ಕನ್ನಡಕ್ಕೆ ಹಾಲಿವುಡ್​​ನ ಫಾಸ್ಟ್​ ಆ್ಯಂಡ್ ಫ್ಯೂರಿಯಸ್ ಚಿತ್ರ! ಡಬ್​ ಚಿತ್ರ ಸ್ವಾಗತಿಸಿದ ಚಿತ್ರರಂಗ !!

ಸ್ಯಾಂಡಲ್​​ವುಡ್​ನಲ್ಲಿ ಡಬ್​ ಚಿತ್ರಗಳಿಗೆ ಹಾದಿ ಸುಗಮವಾಗುತ್ತಿದೆ. ನಿರಂತರ ಹೋರಾಟದಿಂದಾಗಿ ಪರಭಾಷೆ ಚಿತ್ರಗಳು ಕನ್ನಡದಲ್ಲಿಯೇ ಡಬ್ ಆಗಿ ಬಿಡುಗಡೆಯಾಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ತಮಿಳಿನ ಅಜೀತ್ ನಟನೆಯ ವಿಶ್ವಾಸಂ ಹಾಗೂ ಮಲೆಯಾಳಂನ ಒರು ಆಡಾರ್ ಲವ್​ ಕನ್ನಡ ಭಾಷೆಗೆ ಡಬ್ ಆಗಿದ್ದವು.

ad


ಇದೀಗ ಹಾಲಿವುಡ್​ನ ‘ಫಾಸ್ಟ್​ ಆ್ಯಂಡ್ ಫ್ಯೂರಿಯಸ್; ಹಾಬ್ಸ್ ಆ್ಯಂಡ್ ಶಾ’ ಚಿತ್ರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಇದೀಗ ಸಿನಿಮಾದ ಕನ್ನಡ ಟ್ರೇಲರ್ ರಿಲೀಸ್​ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದೆ.

ಇದೀಗ ಹಾಲಿವುಡ್​ನ ‘ಫಾಸ್ಟ್​ ಆ್ಯಂಡ್ ಫ್ಯೂರಿಯಸ್; ಹಾಬ್ಸ್ ಆ್ಯಂಡ್ ಶಾ’ ಆವತರಣೆಯೊಂದು ಡಬ್ ಆಗುತ್ತಿದ್ದು, ನಿನ್ನೆಯಷ್ಟೇ ಕನ್ನಡ ಭಾಷೆಯಲ್ಲಿರುವ ಟ್ರೇಲರ್ ರಿಲೀಸ್ ಆಗಿದೆ. ಯುನಿವರ್ಸಲ್ ಫಿಕ್ಚರ್ಸ್​ ಇಂಡಿಯಾ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದೆ.2.24 ನಿಮಿಷದ ಈ ಟ್ರೇಲರ್​ನಲ್ಲಿ ಮೈನವಿರೇಳಿಸುವ ಫೈಟ್​, ಆ್ಯಕ್ಷನ್ ಸೀನ್​ಗಳು ತುಂಬಿ ತುಳುಕುತ್ತಿವೆ. ಅದ್ಭುತವಾಗಿ ಮೂಡಿ ಬಂದಿರುವ ಟ್ರೇಲರ್ ಕನ್ನಡಿಗರ ಚಿತ್ತ ಸೆಳೆಯುತ್ತಿದೆ.

ಈಗಾಗಲೇ ಎಂಟು ಸರಣಿಗಳಲ್ಲಿ ತೆರೆಕಂಡಿರುವ ‘ಫಾಸ್ಟ್​ ಆ್ಯಂಡ್ ಫ್ಯೂರಿಯಸ್; ಹಾಬ್ಸ್ ಆ್ಯಂಡ್ ಶಾ’ ಈಗ ಹೊಸ ಕಥೆಯೊಂದಿಗೆ ತೆರೆಗೆ ಬರುತ್ತಿದೆ. ಡ್ವೇನ್ ಜಾನ್ಸನ್, ಜೇಸನ್ ಸ್ಟಾಥಮ್, ಇಡಿರಿಸ್ ಎಲ್ಬಾ, ವನೆಸ್ಸಾ ಕಿರ್ಬಿ ಮತ್ತು ಹೆಲೆನ್ ಮಿರ್ರೆನ್ ನಟಿಸಿರುವ ಈ ಆ್ಯಕ್ಷನ್​ ಚಿತ್ರಕ್ಕೆ ಡೇವಿಡ್ ಲೀಚ್ ನಿರ್ದೇಶನ ಮಾಡಿದ್ದಾರೆ.ಇನ್ನು ಕನ್ನಡದಲ್ಲಿ ಮೂಡಿ ಬಂದಿರುವ ಈ ಟ್ರೇಲರ್​​ನ್ನು ಡಬ್ಬಿಂಗ್ ಪರ ಹೋರಾಟಗಾರರು, ಕನ್ನಡ ಸಿನಿ ರಸಿಕರು ತೆರೆದ ಹೃದಯದಿಂದ ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದಾರೆ. ಒಟ್ನಲ್ಲಿ ಹಾಲಿವುಡ್​ ಸಿನಿಮಾಗಳ ಕನ್ನಡಕ್ಕೆ ಡಬ್​ ಆಗೋದಕ್ಕೆ ಶುರುವಾಗಿದೆ.