ಡಾ.ರಾಜ್​ ಮೊಮ್ಮಗನ ಅದ್ದೂರಿ ವಿವಾಹ!!

ಡಾ.ರಾಜ್ ಕುಮಾರ್ ಮೊಮ್ಮಗನ ವಿವಾಹ ಶಿವಮೊಗ್ಗದ ಸರ್ಜಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನೆರವೇರಿತು.

ವರನಟ ಡಾ.ರಾಜ್ ಪುತ್ರಿ ಲಕ್ಷ್ಮಿ ಗೋವಿಂದರಾಜ್ ಮತ್ತು ಎಸ್​.ಎ.ಗೋವಿಂದರಾಜ್ ದಂಪತಿಯ ಪುತ್ರ ಷಣ್ಮುಖನ ವಿವಾಹ ಶಿವಮೊಗ್ಗದ ಸಾಗರದ ಸರ್ವಮಂಗಳ ಮತ್ತು ಬರೂರು ನಾಗರಾಜ್ ಅವರ ಪುತ್ರಿ ಸಿಂಧು ಜೊತೆ ನಡೆಯಿತು. ನಿನ್ನೆ ಸಂಜೆಯಿಂದಲೇ ದೇವತಾ ಕಾರ್ಯಗಳು ಆರಂಭವಾಗಿದ್ದು, ಇಂದು ಮುಂಜಾನೆ 9.45 ರಿಂದ 10.45ರ ಒಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಮಂಗಲ್ಯ ಧಾರಣೆ ನಡೆಯಿತು.

ಈ ವಿವಾಹಕ್ಕೆ ಡಾ.ರಾಜ್ ಫ್ಯಾಮಿಲಿ ಸೇರಿದಂತೆ ಸ್ಯಾಂಡಲ್ ವುಡ್ ಸೇರಿದಂತೆ ಕಿರುತೆರೆಯ ನಟ-ನಟಿಯರು ಸಾಕ್ಷಿಯಾದರು.
ಮದುವೆಯಲ್ಲಿ ಸೋದರ ಮಾವಂದಿರಾದ ಶಿವರಾಜ್​ಕುಮಾರ್, ಪುನೀತ್​ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗೂ ಸಂಬಂಧಿಗಳಾದ ರಾಮ್​ಕುಮಾರ್, ಮುರುಳಿ, ವಿಜಯ್ ರಾಘವೇಂದ್ರ ಸೇರಿದಂತೆ ಸ್ಯಾಂಡಲ್​ವುಡ್​ನ ಹೆಸರಾಂತ ಕಲಾವಿದರು ಪಾಲ್ಗೊಂಡಿದ್ರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್ 1 ರಂದು ಆರತಕ್ಷತೆ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಳ್ಳಲಾಗಿದೆ.