ರಿಯಲ್ ಸ್ಟಾರ್ ಉಪೇಂದ್ರ ಬಿಜೆಪಿಗೆ ?! “ನಮೋ”ಗೆ ಓಂಕಾರ ನುಡಿದ ಬುದ್ದಿವಂತ ಸೂಪರ್ ಸ್ಟಾರ್ !!?

ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಪಥ ಬದಲಿಸಿದ್ದಾರೆ ಎನ್ನಲಾಗಿದೆ.

ಉಪೇಂದ್ರ ಹೊಸ ಪಕ್ಷ ಘೊಷಣೆ ಮಾಡುವ ದಿನವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿಗೆ ಬಂದಿದ್ದರು. ಆದರೆ ಕರ್ನಾಟಕದಲ್ಲಿ ಅಂದು ಉಪೇಂದ್ರ ಹವಾ ಇತ್ತು. ಎಲ್ಲಾ ಮಾಧ್ಯಮಗಳು ಉಪೇಂದ್ರ ಹೊಸ ಪಕ್ಷ ಘೋಷಣೆಯನ್ನು ಕೇಂದ್ರಿಕರಿಸಿ ಸುದ್ದಿ ಮಾಡಿದ್ದವು. ಅಂದೇ ಪ್ರಜಾಕೀಯ ಪಕ್ಷ ಬಿಜೆಪಿ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಅಮಿತ್ ಷಾ ತಂಡ ನಿಯೋಜಿಸಿದ್ದರು.

ಉಪೇಂದ್ರರ ಪಕ್ಷದ ಸ್ಪರ್ಧೆ ನೇರವಾಗಿ ಬಿಜೆಪಿಗೆ ಹೊಡೆತ ಬೀಳುತ್ತೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಉಪೇಂದ್ರ ನಗರ ಭಾಗದ ಬ್ರಾಹ್ಮಣ ಯುವಕರನ್ನು ಆಕರ್ಷಿಸುತ್ತಾರೆ ಮತ್ತು ಕಾಂಗ್ರೆಸ್ ಆಡಳಿತ ವಿರೋಧಿ ಮತಗಳಿಗೆ ಉಪೇಂದ್ರ ಪರ್ಯಾಯವಾಗಿ ಕಾಣುತ್ತಾರೆ. ಅದು ಬಿಜೆಪಿಗೆ ನಷ್ಠ ಉಂಟಾಗುತ್ತದೆ. ಆ ಕಾರಣಕ್ಕೆ ಉಪೇಂದ್ರ ರನ್ನು ಬಿಜೆಪಿ ಸೇರಿಸಲು ಕೆಲಸ ಮಾಡಿ ಎಂದು ಅಮಿತ್ ಷಾ ಸೂಚಿಸಿದ್ದರು. ಇದೀಗ ಉಪೇಂದ್ರ ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಸಿದ್ದು ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನಲಾಗಿದೆ‌.