ಮತ್ತೆ ತೆರೆಗೆ ಬರ್ತಿದೆ ಹುಚ್ಚ-2..!!

Darling Krishna's Huchcha-2 Film Release On Soon.

17 ವರ್ಷಗಳ ಹಿಂದೆ ತೆರೆಕಂಡ ಭರ್ಜರಿ ಹಿಟ್​ ಆದ ಹುಚ್ಚ ಸಿನಿಮಾ ನಿಮ್ಗೂ ನೆನಪಿರಬಹುದು.

ಈ ಸಿನಿಮಾದ ನಂತ್ರವೇ ಸುದೀಪ್​​​ ಹೆಸರು ಕಿಚ್ಚ ಅಂತ ಫೇಮಸ್​ ಆಗಿದ್ದು. ಅಂದಹಾಗೆ ಇದೀಗ ಆ ಸಿನಿಮಾದ ವಿಚಾರ ಯಾಕೆ ಅಂದ್ರೆ, ಸ್ಯಾಂಡಲ್​ವುಡ್​ನಲ್ಲಿ ಹುಚ್ಚ 2 ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಡಾರ್ಲಿಂಗ್​ ಕೃಷ್ಣ ಅಭಿನಯದ ಹುಚ್ಚ 2 ಸಿನಿಮಾದ ಟ್ರೇಲರ್​ ಇಲ್ಲಿದೆ..ಹುಚ್ಚ…ಈ ಹೆಸರು ಕೇಳಿದ್ರೆ ತಟ್ಟಂತ ನೆನಪಾಗೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..ಯಾಕಂದ್ರೆ ಹುಚ್ಚ 17 ವರ್ಷಗಳ ಹಿಂದೆ ರಿಲೀಸ್ ಆಗಿ ಸೂಪರ್ ಹಿಟ್ ಕಂಡಿದ್ದ ಸಿನಿಮಾ.ಅಲ್ಲದೆ ಕಿಚ್ಚನ ಸಿನಿ ಕರಿಯರ್​​ಗೆ ಬಿಗ್ ಬ್ರೇಕ್ ಕೊಟ್ಟ ಚಿತ್ರ ಕೂಡ ಹೌದು. ಹುಚ್ಚ ಚಿತ್ರದಲ್ಲಿ ಕಿಚ್ಚನ ಹುಚ್ಚನ ಅಭಿನಯಕ್ಕೆ ಇಡೀ ಚಿತ್ರರಂಗವೇ ಬೌಲ್ಡ್​​ ಆಗಿತ್ತು. ಸಿನಿಮಾದಲ್ಲಿ ಸುದೀಪ್​ ಸಿಗರೇಟ್​ ಸೇದುವ ಸ್ಟೈಲ್​​ಗೆ, ಕಂಜಿನ ಕಂಠಕ್ಕೆ ಯೂತ್​​ ಮಾರುಹೋಗಿತ್ತು. ಅಂದಹಾಗೆ ಸಿನಿಮಾದಲ್ಲಿ ಸುದೀಪ್​ ನಿರ್ವಹಿಸಿದ ಪಾತ್ರದ ಹೆಸರೇ ಕಿಚ್ಚ. ಅಭಿಮಾನಿಗಳು ಈಗಲು ಸುದೀಪ್​​ನ ಕರೆಯೋದು ಕಿಚ್ಚ ಅಂತ್ಲೆ,

ಹುಚ್ಚ ತೆರೆಕಂಡು 17 ವರ್ಷಗಳ ನಂತ್ರ ಮತ್ತೊಮ್ಮೆ ಹುಚ್ಚನ ಅಬ್ಬರ ಶುರುವಾಗಿದೆ.. ಹುಚ್ಚ -2 ಟೈಟಲ್ ನಲ್ಲಿ ಹೊಸ ಸಿನಿಮಾ ತಯಾರಾಗಿದೆ. ಹಾಗಂತ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸ್ತಿದ್ದಾರಾ ಅಂತ ಕನ್ಫೂಸ್ ಆಗ್ಬೇಡಿ.ಹುಚ್ಚ-2′ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ. ಹುಚ್ಚ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲೇ ಹುಚ್ಚ-2′ ಮೂಡಿ ಬರ್ತಿದೆ. ಟೈಟಲ್ ಮೂಲಕವೇ ಕುತೂಹಲವನ್ನ ಹುಟ್ಟು ಹಾಕಿರೋ ಹುಚ್ಚ -2 ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದ್ದು ನೋಡಿಗರಿಗೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಹೌದು ಚಿತ್ರದಲ್ಲಿ ಪಕ್ಕಾ ಆಕ್ಷನ್ ಥ್ರಿಲ್ಲರ್ ಕಥೆ ಇದೆ ಅನ್ನೋದು ಟ್ರೇಲರ್ ನೋಡಿದ್ರೇನೆ ತಿಳಿಯತ್ತೆ.

ಟ್ರೇಲರ್​​​ನಲ್ಲಿ ಡಾರ್ಲಿಂಗ್ ಕೃಷ್ಣ ಡಿಫರೆಂಟ್ ಲುಕ್​​ಗಳಲ್ಲಿ ಕಾಣಿಸಿಕೊಂಡಿದ್ದು, ಒಂದ್ ಕಡೆ ರಗಡ್ ಅವತಾರದಲ್ಲಿ ಕಾಣಿಸಿಕೊಂಡ್ರೆ ಮತ್ತೊಂದೆಡೆ ಲವರ್ ಬಾಯ್ ಆಗಿ, ಜೊತೆಗೆ ಹುಚ್ಚನಂತೆ ಅದ್ಭುತವಾಗಿ ನಟಿಸಿದ್ದಾರೆ. ಸಧ್ಯ ಹುಚ್ಚ 2 ಚಿತ್ರದ ಈ ಟ್ರೇಲರ್ ಸಾಮಾಜಿಕಾ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಇನ್ನೂ ಡಾರ್ಲಿಗ್ ಕೃಷ್ಣನ ಜೋಡಿಯಾಗಿ ಶ್ರಾವ್ಯ ರಾವ್ ಅಭಿನಯಿಸಿದ್ದು, ವಿಶೆಷ ಪಾತ್ರದಲ್ಲಿ ಸಾಯಿ ಕುಮಾರ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ಮಾಳವಿಕಾ ಅವಿನಾಶ್, ಅವಿನಾಶ್, ಓಂ ಪ್ರಕಾಶ್ ರಾವ್ ಸೇರಿದಂತೆ ಚಿತ್ರದಲ್ಲಿ ಬಹು ದೊಡ್ಡ ತಾರಾ ಬಳಗವಿದೆ ಅಂದ್ಹಾಗೆ, ಅನೂಪ್ ಸೀಳಿನ್ ಸಂಗೀತ ನೀಡಿರೋ ಹುಚ್ಚ-2 ಚಿತ್ರಕ್ಕೆ ಉಮೇಶ್ ರೆಡ್ಡಿ ನಿರ್ಮಾಣವಿದೆ… ಏಪ್ರಿಲ್​​ 6 ರಂದು ಹುಚ್ಚ 2 ತೆರೆಗೆ ಬರ್ತಿದೆ.

 

ಈ ಹುಚ್ಚ ಆ ಇತಿಹಾಸವನ್ನು ಮರುಕಳಿಸುವಂತೆ ಮಾಡ್ತಾನಾ ಅನ್ನೋದು ಸದ್ಯದ ಕುತೂಹಲ.