ಮಾರ್ಚ್ 15 ರಂದು ತೆರೆ ಮೇಲೆ ‘ಗಿರ್ ಗಿಟ್ಲೆ’

ಹೊಸಬರೇ ನಟಿಸಿರುವ ‘ಗಿರ್ ಗಿಟ್ಲೆ’ ಸಿನಿಮಾ ಇದೇ ಶುಕ್ರವಾರ ರೀಲಿಸ್ ಗೆ ರೆಡಿಯಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ರವಿಕಿರಣ್‌ ನಿರ್ದೇಶಿಸಿದ್ದಾರೆ.  ಗಿರೀಶ್, ತಿಮ್ಮರಾಜು, ವೆಂಕಟೇಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿವೆ ನಾಗೇಂದ್ರಪ್ರಸಾದ್, ರವಿಕಿರಣ್ ಸಾಹಿತ್ಯ , ಲಿಯೋ ಪೀಟರ್ಸ್ ಸಂಗೀತ ಸಂಯೋಜಿಸಿದ್ದರೆ.

ad

ಇದೊಂದು ಮಾಸ್ ಕಮರ್ಷಿಯಲ್ ಸಿನಿಮಾ. ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು. ಗಿರೀಶ, ತಿಮ್ಮರಾಜು, ವೆಂಕಟೇಶ್ ಬಂಡವಾಳ ಹೂಡಿದ್ದಾರೆ.ನಿರ್ದೇಶಕ ರವಿಕಿರಣ್‌ಗೆ ಮಾಸ್ ಕಮರ್ಷಿಯಲ್ ಸಿನಿಮಾ ಮಾಡಬೇಕೆಂಬ ಕನಸಿತ್ತು,  ಆ ಕನಸು ಮಾರ್ಚ್ 15 ರಂದು ನನಸಾಗುತ್ತಿದೆ .ಈ ಚಿತ್ರದಲ್ಲಿ ರಂಗಾಯರಘು  ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾಕ್ಕೆ ತಿರುವು ಕೊಡಲಿದೆ. ಒಂದು ರೀತಿಯಲ್ಲಿ ಅವರೇ ಈ ಚಿತ್ರದ ಹೀರೋ ಎನ್ನಬಹುದು. ಕಿರುತೆರೆಯ ನಟಿ ವೈಷ್ಣವಿಗೂ ವಿಶಿಷ್ಟ ಪಾತ್ರವಿದೆ ಎಂದರು.

ನಾಯಕಿ ವೈಷ್ಣವಿ  ಈ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದರೆ, ಜೀವನದಲ್ಲಿ ಒಂದು ಘಟನೆ ನಡೆಯುತ್ತದೆ, ಅದು ಏನು? ಏತಕ್ಕಾಗಿ ನಡೆಯಿತು ಎಂಬುದೇ ಚಿತ್ರದ ಮುಖ್ಯ ಅಂಶ ಎನ್ನುತ್ತಾರೆ ರವಿಕಿರಣ್. ಸುಮಾರು 68 ದಿನಗಳ ಕಾಲ ನಡೆದ ಈ ಚಿತ್ರದ ಶೂಟಿಂಗ್ ನ್ನು ಬೆಂಗಳೂರು, ಮಂಡ್ಯ, ರಾಮನಗರ ಸುತ್ತ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ 15 ರಂದು ತೆರೆ ಮೇಲೆ ‘ಗಿರ್ ಗಿಟ್ಲೆ’ ತೆರೆ ಕಾಣುತ್ತ ಇದ್ದು ಯಾವ ರೀತಿ ಪ್ರೇಕ್ಷಕರನ್ನು ಮೋಡಿ ಮಾಡುತ್ತೆ ಎಂದು ಕಾದು ನೋಡಬೇಕಾಗಿದೆ.

ಪ್ರೇಕ್ಷಕರ ಗಮನ ಸೆಳೆಯುವಂತಹ 'ಗಿರ್ ಗಿಟ್ಲೆ' ಆ್ಯಕ್ಷನ್ ಟೀಸರ್…!

ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಸದ್ದು ಮಾಡಿದ್ದ 'ಗಿರ್ ಗಿಟ್ಲೆ' ಚಿತ್ರದ ಟೀಸರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇದೊಂದು ಪಕ್ಕಾ ಆಯಕ್ಷನ್ ಕಥಾ ಹಂದರವನ್ನು ಒಳಗೊಂಡಿದ್ದು, ಚಿತ್ರಕ್ಕೆ 'ಬ್ರಾಂಡೆಡ್ ಅಲ್ಲಾ ಲೋಕಲ್' ಎಂಬ ಅಡಿ ಬರಹವಿದೆ. ಈ ಚಿತ್ರದಲ್ಲಿ ಪ್ರದೀಪ್, ಗುರು, ಚಂದ್ರು, ಸತ್ಯ ಪ್ರಕಾಶ್, ರಾಘವ ಉದಯ್, ಕೋಟೆ ಪ್ರಭಾಕರ್ 'ಅಗ್ನಿಶಾಕ್ಷಿ' ವೈಷ್ಣವಿ ಗೌಡ, ಹಾಗೂ ಅದ್ವಿತಿ ಶೆಟ್ಟಿ ನಟಿಸಿದ್ದಾರೆ.ಉಪೇಂದ್ರ ಅವರೊಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ರವಿ ಕಿರಣ್ ಈ ಸಿನಿಮಾ ಮಾಡಿದ್ದಾರೆ. ಇದೆ ಶುಕ್ರವಾರ 15/3 ರಂದು ಸಿನಿಮಾ ರಿಲೀಸ್ ಗೆ ಸಜ್ಜಾಗಿ ನಿಂತಿದೆ.

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮಾರ್ಚ್ 11, 2019