ಶ್ರೀದೇವಿ ಪತಿ ಬೋನಿ ಕಪೂರ್ ಬಂಧನ ಸಾಧ್ಯತೆ !! ಕೊಲೆಯಾದಳಾ ತ್ರಿಲೋಕ ಸುಂದರಿ ?

ಶ್ರೀದೇವಿ ಸಾವಿನ ಸುತ್ತ ಅನುಮಾನಗಳು ಹೆಚ್ಚುತ್ತಿವೆ. ದುಬೈ ಪೊಲೀಸರು ಸಂಪೂರ್ಣ ಪರೀಕ್ಷಾ ವರದಿಗೆ ಕಾಯುತ್ತಿದ್ದಾರೆ. ಏಕೆಂದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಅನುಮಾನಗಳು ವ್ಯಕ್ತವಾಗುತ್ತಿದೆ.

 ಅಲ್ದೆ ಅನುಮಾನ ಹಿನ್ನೆಲೆಯಲ್ಲಿ ಶವ ಹಸ್ತಾಂತರಕ್ಕೆ ದುಬೈ ಕಾನೂನು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಶ್ರೀದೇವಿ ಪತಿ ಬೋನಿ ಕಪೂರ್​ಗೆ ಕ್ಲೀನ್​ ಚಿಟ್ ಸಿಕ್ಕಿಲ್ಲ. ದುಬೈ ಹೋಟೆಲ್​​ನ ಶ್ರೀದೇವಿ ಬಾತ್​​ ಟಬ್​​ನಲ್ಲಿ ಬಿದ್ದಿದ್ದ 2201 ಕೋಣೆಯನ್ನ ಸೀಜ್​​ ಮಾಡಿ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ. ಪತಿ ಬೋನಿ ಕಪೂರ್ ವರ್ತನೆಗಳು ದುಬೈ ಪೊಲೀಸರ ಅನುಮಾನಗಳಿಗೆ ಕಾರಣವಾಗಿದೆ.

ಮಗಳು ಮತ್ತು ಪತ್ನಿ ಶ್ರೀದೇವಿ ಜೊತೆ ದುಬೈಗೆ ಬಂದ ಬೋನಿ ಕಪೂರ್ ಮಧ್ಯದಲ್ಲಿ ಎದ್ದು ಭಾರತಕ್ಕೆ ಹೋಗಿದ್ದೇಕೆ ? ಪತ್ನಿಗೆ ಸರ್ಪೈಸ್ ಕೊಡಲು ಭಾರತಕ್ಕೆ ಬಂದು ಮರಳಿ ದುಬೈಗೆ ಹೋಗಬೇಕಿತ್ತೇ ? ಗಂಡ ವಾಪಸ್ ದುಬೈಗೆ ವಿಮಾನ ಟಿಕೆಟ್ ಮಾಡಿರುವುದು ಪತ್ನಿಗೆ ತಿಳಿಯುವುದಿಲ್ಲವೇ ? ಹಾಗಿರುವಾಗ ಅದು ಸರ್ಪೈಸ್ ಹೇಗಾಗುತ್ತದೆ ? ಇಂತಹ ಅನುಮಾನಗಳು ಕಾಡಲಾರಂಬಿಸಿದೆ. ಪೊಲೀಸರು ಬೋನಿ ಕಪೂರ್ ತನಿಖೆ ತೀವ್ರಗೊಳಿಸಿದ್ದು, ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ ಇದೆ.