ಕುದುರೆ ಅಡಿಯಲ್ಲಿ ಬಿದ್ದ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ.. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಈಗ ರಕ್ಷಿತ್ ಹೇಗಿದ್ದಾರೆ?

ಚಿತ್ರಗಳ ಸ್ಟಂಟ್​ ವೇಳೆ ನಟರು ಅಪಾಯಕ್ಕಿಡಾಗೋದು ಇತ್ತೀಚಿಗೆ ಹೆಚ್ಚುತ್ತಲೇ ಇದೆ. ಮೊನ್ನೆ -ಮೊನ್ನೆ ತಮನ್ನ ಕೆಜಿಎಫ್​ ಸೆಟ್​ನಲ್ಲಿ ಬಿದ್ದು ಗಾಯಗೊಂಡ ಬೆನ್ನಲ್ಲೇ ಇವತ್ತು ನಟ ರಕ್ಷಿತ್​​ ಶೆಟ್ಟಿ ದೊಡ್ಡ ಅಪಾಯವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ad

ಹೌದು ರಕ್ಷಿತ್​ ಶೆಟ್ಟಿಯವರ ಚಿತ್ರ ಶ್ರೀಮನ್ನಾರಾಯಣ ಚಿತ್ರೀಕರಣದ ವೇಳೆ ರಕ್ಷಿತ್ ಶೆಟ್ಟಿ, ಕುದುರೆ ಮೇಲೆ ಕೂತು ದೃಶ್ಯವೊಂದರಲ್ಲಿ ಅಭಿನಯಿಸುತ್ತಿದ್ದರು. ಈ ವೇಳೆ ಕುದುರೆ ಎದುರು ಇಬ್ಬರು ಪಾತ್ರಧಾರಿಗಳು ದೊಡ್ಡದಾದ ಕೋವಿ ಹಿಡಿದು ನಿಂತಿದ್ದರು. ಈ ಕೋವಿಯನ್ನು ಕಂಡು ಕಂಗಾಲಾದ ಕುದುರೆ ಧೀಡಿರ ಎಂದು ಮೇಲಕ್ಕೆಗರಿ ಓಡಲು ಯತ್ನಿಸಿದೆ.

ಇದರಿಂದಾಗಿ ಕುದುರೆ ಮೇಲೆ ಕೂತಿದ್ದ ರಕ್ಷಿತ್ ಶೆಟ್ಟಿ ಆಯತಪ್ಪಿ ಕುದುರೆ ಕಾಲಿನ ಅಡಿಯಲ್ಲಿ ಬಿದ್ದಿದ್ದು, ಎದ್ದೇಳಲಾಗದೇ ಕುದುರೆ ಕಾಲಿನ ಅಡಿಯಲ್ಲೇ ಬಿದ್ದು ಒದ್ದಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಇತರ ಕಲಾವಿದರು ರಕ್ಷಿತ್ ಶೆಟ್ಟಿಯನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ ರಕ್ಷಿತ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.