ಮಂಡ್ಯದಲ್ಲಿ ಸುಮಲತಾಗೆ ಇವತ್ತೂ ಸ್ಟಾರ್ ನಟರದ್ದೇ ಬೆಂಬಲ ..

ಉಸಿರ್ ಉಸಿರಲ್ಲಿ ..ಮನೆ ಮನೆಯಲ್ಲಿ.. ಅಂಬರೀಷ್ ಅಣ್ಣ, ಅಂಬರೀಷ್ ಅಣ್ಣ ಎಂದು ಪೂಜಿಸುವ ಪ್ರೀತಿಯ ಮಂಡ್ಯದ ಜನತೆಗೆ , ಅಂಬರೀಷ್ ರವರ ಅಭಿಮಾನಿಗಳಿಗೆ ಇವತ್ತಿನ ದಿನ ಇಷ್ಟೊಂದು ಅದ್ದೂರಿಯಾದ ಪ್ರೀತಿಯ ಸ್ವಾಗತ ತೋರಿಸಿದ ನಿಮಗೆಲ್ಲರಿಗು ನನ್ನ ತುಂಬು ಹೃದಯದ ನಮಸ್ಕಾರಗಳು ಎಂದು ಭಾಷಣ ಆರಂಭಿಸುತ್ತದಂತೆ ಅಲ್ಲಿ ಹರ್ಷೋದ್ಘಾರ.. ಮೂಡಿತು

ad

.

ಸುಮಲತಾ ಅಂಬರೀಷ್ ರವರ ಧರ್ಮ ಪತ್ನಿಯಾಗಿ, ಈ ಮಣ್ಣಿನ ಹೆಣ್ಣು ಮಗಳಾಗಿ, ಈ ಮಣ್ಣಿನ ಸೊಸೆಯಾಗಿ, ನಾನು ಇಲ್ಲಿ ಯಾರು ?  ಎಂದು ಕೇಳುವವರಿಗೆ ಉತ್ತರ ನೀಡಬೇಕಿದೆ ಎಂದು ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ನಂತರ ಮಂಡ್ಯಜನರನ್ನು ಉದ್ದೇಶಿಸಿ ಮಾತನಾಡಿದರು..

ಇಷ್ಟು ದಿನ ಅಂಬಿ ಅಣ್ಣ ನಮ್ಮ ಜೊತೆ ಇದ್ದರು, ಇನ್ನು ಮುಂದೆ ನೀವು ನಮ್ಮ ಜೊತೆ ಇರಬೇಕು ಇಲ್ಲ ಎಂದರೆ ಮಂಡ್ಯದ ಸೊಸೆಯೆ ಅಲ್ಲ  ಅಂದ್ರು ಮಂಡ್ಯದ ಜನ .ಆಗಾಗಿ ಅವರ ಕೋರಿಕೆಯ ಮೇರೆಗೆ ಇಂದು ನಾನು ಚುನಾವಣೆಯ ಅಖಾಡಕ್ಕೆ ದುಮುಕಿದ್ದೇನೆ ಎಂದರು.

ಅಂಬರೀಷ್ ರವರು ಇನ್ನೂ ಎರಡು ವರ್ಷ ಅಧಿಕಾರದಲ್ಲಿದ್ದಿದ್ದರೆ ಅವರು ಎನೇನು ಮಾಡುತ್ತಿದ್ದರು ಎಂದು ನನಗೆ ಗೊತ್ತು ಅವರಿದ್ದು ಎನೇನು ಮಾಡಬೇಕೆಂದು ಕೊಂಡಿದ್ದರೊ ಅದನ್ನೆಲ್ಲ ನಾನು ಅನುಷ್ಠಾನಕ್ಕೆ ತರುತ್ತೇನೆ ಎಂದು ತಿಳಿಸಿದರು.ಅಂಬರೀಷ್ ರವರ ಇರುವಿಕೆಯನ್ನ ನೆನೆದು ಭಾವನತ್ಮಕರಾದ ಸುಮಲತಾ ಅವರು ರಾಜರಂತೆ ಇದ್ದರು ರಾಜರಂತೆಯೆ ಕಳಿಸಿಕೊಟ್ಟಿದ್ದೀರಿ. ನಿಮ್ಮ ಆ ಋಣ ನನ್ನ ಮೇಲಿದೆ. ಆ ಋಣ ತೀರಿಸಲು ನಾನು ನಿಮ್ಮ ಸೇವೆ ಮಾಡುತ್ತೇನೆಂದು ಆಶ್ವಾಸನೆಯನ್ನು ನೀಡಿದರು.

ಅಂಬರೀಷ್ ರವರು ಜೀವಂತವಾಗಿ ಇದ್ದಾಗ ಯಾರ ಬಳಿಯು ಏನನ್ನು ಕೈ ಚಾಚಿ ಕೇಳಿರಲಿಲ್ಲ ಆದರೆ ಅವರ ಧರ್ಮ ಪತ್ನಿಯಾಗಿ ನಾನು ಇಂದು ನಿಮ್ಮೆಲ್ಲರ ಬಳಿ ಕೇಳುತ್ತಿದ್ದೇನೆ ನೀವೆಲ್ಲರು ನನ್ನ ಜೊತೆ ಇರುತ್ತಿರ ನನ್ನ ಕೈ ಹಿಡಿಯತ್ತಿರಾ? ಎಂದು ಕೇಳಿದರು .


ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್​ ಇಂದು ನಾಮಪತ್ರ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅವರ ಬೆಂಬಲಿಗರು ಹಾಗೂ ಆಪ್ತರ ಸಮ್ಮುಖದಲ್ಲಿ ಅವರು ಬೆಳಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಮೆರವಣಿಗೆ ಮೂಲಕ ಮಂಡ್ಯದ ಸಿಲ್ವರ್​ ಜ್ಯೂಬ್ಲಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶ ಸ್ಥಳಕ್ಕೆ ಆಗಮಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಮಂಡ್ಯ ಜನರು ಸುಮಲತಾಗೆ ಹರ್ಷೋದ್ಘಾರ ಕೂಗುವ ಮೂಲಕ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಗರ ಸಭೆ ಸದಸ್ಯರು ಕಾಣಿಸಿಕೊಳ್ಳುವ ಮೂಲಕ ಸುಮಲತಾಗೆ ಬೆಂಬಲ ನೀಡಿದರು. ಸ್ವಾಭಿಮಾನಿ ಕಾರ್ಯಕರ್ತರಾಗಿ ನಾವು ಇಲ್ಲಿ ಕಾಣಿಸಿಕೊಂಡಿದ್ದೇವೆ. ಅಂಬರೀಷ್​ ಅವರ ಅಭಿಮಾನದಿಂದ ನಾವು ಇಲ್ಲಿದ್ಧೇವೆ ಎಂದರು.

ಜೆಡಿಎಸ್​ ಸಮಾವೇಶ ನಡೆಸಿದ ಸ್ಥಳದಲ್ಲೆ ಇಂದು ಸುಮಲತಾ ಸಮಾವೇಶ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದರು. ಈ ವೇಳೆ ಕೆಲವು ಕಾಂಗ್ರೆಸ್​ ನಾಯಕರು ಬಹಿರಂಗವಾಗಿ ಅವರಿಗೆ ಬೆಂಬಲ ನೀಡಿದರು. ಕಾಂಗ್ರೆಸ್​ ಮುಖಂಡ ಹಾಗೂ ಅಂಬರೀಷ್​ ಆಪ್ತ ಸಚ್ಚಿದಾನಂದ ಮೈತ್ರಿ ನಾಯಕರ ಕಟ್ಟಪಣ್ಣೆ ವಿರೋಧಿಸಿ ಸುಮಲತಾ ಪರ ಸಮಾವೇಶದಲ್ಲಿ ಮಾತನಾಡಿದರು.

ಕಾಂಗ್ರೆಸ್​ ಮುಖಂಡ ಸಚ್ಚಿದಾನಂದ ಅವರು ಮಾತನಾಡಿ, ಮಂಡ್ಯ ಜನರ ಒತ್ತಾಯಕ್ಕೆ ಕಟ್ಟುಬಿದ್ದು ಸುಮಲತಾ ಅವರು ಚುನಾವಣೆ ಅಖಾಡಕ್ಕೆ ಇಳಿದಾಗ ಅವರ ವಿರುದ್ಧ ಬಂದ ಟೀಕೆಗಳು ಒಂದೆರಡಲ್ಲ. ಗಂಡ ಸತ್ತು ಆರು ತಿಂಗಳಾಗಿಲ್ಲ ಚುನಾವಣೆ ಬೇಕಾ.

ಒಂದು ಲೋಟ ನೀರು ಕೊಡುವುದಿಲ್ಲ ಎಂಬೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಇನ್ನು ಬೆಂಬಲ ನೀಡುವಂತೆ ಕೇಳಿಕೊಂಡಾಗ ರಾಜ್ಯಸಭೆ, ವಿಧಾನಪರಿಷತ್​ ಆಯ್ಕೆ ಮಾಡುತ್ತೇವೆ ಎಂದೆಲ್ಲಾ ಆಮಿಷ ಒಡ್ಡಿದ್ದಾರೆ. ಆದರೆ, ನಾನು ಮಂಡ್ಯ ಜನತೆಗಾಗಿ ಮಾತ್ರ ಸ್ಪರ್ಧಿಸುತ್ತೇನೆ ಎಂದು ಅವರು ದಿಟ್ಟ ನಿರ್ಧಾರ ಕೈಗೊಂಡು ಮಂಡ್ಯ ಅಖಾಡಕ್ಕೆ ಅಂಬರೀಷ್​ ಕುಟುಂಬ ಇಳಿದಿದೆ ಎಂದರು

ಅಭಿಮಾನಿಗಳ ಇಚ್ಛೆಯಂತೆ ನಾವು ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ನಮ್ಮ ವಿರುದ್ಧದ ಟೀಕೆಗೆ ಜನರೇ ಉತ್ತರಿಸುತ್ತಾರೆ. ನಿಮ್ಮೊಟ್ಟಿಗೆ ನಾವು ಕಣ್ಣು ಮುಚ್ಚದೇ ಕೆಲಸ ಮಾಡುತ್ತೇನೆ. ಮೇ 23ಕ್ಕೆ ನಮ್ಮ ವಿರುದ್ಧದ ಟೀಕೆಗೆ ಉತ್ತರ ಸಿಗಲಿದೆ ಎಂದು ಅಭಿಷೇಕ್​ ಅಂಬರೀಷ್​ ಗುಡುಗಿದರು.