ಕಿರಿಕ್​ ಚೆಲುವೆ ರಶ್ಮಿಕಾ ಮಂದಣ್ಣಗೆ ಬಂತು ಪ್ರೇಮಪತ್ರ! ಲವ್​ ಲೆಟರ್​ ಬರೆದಿದ್ದ್ಯಾರು ಗೊತ್ತಾ?!

ರಶ್ಮಿಕಾ ಮಂದಣ್ಣ.. ಈ ಕೊಡಗು ಚೆಲುವೆಯ ಬ್ಯೂಟಿಗೆ ಮಾರುಹೋಗದವರಿಲ್ಲ. ತುಂಬಾ ಶಾರ್ಟ್ ಟೈಮ್​​​​ನಲ್ಲಿ ಎಲ್ಲರ ಮನಸು ಗೆದ್ದ ನಟಿ. ಕಿರಿಕ್​ ಪಾರ್ಟಿ ಸಿನಿಮಾದಲ್ಲಿ ಸಾರಿ ಉಟ್ಟು ಕನ್ನಡಕ ತೊಟ್ಟು ಎಂಟ್ರಿ ಕೊಟ್ಟ ರಶ್ಮಿಕಾನ ನೋಡಿದ್ದೇ ನೋಡಿದ್ದು ಹರೆಯದ ಹುಡುಗ್ರು ಫಿದಾ ಆಗ್ಬಿಟ್ಟಿದ್ರು.


ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ದಿನ ಬೆಳಗಾಗೋದ್ರೋಳಗೆ ಫೇಮಸ್ ಆದ ನಟಿ ಈಕೆ. ಆಕೆಯ ಅದೃಷ್ಟ ಹೇಗಿತ್ತು ಅಂದ್ರೆ ಮೊದಲ ಸಿನಿಮಾ ಬಿಡುಗಡೆಗೂ ಮುಂಚೆ ಸ್ಟಾರ್​​​ಗಳ ಚಿತ್ರಗಳಲ್ಲಿ ನಾಯಕಿಯಾಗೋದಕ್ಕೆ ಆಫರ್ ಪಡೆದಿದ್ದ ರಶ್ಮಿಕಾ ಬಿಗ್​ ಸ್ಟಾರ್ಸ್​ ಜೊತೆಯೂ ನಟಿಸಿದ್ಲು. ಅತ್ತ ತೆಲುಗಿನಲ್ಲೂ ರಶ್ಮಿಕಾದ್ದೇ ಹವಾ.

ಹೀಗಾಗಿ ಸೌತ್​ನಲ್ಲಿ ಈಗ ರಶ್ಮಿಕಾ ಮೋಸ್ಟ್​ ವಾಟೆಂಡ್​ ಹೀರೋಯಿನ್​. ಚಿತ್ರದಿಂದ ಚಿತ್ರಕ್ಕೆ ಫ್ಯಾನ್ಸ್​ ಸಂಖ್ಯೆ ಕೂಡ ಏರ್ತಿದೆ. ವಿಶೇಷ ಅಂದ್ರೆ ರಶ್ಮಿಕಾಗೆ ಕ್ರೇಜಿ ಫ್ಯಾನ್ಸ್​ ಹೆಚ್ಚಾಗ್ತಿದ್ದಾರೆ. ಇತ್ತೀಚೆಗೆ ಅಮೇರಿಕದ 8 ಹರೆಯದ ಹುಡ್ಗನೊಬ್ಬ ಈ ನಟಿಗೆ ಪ್ರೇಮ ಪತ್ರ ಬರೆದಿದ್ದ. ಇದೀಗ ಲಿಲ್ಲಿಗೆ ಮತ್ತೊಂದು ಲವ್​ ಲೆಟರ್​ ಬಂದಿದ್ದು, ವೈರಲ್​ ಆಗಿದೆ. ಅಂದಹಾಗೆ ಆ ಪತ್ರದಲ್ಲಿ ಬರೆದಿರೋ ಪ್ರೇಮ ಸಾಲುಗಳು ಹೀಗಿದೆ.

‘‘ನಿಮ್ಮ ಹಾಗೇ ಬೇರೆ ಯಾರಿಲ್ಲ. ನಿಮ್ಮ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನೀವು ನೋಡುವ ನೋಟ, ನೀವು ಬೀರುವ ನಗೆ, ಅಭಿಮಾನಿಗಳನ್ನು ನೀವು ಗೌರವಿಸುವ ಬಗೆ ನಿಜಕ್ಕೂ ಮೆಚ್ಚುವಂತದು. ನಿಮ್ಮ ಚೆಲುವ ಸನ್​ಶೈನ್ ಹಾಗೂ ಚಿನ್ನಕ್ಕಿಂತಲೂ ಹೊಳಪು. ನೀವು ಕ್ಯಾಂಡಿಗಿಂತ ಸ್ವೀಟಾಗಿದ್ದೀರಿ. ಚಂದ್ರನನ್ನು ನಾಚಿಸುವಂತೆ ಲವ್ಲಿಯಾಗಿದ್ದೀರಿ. ಮೊದಲ ಬಾರಿಗೆ ನಿಮ್ಮನ್ನು ತೆರೆ ಮೇಲೆ ನೋಡಿದಾಗ ನನ್ನ ಹೃದಯ ಬಡಿತ ಏರುಪೇರಾಗಿದ್ದು ಇಂದಿಗೂ ನೆನಪಿದೆ. ನನಗೆ ಕನ್ನಡ-ತೆಲುಗು ಭಾಷೆ ಗೊತ್ತಿಲ್ಲ. ಆದರೂ ಕೂಡ ನಿಮ್ಮ ಎಲ್ಲ ಚಿತ್ರಗಳನ್ನು ನೋಡಿ ದೊಡ್ಡ ಅಭಿಮಾನಿಯಾಗಿದ್ದೇನೆ. ಇದರಿಂದಾನೇ ಗೊತ್ತಾಗುತ್ತೆ ಪ್ರೀತಿಗೆ ಯಾವುದೇ ಭಾಷೆಯಿಲ್ಲ ಎಂಬುದು. ವಿದ್ಯಾಭ್ಯಾಸ ಹಾಗೂ ನಿಮ್ಮ ಮೇಲಿನ ಪ್ರೀತಿಯನ್ನು ಸರಿದೂಗಿಸಿಕೊಂಡು ಹೋಗುವುದು ಎಷ್ಟು ಕಷ್ಟ ಅನ್ನೋದು ನನಗೆ ಮಾತ್ರ ಗೊತ್ತು. ನಿಮ್ಮ ಮುಂದೆ ಹೇಳಿಕೊಳ್ಳಬೇಕಾದ ವಿಷಯಗಳು ಸಾಕಷ್ಟಿವೆ. ನೀವು ನನ್ನ ಜೀವನದ ಗೀತೆಗೆ ಸಂಗೀತ ನೀಡಿದ್ದೀರಾ . ನೀವು ನನಗೆ ತುಂಬಾ ತುಂಬಾನೇ ಸ್ಪೆಷೆಲ್ ಎಂಬುದನ್ನು ನೆನಪಿಸಲು ಬಯಸುತ್ತೇನೆ’
-ಪ್ರೀತಿಯೊಂದಿಗೆ ರಶ್ಮಿಕಾ ಅಭಿಮಾನಿ

 


ಈ ಹಾರ್ಟ್​ ಟಚ್ಚಿಂಗ್​ ಪತ್ರದಲ್ಲಿನ ಪ್ರತಿ ಅಕ್ಷರಗಳಲ್ಲಿ ಪ್ರೇತಿ ಇದೆ. ಈ ಪ್ರೇಮ ಪತ್ರ ರಶ್ಮಿಕಾ ಅವರಿಗೂ ತಲುಪಿದೆ. ಮೊನ್ನೆ ಮೊನ್ನೆ ರಶ್ಮಿಕಾ ಬರ್ತ್​​ಡೇ ಸೆಲೆಬ್ರೇಟ್​ ಮಾಡ್ಕೊಂಡಿದ್ರು. ಆ ಹ್ಯಾಂಗೋವರ್​​ನಿಂದ ಇನ್ನೂ ಹೊರಬರದ ಕೊಡಗು’ ಚೆಲುವೆಗೆ ಈ ಗಿಫ್ಟ್​ ಸಿಕ್ಕಿದೆ.
ಕ್ಯೂಟ್​ ಕ್ಯೂಟ್​​ ಆದ ಪ್ರೇಮ ಪತ್ರ ಓದಿದ ಲಿಲ್ಲಿ ಕೂಡಾ ಥ್ರಿಲ್​ ಆಗಿದ್ದಾರೆ. ಅಭಿಮಾನಿಯ ಈ ಲವ್ ಲೆಟರ್​ಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದು, ‘ಇದು ಮುದ್ದಾದ ಪ್ರೇಮ ಪತ್ರ, ನನ್ನ ಖುಷಿ ಹೆಚ್ಚಿಸಿತು, ಧನ್ಯವಾದಗಳು’ ಎಂದಿದ್ದಾರೆ. ಒಟ್ನಲ್ಲಿ ರಶ್ಮಿಕಾಗೆ ಸಿಕ್ಕಾಪಟ್ಟೆ ಕ್ರೇಜಿ ಫ್ಯಾನ್ಸ್​ ಇದ್ದಾರೆ ಅನ್ನೋದು ಮತ್ತೊಮ್ಮೆ ಪ್ರೂವ್​ ಆಗಿದೆ.