ಇದು ಸ್ಯಾಂಡಲ್​ವುಡ್​​ ಸಾರಥಿಯ ಅಭಿಮಾನಿಗಳ ಸ್ಟೋರಿ- ಇಲ್ಲಿ ದೇವರ ಜೊತೆ ದರ್ಶನಗೂ ಸಲ್ಲುತ್ತೆ ಪೂಜೆ!

Fan's Worshiped Darshan At Home.
Fan's Worshiped Darshan At Home.

ಅಭಿಮಾನಿಗಳ ಪಾಲಿಗೆ ಸಿನಿಮಾ ನಟ, ನಟಿ, ಕ್ರಿಕೆಟರ್ಸ್, ರಾಜಕಾರಣಿಗಳು ಎಲ್ಲರೂ ದೇವರುಗಳೇ.

ad


 

ಅದರಲ್ಲೂ ತಮ್ಮ ನೆಚ್ಚಿನ ನಟ, ನಟಿಯನ್ನು ದೇವರಂತೆ ಪೂಜಿಸಿದ ಸಾಕಷ್ಟು ಎಕ್ಸಾಂಪಲ್​​ ನಮ್ಮ ನಡುವೆ ಇದೆ. ಈ ಸಾಲಿನಲ್ಲಿ ಮೊದಲು ನೆನಪಾಗೋದೇ ಡಾ. ರಾಜ್. ಇದೀಗ ಈ ಸಾಲಿಗೆ ಚಾಲೆಂಜಿಂಗ್​​ ಸ್ಟಾರ್​ ದರ್ಶನ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ದರ್ಶನನನ್ನು ಮನೆ-ಮನೆಯಲ್ಲಿ ಪೂಜಿಸಲಾಗುತ್ತಿದ್ದು, ಮುಂದಿನ ದಿನದಲ್ಲಿ ಸ್ಯಾಂಡಲವುಡ್​​ ಸಾರಥಿಗೂ ದೇವಸ್ಥಾನ ನಿರ್ಮಾಣವಾಗೋ ಸಾಧ್ಯತೆ ಇದೆ.  ಹೌದು ನೆಚ್ಚಿನ ತಾರೆಯರನ್ನು ದೇವರಂತೆ ಆರಾಧಿಸುವ ಸಂಸ್ಕೃತಿ ಕರುನಾಡಿನ ಜನರ ನರನಾಡಿಯಲ್ಲೇ ಇದೆ. ಇಲ್ಲಿ ಇಂದಿಗೂ ಡಾ. ರಾಜ್​ಕುಮಾರ್​, ವಿಷ್ಣುವರ್ದನ್​ನರನ್ನು ಅವರು ಚಿತ್ರಗಳಲ್ಲಿ ಬೋಧಿಸಿದ ಆದರ್ಶಗಳನ್ನು ಪ್ರಾತಃಸ್ಮರಣಿಯವಾಗಿಸಿಕೊಂಡಿರೋರು ಇದ್ದಾರೆ. ಇದೀಗ ಈ ಸಾಲಿಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸೇರ್ಪಡೆಯಾಗಿದ್ದಾರೆ.

 

ಕನ್ನಡ ಕೋಟ್ಯಾಂತರ ಅಭಿಮಾನಿಗಳಿಗೆ ದಚ್ಚು ಅಂದ್ರೆ ಪಂಚ ಪ್ರಾಣ. ಹೀಗಾಗಿ ಅದೇಷ್ಟೋ ಅಭಿಮಾನಿಗಳು ಅವರ ಮನೆಗಳಲ್ಲಿ ಪೂಜೆ ಮಾಡುವಾಗ ದೇವರ ಜೊತೆಗೆ ದರ್ಶನ ಪೋಟೋ ಕೂಡ ಹಾಕ್ಕೊಂಡಿದ್ದಾರೆ.  ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಸಲ್ಲಿಸುವಾಗ ಸತ್ಯನಾರಾಯಣ ದೇವರ ಜೊತೆ ದರ್ಶನ್​​ ಫೋಟೋ ಕೂಡ ಪೂಜೆ ಸಲ್ಲಿಸಿದ್ದಾರೆ. ಈ ಪೂಜೆಯ ಫೋಟೋ ಇದೀಗ ಸಾ ಮಾಜಿಕ ಜಾಲತಾಣದದಲ್ಲಿ ವೈರಲ್​ ಆಗಿದ್ದು, ದರ್ಶನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.  ಒಟ್ನಲ್ಲಿ ದರ್ಶನ್ ಕೂಡ ಅಭಿಮಾನಿಗಳ ಪಾಲಿಗೆ ದೇವ್ರು ಅನ್ನೋದು ಮತ್ತೊಮ್ಮೆ ಪ್ರೂವ್​ ಆಗಿದೆ. ತಮ್ಮ ಮಾನವೀಯ ಮುಖದ ಮೂಲಕ ಅದೇಷ್ಟೋ ಕುಟುಂಬಗಳಿಗೆ ಪ್ರಚಾರ ಬಯಸದೇ ನೆರವಾಗಿರುವ ದರ್ಶನಗೆ ಅವರ ಜನಾನುರಾಗಿ ವ್ಯಕ್ತಿತ್ವಕ್ಕೆ ಮುಂದೊಂದು ದಿನ ಕರುನಾಡಿನಲ್ಲಿ ದೇವಾಲಯ ನಿರ್ಮಾಣವಾದ್ರೂ ಅಚ್ಚರಿಯೇನಿಲ್ಲ.