿ ಯವರು ನಮ್ಮನ್ನ ಲೆಕ್ಕ ಕೇಳ್ತಾರೆ ಅವರಿಗೆ ಬೇರೆ ಭಾಷೆ ಬರೋದಿಲ್ಲ. ದರ್ಶನ್ ,ತುಮಾರೆ ಪಾಸ್ ಇತನಾ ಪೈಸಾಯೇ ಅಂತ ಕೇಳ್ತಾರೆ..’ ಎಂದು ಪ್ರತಿಕ್ರಿಯಿಸಿದರು