ಹೊಸ ವರ್ಷಕ್ಕೂ ಮೊದ್ಲೇ ಗಣೇಶ್ ‘ಚಮಕ್​’ಶುರು..!

Chamak Movie Release On 29th December.
Chamak Movie Release On 29th December.

ಗಣೇಶ್​​ ಸಿನಿಮಾ ಅಂದ್ಮೇಲೆ ಅಲ್ಲೊಂದಿಷ್ಟ ತಮಾಷೆ, ಸ್ಟೈಲೀಶ್​​ ಫೈಟ್​​​, ಒಂದಿಷ್ಟು ಕಣ್ಣೀರು ಎಲ್ಲವೂ ಇರುತ್ತೆ. ಹೀಗೀಗಾಗಿ ಗಣಿ ಸಿನಿಮಾ ಅಂದ್ರೆ ಪ್ರೇಕ್ಷರಿಗೂ ಸಖತ್​ ಇಷ್ಟ ಆಗೋದಂತು ಗ್ಯಾರಂಟಿ.. ಇತ್ತೀಚೆಗೆ ಗೋಲ್ಡನ್​​ ಸ್ಟಾರ್​​​ ಗಣೇಶ್​​ 10 ವರ್ಷಗಳ ಗ್ಯಾಪ್ ತಗೊಂಡು​​ ಯೋಗರಾಜ್​ ಭಟ್​​ ಜೊತೆ ಸೇರಿ ‘ಮುಗುಳು ನಗೆ’ ಬೀರಿ ಗೆದ್ದಾಗಿದೆ. ಇದೀಗ ಗಣಿ ಚಮಕ್ ಕೊಡೋದಕ್ಕೆ ಸಜ್ಜಾಗಿದ್ದಾರೆ. ಹೌದು ಗೋಲ್ಡನ್ ಸ್ಟಾರ್ ಚಮಕ್ಅನ್ನೋ ಅಟ್ರ್ಯಾಕ್ಟೀವ್​​ ಟೈಟಲ್​ ಸಿನಿಮಾದಲ್ಲಿ ನಟಿಸ್ತಿದ್ದಾರೆ.

 


ಅಂದಹಾಗೆ ಈ ಚಿತ್ರದಲ್ಲಿ ಗಣಿ ಡಾಕ್ಟರ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಟನ್​ ಸ್ಟಾರ್​​ ಡಾಕ್ಟರ್​ ಅವತಾರದಲ್ಲಿ ಕಾಣಿಸಿಕೊಳ್ತಿರೋದು ಇದೇ ಮೊದಲು. ಡಾಕ್ಟರ್​​ ಗಣಿಗೆ ಇಲ್ಲಿ ಕಿರಿಕ್​​​ ಬ್ಯೂಟಿ ರಶ್ಮಿಕಾ ಜೋಡಿ. ರಶ್ಮಿಕಾ ಈ ಚಿತ್ರದಲ್ಲಿ ಕಂಪ್ಲೀಟ್ ಟ್ರೆಡಿಶನಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಒಳ್ಳೆಯ ಗಂಡ ಸಿಗ್ಲಿ ಅಂತ ಯಾವಾಗ್ಲೂ ವೃತ, ಉರುಳುಸೇವೆ ಮಾಡ್ಕೊಂಡಿರೋ ಸಂಪ್ರದಾಯಸ್ಥ ಮನೆ ಹುಡುಗಿ ಆಕೆ….

ಅದ್ಬುತವಾದ ಕಥೆಯಲ್ಲಿ ಪಾತ್ರಧಾರಿಗಳ ಜೊತೆಗೆ ದೇವ್ರು ಕೂಡ ಇಲ್ಲಿ ಹೇಗೆ ಚಮಕ್ ಕೊಡ್ತಾನೆ ಅನ್ನೋದು ‘ಚಮಕ್’ ಕಹಾನಿಯ​​ ಇಂಟ್ರೆಸ್ಟಿಂಗ್ ಪಾಯಿಂಟ್…ಈಗಾಗ್ಲೇ ಸಿನಿಮಾದ ಟೀಸರ್​​ ಹಾಡೂ​ ಕಣ್ಣುಕುಕ್ಕಿದೆ.. ಹೀಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ಚಮಕ್​ ಯೂತ್​ಫುಲ್​​ ಸಿನಿಮಾ ಅನ್ನೋದು ಹಾಡು, ಮೇಕಿಂಗ್ ನೋಡಿದರೇನೆ ಗೊತ್ತಾಗುತ್ತೆ. ನಿರ್ದೇಶಕ ಸಿಂಪಲ್ ಸುನಿ ಈ ಚಿತ್ರವನ್ನ ತುಂಬಾ ಮುತ್ತುವರ್ಜಿ ವಹಿಸಿ ಮಾಡಿದ್ದಾರೆ. ಜೂರ ಸ್ಯಾಂಡಿ ಚಂದದ ಮ್ಯೂಸಿಕ್​​ ಕೊಟ್ಟಿದ್ದಾರೆ. ಟಿ ಆರ್​ ಚಂದ್ರಶೇಖರ್​ ನಿರ್ಮಾಣದ ‘ಚಮಕ್’ ಸಿನಿಮಾವನ್ನು ತುಂಬಾ ಅದ್ದೂರಿಯಾಗಿ ಸೆರೆ ಹಿಡಿಯಲಾಗಿದೆ. ಇನ್ನೂ ‘ಚಮಕ್’ ಈ ವರ್ಷದ ಕೊನೆಯ ಸಿನಿಮಾವಾಗಿ ಅಂದ್ರೆ ಡಿಸೆಂಬರ್​ 29ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ​ ​