ಇಬ್ಬರು ಚೆಲುವೆಯರ ಜೊತೆ ದರ್ಶನ್ ರೊಮ್ಯಾನ್ಸ್ !! ವೈರಲ್ ಆದ “ಯಜಮಾನ”ನ ವಿಡಿಯೋ !!

Challenging Star Darshan's Yajamana Movie Details.

ಗಾಂಧೀನಗರದಲ್ಲಿ ಭರ್ತಿ ಕುತೂಹಲ ಹುಟ್ಟಿಸಿರೋ ಸಿನಿಮಾ ಅಂದ್ರೆ ದರ್ಶನ್ ಅಭಿನಯದ 51ನೇ ಪ್ರಾಜೆಕ್ಟ್.

ಸಿನಿಮಾಕ್ಕೆ ಈಗಾಗ್ಲೇ ಯಜಮಾನ ಅನ್ನೋ ಟೈಟಲ್​​ ಫಿಕ್ಸ್​ ಆಗಿದ್ದು ನಿಮ್ಗೂ ಗೊತ್ತಿರುತ್ತೆ. ಈ ಟೈಟಲ್​ ಫಿಕ್ಸ್​ ಆಗುತ್ತಿದ್ದಂತೆ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿತ್ತು. ಯಜಮಾನ ಸ್ಯಾಂಡಲ್​​ವುಡ್​ನ ಸೂಪರ್​ ಹಿಟ್​ ಸಿನಿಮಾ… ಒಡಹುಟ್ಟಿದವರ ಮೇಲೆ ಅಣ್ಣನೊಬ್ಬನ ಪ್ರೀತಿಯನ್ನು ಜವಾಬ್ದಾರಿಯನ್ನು, ತ್ಯಾಗವನ್ನು ಕನ್ನಡದ ಪ್ರೇಕ್ಷಕರ ಮನೆ ಮನ ತಲುಪಿಸಿದ ಸಿನಿಮಾ ಯಜಮಾನ. ಜನ ಹುಚ್ಚೆದ್ದು ನೋಡಿದ ಸಿನಿಮಾ ಇದೆ. ಹಾಗಾಗಿ ಸ್ಯಾಂಡಲ್​​ವುಡ್​​​ನಲ್ಲಿ ಯಜಮಾನ ಅನ್ನುವ ಟೈಟಲ್​ಗೆ ತನ್ನದೇ ಆದ ವ್ಯಾಲ್ಯು ಇದೆ.

ಒಂದೆಡೆ ಚಿತ್ರಕ್ಕೆ ಯಜಮಾನ ಅನ್ನೋ ಹಿಟ್​ ಟೈಟಲ್​ ಇದ್ರೆ ಮತ್ತೊಂದೆಡೆ ಈ ಚಿತ್ರದಲ್ಲಿ ದಚ್ಚು ಇಬ್ಬರು ಚೆಲುವೆಯರ ಜೊತೆ ಡ್ಯುಯೆಟ್​ ಹಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್​​ ಸಿನಿಮಾದ ನಾಯಕಿಯರು. ಯಜಮಾನ ಸಿನಿಮಾದಲ್ಲಿ ಮೂರು ಮಂದಿ ಖಡಕ್​ ವಿಲನ್​ಗಳು ದರ್ಶನ್​ ವಿರುದ್ಧ ಅಬ್ಬರಿಸಲಿದ್ದಾರೆ. ರೋಗ್’ ಸಿನಿಮಾದಲ್ಲಿ ಸೈಕೋ ಆಗಿ ನಟಿಸಿದ್ದ ಅನೂಪ್ ಸಿಂಗ್ ಠಾಕೂರ್ ಚಿತ್ರದಲ್ಲಿ ದರ್ಶನ್​​ಗೆ ಎದುರಾಳಿ.

 

ಅನೂಪ್ ಸಿಂಗ್ ಠಾಕೂರ್ ಜೊತೆಗೆ ರವಿಶಂಕರ್ ಹಾಗೂ ಧನಂಜಯ್ ಕೂಡ ದರ್ಶನ್ ಗೆ ಸವಾಲು ಹಾಕಲಿದ್ದಾರೆ. ಯಜಮಾನ ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಬರ್ತಾನೆ ಇದೆ. ಇದೀಗ ಮತ್ತೊಂದು ನ್ಯೂಸ್​ ಬಂದಿದೆ. ಅದೇನಂದ್ರೆ ಈ ಸಿನಿಮಾದಲ್ಲಿ ಸ್ಯಾಂಡಲ್​​ವುಡ್​ನ ಮೂವರು ಸ್ಟಾರ್ಸ್​ ಗೆಸ್ಟ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಮತ್ಯಾರು ಅಲ್ಲ… ಡೈನಾಮಿಕ್​​ ಪ್ರಿನ್ಸ್​​ ಪ್ರಜ್ವಲ್​ ದೇವರಾಜ್​​, ಲವ್ಲಿ ಸ್ಟಾರ್​ ಪ್ರೇಮ್​​ ಮತ್ತು ದೂದ್​ ಫೇಡಾ ದಿಗಂತ್​. ಪ್ರಜ್ವಲ್​ ದೇವರಾಜ್​​, ಪ್ರೇಮ್​​ ಮತ್ತು ದಿಗಂತ್​ ನಟಿಸಿದ್ದ ಚೌಕ ಚಿತ್ರದಲ್ಲಿ ದರ್ಶನ್​ ಗೆಸ್ಟ್​ ರೋಲ್​​ನಲ್ಲಿ ಕಾಣಿಸಿಕೊಂಡಿದ್ದು ನಿಮ್ಗೂ ನೆನಪಿರುತ್ತೆ. ಈ ಸಿನಿಮಾ ಭರ್ಜರಿ ಹಿಟ್​ ಆಗಿತ್ತು.

ಇದೀಗ ದರ್ಶನ್​ ಸಿನಿಮಾದಲ್ಲಿ ಈ ಚೌಕ ಸ್ಟಾರ್ಸ್​ ಗೆಸ್ಟ್​ ರೋಲ್​ನಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿ ಇದೆ. ಆದ್ರೆ ಸಿನಿಮಾ ತಂಡ ಅಫೀಷಿಯಲ್​ ಆಗಿ ಏನನ್ನೂ ಹೇಳಿಲ್ಲ. ಅಂದಹಾಗೆ ಯಜಮಾನ ಈಗ ಶೂಟಿಂಗ್​ ಹಂತದಲ್ಲಿದೆ. ಮೈಸೂರಿನಲ್ಲಿ ಬೃಹತ್ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡಲಾಗ್ತಿದೆ. ಪಿ ಕುಮಾರ್​​ ನಿರ್ದೇಶನದ ಈ ಚಿತ್ರಕ್ಕೆ ನಿರ್ಮಾಪಕರಾದ ಬಿ ಸುರೇಶ್​​, ಶೈಲಜಾನಾಗ್ ದಂಪತಿ ಹಣ ಹಾಕಿದ್ದಾರೆ. ಒಟ್ನಲ್ಲಿ ಯಜಮಾನ ಚಿತ್ರ ಇನ್ನಿಲ್ಲದ ಹೈಪ್​ ಕ್ರಿಯೇಟ್​ ಮಾಡ್ತಿದೆ.