ಗೀತಾಂಜಲಿಗೆ ಒಲಿದ ಕಂಕಣ ಭಾಗ್ಯ : ಪುತ್ರಿಯ ನಿಶ್ಚಿತಾರ್ಥದಲ್ಲಿ “ಕ್ರೇಜಿ” ಬ್ಯುಸಿ..

Githanjali Engagement ..

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಮಗಳ ಮದುವೆಯ ಸಂಭ್ರಮ, ಸಡಗರದಲ್ಲಿ ತೊಡಗಿಕೊಂಡಿದು ಸಿಂಪಲ್ಲಾಗಿ ತಮ್ಮ ಮಗಳ ನಿಶ್ಚಿತಾರ್ಥವನ್ನು 2/22 ರಂದು ಖಾಸಗಿ ಹೋಟೆಲ್​ನಲ್ಲಿ ಏರ್ಪಡಿಸಿದ್ದರು. ರವಿಚಂದ್ರನ್​​ ಪುತ್ರಿ ಗೀತಾಂಜಲಿಯವರು ಉದ್ಯಮಿ ಅಜಯ್ ಎಂಬುವರ ಜೊತೆ ಎಂಗಜ್ ಆದರು.

Githanjali Engagement ..

ಇತ್ತೀಚಿನ ದಿನಗಳಲ್ಲಿ ರವಿಚಂದ್ರನ್ ಅವರು  ಯಾವುದೇ ಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಕೊಳ್ಳದೆ  ಕೆಲವು ರಿಯಾಲಿಟಿ ಶೋ ಹಾಗೂ ಕೆಲ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ.  ಆದರೆ ಇದೀಗ ಪುತ್ರಿ ಗೀತಾಂಜಲಿ ಅವರ ಮದುವೆಯ  ಸಡಗರದಲ್ಲಿ ತೊಡಗಿಕೊಂಡಿದ್ದಾರೆ.

Githanjali Engagement ..

ಗೋಲ್ಡನ್​ ಸ್ಟಾರ್​​ ಗಣೇಶ್, ಶ್ರೀಮುರುಳಿ, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಅನೇಕ ಗಣ್ಯರು ಕ್ರೇಜಿಸ್ಟಾರ್​​ ಪುತ್ರಿಯ ನಿಶ್ಚಿತಾರ್ಥಕ್ಕೆ ಬಂದು ಹರಸಿದರು. ಮೇ 30ರಂದು ಗೀತಾಂಜಲಿ ಮತ್ತು ಅಜಯ್​​​​​ ಮದ್ವೆ ಸಮಾರಂಭ ನಡೆಯಲಿದೆ.