ಲೂಸ‌ ಮಾದ ಮದುವೆಗೆ ದಿನಗಣನೆ- ಕೋಣನಕುಂಟೆ ನಿವಾಸದಲ್ಲಿ ಅರಿಶಿನ ಶಾಸ್ತ್ರ.

ad

ದುನಿಯಾ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ನಲ್ಲಿ‌ ಲೂಸ್ ಮಾದ ಎಂಬ ಖ್ಯಾತಿ ಗಳಿಸಿದ ನಟ ಯೋಗಿ ಹಸೆಮಣೆ ಏರಲಿದ್ದಾರೆ. ನವೆಂಬರ್ ೨ ರಂದು ಯೋಗಿ ತಮ್ಮ ಬಾಲ್ಯದ ಗೆಳತಿ ಹಾಗೂ ಟೆಕ್ಕಿ ಸಾಹಿತ್ಯ ಅರಸ್ ಅವರನ್ನು ವರಿಸಲಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಈ ಜೋಡಿ ವಿವಾಹ ನಿಶ್ವಿತಾರ್ಥ ಮಾಡಿಕೊಂಡಿದ್ದರು.

 

ಈಗಾಗಲೇ ನಟ ಯೋಗಿ ಕೋಣನಕುಂಟೆ ನಿವಾಸದಲ್ಲಿ ‌ ಮದುವೆ ಸಂಭ್ರಮ ಕಳೆಗಟ್ಟಿದ್ದು ಅರಿಸಿನ ಶಾಸ್ತ್ರ ಹಾಗೂ ಚಪ್ಪರದ ಶಾಸ್ತ್ರ ಇಂದು‌ ನಡೆಯಿತು. ಲೂಸ್ ಮಾದ ಖ್ಯಾತಿಯ ಯೋಗಿ ತಾಯಿ ಹಾಗೂ ಕಿರುತೆರೆ ನಟಿ ಅಂಬುಜಾಕ್ಷಿ, ತಂದೆ ಸಿದ್ದರಾಜು, ಯೋಗಿ ಸಹೋದರ ಹಾಗೂ ಬಂಧುಬಾಂಧವರು ಮನೆಯಲ್ಲಿ ನಡೆದ ಒನಕೆ ಶಾಸ್ತ್ರ, ಮಂಗಳಸ್ನಾನ,ಬಳೆ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನಡೆಸಿದರು. ನವೆಂಬರ್ ೨ ರಂದು ನಗರದ ಆರ್.ಆರ್‌. ಕನ್ವೆಷನ್ ಹಾಲ್ ನಲ್ಲಿ ಮುಂಜಾನೆ ೫ ಗಂಟೆಗೆ ಮದುವೆ ನಡೆಯಲಿದ್ದು, ಸಂಜೆ ಆರತಕ್ಷತೆ ನೆರವೇರಲಿದೆ. ಸ್ಯಾಂಡಲ್ ವುಡ್ ನಟ-ನಟಿಯರು ಮದುವೆಯಲ್ಲಿ ಪಾಲ್ಗೊಂಡು ಯುವಜೋಡಿಗೆ ಶುಭಹಾರೈಸಲಿದ್ದಾರೆ.