ಚಾಲೆಂಜಿಂಗ್ ಸ್ಟಾರ್ ದರ್ಶನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ನಯನಾ!

Comedy Kiladigalu Runner Up Nayana Entry to Sandalwood.
Comedy Kiladigalu Runner Up Nayana Entry to Sandalwood.

ಖಾಸಗಿ ವಾಹಿನಿಯ ಕಾಮಿಡಿ ಶೋ ಮೂಲಕ ಕರ್ನಾಟಕದ ಮನಗೆದ್ದ ಪ್ರತಿಭಾವಂತ ಅಭಿನೇತ್ರಿ ಉತ್ತರ ಕರ್ನಾಟಕದ ಹುಡುಗಿ ನಯನಾ ಹಿರಿತೆರೆಯಲ್ಲಿ ಅದ್ದೂರಿ ಎಂಟ್ರಿ ನೀಡಲಿದ್ದಾರೆ.

 

ಹೌದು ನಯನಾಗೆ ಬಾಕ್ಸ್ ಆಫೀಸ್ ಸುಲ್ತಾನ್​, ಚಾಲೆಂಜಿಂಗ್​ ಸ್ಟಾರ್ ದರ್ಶನ ಜೊತೆ ನಟಿಸುವ ಅವಕಾಶವೊಂದು ಒದಗಿ ಬಂದಿದ್ದು, ಇದನ್ನು ಸ್ವತಃ ನಯನಾ ಖಚಿತ ಪಡಿಸಿದ್ದಾರೆ.  ಇತ್ತೀಚಿಗಷ್ಟೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅವರ 51 ನೇ ಚಿತ್ರ ಯಜಮಾನ. ಈಗಾಗಲೇ ಈ ಚಿತ್ರದ ಮುಹೂರ್ತ ಕೂಡ ನಡೆದಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ.

 

 

 

ಇದೇ ಚಿತ್ರದಲ್ಲಿ ನಯನಾ ಕೂಡ ನಟಿಸಲಿದ್ದು, ಇದನ್ನು ಸ್ವತಃ ನಯನಾ ತಮ್ಮ ಟ್ವಿಟರ್​​ ಅಕೌಂಟ್​ನಲ್ಲಿ ಹಂಚಿಕೊಂಡಿದ್ದಾರೆ.
ದರ್ಶನ ಹುಟ್ಟುಹಬ್ಬಕ್ಕೆ ಶುಭಕೋರಿರುವ ನಯನಾ ಹ್ಯಾಪಿ ಬರ್ತಡೇ ಡಿ ಬಾಸ್​, ಲವ್ ಯೂ ಅಣ್ಣಾ , ಮೈಫರ್ಸ್ಟ್​​ ಮೂವಿ ವಿತ್​ ಡಿ ಬಾಸ್​ ಎಂದು ಟ್ವಿಟ್​ ಮಾಡಿದ್ದಾಳೆ. ಈಗಾಗಲೇ ನಯನಾ ನಟಿಸಿರುವ ಜಂತರ್​ ಚಿತ್ರ ತೆರೆಕಂಡಿದ್ದು, ಇದೀಗ ನಯನಾ ದರ್ಶನ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ವ್ಯಕ್ತಪಡಿಸಿದ್ದಾರೆ.