ಕುಮಟ ಉತ್ಸವದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಸಕತ್ ಸ್ಟೆಪ್..

ಬಿಗ್ ಬಾಸ್ ವಿನ್ನರ್ ಆದ ನಂತರ ಚಂದನ್ ಶೆಟ್ಟಿ ರಾಜ್ಯಾದ್ಯಂತ ಸಕತ್ ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ನಂತರ ಇದೇ ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ವೇದಿಕೆಯಲ್ಲಿ ಕಾರ್ಯಕ್ರಮವನ್ನ ನೀಡಿದ ಚಂದನ್ ಜನಸಾಗರಕ್ಕೆ ಸ್ಟೆಪ್ ಹಾಕಿಸಿದ್ರು ತಮ್ಮ ಹಾಡಿನ ಮೂಲಕ. ಕುಮಟಾ ಪಟ್ಟಣದಲ್ಲಿ ರವಿಕುಮಾರ ಶೆಟ್ಟಿ ಅವರು ಆಯೋಜನೆ ಮಾಡಿದ್ದ ಕುಮಟಾ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಂದನ್ ಶೆಟ್ಟಿ ಹೇಳಿದ ಸಾಂಗ್‌ಗಳಿಗೆ ಸಕತ್ ಅಭಿಮಾನಿಗಳು ಎಂಜಾಯ್ ಮಾಡಿದ್ರು 

ಒಂದು ಕಡೆ ತೆರೆದ ಜೀಪ್ ನಲ್ಲಿ ಸಾಂಗ್ ಹೇಳ್ತಾ ಜನರತ್ತ ಆಗಮಿಸುತ್ತಿರುವ  ಚಂದನ್ ಶೆಟ್ಟಿ, ಇನ್ನೊಂದೆಡೆ ವೇದಿಕೆ ಏರಿ ಫೇಮಸ್ ಆಲ್ಬಮ್ ಸಾಂಗ್‌ಗಳನ್ನ ಹೇಳ್ತಾ ಜನ್ರಿಗೆ ಡ್ಯಾನ್ಸ್ ಮೂಡಲ್ಲಿ ಮುಳುಗಿಸಿದ ದೃಶ್ಯ, ಈ ಅಪರೂಪದ ದೃಶ್ಯ ಕಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ. ಬಿಗ್ ಬಾಸ್ ಗೆ ಚಂದನ್ ಶೆಟ್ಟಿ ಹೋದ ನಂತರ ಸಕತ್ ಫೇಮಸ್ ಆಗಿದ್ದರು. ಅದರಲ್ಲೂ ಬಿಗ್ ಬಾಸ್ ನಲ್ಲಿ ವಿನ್ನರ್ ಆದ ನಂತರವಂತೂ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬಂದ ನಂತರ ಇದೇ ಪ್ರಥಮ ಬಾರಿಗೆ ಕುಮಟಾ ಪಟ್ಟಣದಲ್ಲಿ ನಡೆಯುತ್ತಿರುವ ಕುಮಟಾ ಉತ್ಸಮ ಕಾರ್ಯಕ್ರಮಕ್ಕೆ ಚಂದನ್ ಶೆಟ್ಟಿ ಆಗಮಿಸಿದ್ದರು. ಚಂದನ್ ಶೆಟ್ಟಿಯನ್ನ ನೋಡೋದಕ್ಕೆ ಅಂತಾನೇ ಸುಮಾರು ೫೦ ಸಾವಿರಕ್ಕೂ ಅಧಿಕ ಜನ ಕುಮಟಾದಲ್ಲಿ ಮಣಕಿ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜಮಾವಣೆಗೊಂಡಿದ್ದರು. ಚಂದನ್ ಶೆಟ್ಟಿ ತೆರೆದ ಜೀಪ್ ನಲ್ಲಿ ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿಯಲು ಪ್ರಾರಂಭಿಸಿದ್ದರು. ಚಂದನ್ ಶೆಟ್ಟಿಯ ಫೇಮಸ್ ಆಲ್ಬಮ್ ಸಾಂಗ್ ಗಳಾದ ಗಾಂಚಲೀ, ಮೂರೇ ಮೂರು ಪೆಗ್ಗಿಗೆ, ಚಾಕಲೇಟ್ ಗರ್ಲ್ ಸೇರಿದಂತೆ ಹಲವು ಹಾಡುಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು.

ಚಂದನ್ ಶೆಟ್ಟಿ ಕಾರ್ಯಕ್ರಮ ಮಧ್ಯರಾತ್ರಿ ೧೨:೩೦ಕ್ಕೆ ಪ್ರಾರಂಭವಾದರೂ ಜನರು ಮಾತ್ರ ಕದಲದೇ ಚಂದನ್ ಶೆಟ್ಟಿ ಆಗಮನಕ್ಕಾಗಿ ಕಾಯುತ್ತಿದ್ದರು. ಇನ್ನು ಕಾರ್ಯಕ್ರಮಕ್ಕೆ ಜೀಪ್ ನಲ್ಲಿ ಬರೋ ಮೂಲಕ ಸಕತ್ ಆಗಿಯೇ ಎಂಟ್ರಿ ಕೊಟ್ಟಿದ್ರು. ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ೨ ಘಂಟೆಯವರೆಗೆ ನಿರಂತರವಾಗಿ ರ್ಯಾಪರ್ ಹಾಡುಗಳನ್ನ ಹೇಳೋ ಮೂಲಕ ಜನರನ್ನ ಚಂದನ್ ಶೆಟ್ಟಿ ಕುಣಿಸಿದ್ದರು. ಕಾರ್ಯಕ್ರಮದಲ್ಲಿ ಬಿಗ್ ಬಾಸ್ ನಲ್ಲಿ ತಮ್ಮ ಜೊತೆಗಾರರಾಗಿದ್ದ ದಿವಾಕರ್ ಹಾಗೂ ನಿವೇದಿತಾಗೆ ಕರೆ ಮಾಡಿ ಲೌಡ್ ಸ್ಪೀಕರ್ ನಲ್ಲಿ ಜನರಿಗೆ ಮಾತನಾಡಿಸೋ ಮೂಲಕ ನೆನೆದರು. ಇನ್ನು ನಟ ವಿಜಯ್ ರಾಘವೇಂದ್ರ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಂದನ್ ಶೆಟ್ಟಿ ಹಾಡುಗಳಿಗೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ರು.

 

ಒಟ್ಟಿನಲ್ಲಿ ಕನ್ನಡದ ಮೊದಲ ರ್ಯಾಪರ್ ಚಂದನ್ ಶೆಟ್ಟಿ ತಮ್ಮ ವಿಭಿನ್ನ ಹಾಡುಗಳ ಮೂಲಕ ಜನರನ್ನ ಆಕರ್ಷಿಸಿದ್ದು ಬಿಗ್ ಬಾಸ್ ವಿನ್ನರ್ ಆದ ನಂತರ ಚಂದನ್ ಶೆಟ್ಟಿ ಅಪಾರ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಅನ್ನೋದಕ್ಕೆ ಕುಮಟಾದಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿತ್ತು..