ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ಯಾಕೆ ಗೊತ್ತಾ ?

ಸಿಸಿಎಲ್ ಮಾದರಿಯಲ್ಲಿಯೇ ಸ್ಯಾಂಡಲ್ ವುಡ್​​ನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗುತ್ತಿದೆ.

adಕಿಚ್ಚಾ ಸುದೀಪ್ ಸಾರಥ್ಯದಲ್ಲಿ ಶುರುವಾಗುತ್ತಿರೋ ಕನ್ನಡ ಚಲನಚಿತ್ರ ಕಪ್​ನಲ್ಲಿ ನಮ್ಮ ಚಂದನವನದ ತಾರೆಯರು ಆಟವಾಡಲಿದ್ದಾರೆ.
ಹೀಗಾಗಿ ಇಂದು ಕಿಚ್ಚಾ ಸುದೀಪ್​ ತಮ್ಮ ಸ್ನೇಹಿತರ ಜೊತೆ ಸಿಎಂ ಸಿದ್ಧರಾಮಯ್ಯರನದ್ನ ಬೇಟಿ ಮಾಡಿ ಕೆಸಿಸಿ ಟಿ10 ಟೂರ್ನಿಯ ಉದ್ಘಾಟನೆಗೆ ಅಹ್ವಾನಿಸಿದ್ದಾರೆ. ಇಂದು ಬೆಳಗ್ಗೆ ಸಿಎಂ ಕಚೇರಿ ಕೃಷ್ಣಾಕ್ಕೆ ತೆರೆಳಿ ಎಫ್ರಿನ್​​ 7ರಂದು ನಡೆಯೋ ಕೆಸಿಸಿ ಉದ್ಘಾಟನ ಕಾರ್ಯಕ್ರಮಕ್ಕೆ ಸಿಎಂರನ್ನ ಕಿಚ್ಚ ಆ್ಯಂಡ್ ಟೀಂ ಅಹ್ವಾನಿಸಿದೆ.

 

T-10 ಮಾದರಿಯಲ್ಲಿ ನಡೆಯೋ ಟೂರ್ನಿಯ ಉದ್ಘಾಟನೆ ಏಪ್ರಿಲ್ 7 ರಂದು ನಡೆಯಲಿದ್ದು, 10 ಓವರ್ ಗಳ ಪಂದ್ಯಗಳಾಗಿರುತ್ತೆ. ಕೇವಲ ಸಿನಿಮಾ ತಾರೆಯರು ಮಾತ್ರವಲ್ಲದೇ, ಕರ್ನಾಟಕ ಕ್ರಿಕೆಟ್ ತಂಡವನ್ನ ಪ್ರತಿನಿಧಿಸಿದ್ದ ಆಟಗಾರರು ಕೂಡ ಆಡಲಿದ್ದಾರೆ. ಈಗಾಗಲೇ ರಾಜ್ ಕಪ್, ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕನ್ನಡ ಸೆಲೆಬ್ರಿಟಿಗಳು ಆಡಿದ್ದಾರೆ. ಈಗ ‘ಕೆಸಿಸಿ ಟಿ 10’ ನಡೆಯಲಿದೆ.