ತೆಲುಗಿಗೆ ರಿಮೇಕ್​ ಆಗ್ತಿದೆ ಮಫ್ತಿ- ಬೈರತಿ ರಣಗಲ್​ ಪಾತ್ರ ಮಾಡೋದ್ಯಾರು ಗೊತ್ತಾ?

Mafti film remake in Telgu.
Mafti film remake in Telgu.

ಮಫ್ತಿ… ನಿರೀಕ್ಷೆಯಂತ ಭರ್ಜರಿ ಹಿಟ್​ ಆದ ಸಿನಿಮಾ. ಚಿತ್ರದ ಮೇಕಿಂಗ್​ಗೆ, ಕಲಾವಿದ ಆ್ಯಕ್ಟಿಂಗ್​ ಇಡೀ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ರು. ಅದರಲ್ಲೂ ಶಿವಣ್ಣನ ಭೈರತಿ ರಣಗಲ್​​ ಪಾತ್ರಕ್ಕೆ ಪ್ರೇಕ್ಷಕರು,ವಿಮರ್ಶಕರು ಹೀಗೆ ಎಲ್ಲಾರು ಜನರು ಮನಸೋತಿದ್ರು.

ad


ಇದೀಗ ಈ ಸಿನಿಮಾದ ಬಗ್ಗೆ ಮತ್ತು ಭೈರತಿ ರಣಗಲ್​ ಪಾತ್ರಕ್ಕೆ ಸಂಬಂಧಿಸಿದ ಇಂಟ್ರೆಸ್ಟಿಂಗ್​ ಸುದ್ದಿಯೊಂದು ಓಡಾಡ್ತಿದೆ. ಅದು ಇಲ್ಲಿದೆ.
ಇದು ಖಂಡಿತವಾಗಿಯೂ ಸೆಂಚುರಿ ಸ್ಟಾರ್ ಶಿವಣ್ಣ ನ ಅಭಿಮಾನಿಗಳಿಗೆ ಸಂತಸ ನೀಡೋ ಸುದ್ದಿ. ಶಿವಣ್ಣನ ಅಭಿಮಾನಿಗಳೆಲ್ಲಾ ಈ ಸುದ್ದಿಯನ್ನ ಕೇಳಿದ ನಂತ್ರ ಥ್ರಿಲ್ ಆಗೇ ಆಗ್ತಾರೆ.
ಅಂದಹಾಗೆ ಇದು ಮಫ್ತಿ ಸಿನಿಮಾದ ವಿಷ್ಯ. ಇದು ನಿರೀಕ್ಷೆಯಂತ ಭರ್ಜರಿ ಹಟ್​ ಆದ ಸಿನಿಮಾ. ಚಿತ್ರದಲ್ಲಿ ಶಿವರಾಜ್ ಕುಮಾರ್ ಬೈರತಿ ರಣಗಲ್​​ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಈ ಪಾತ್ರಕ್ಕಾಗಿ ಶಿವಣ್ಣ ನೀಡಿದ ನಟನೆಯನ್ನು ಪ್ರೇಕ್ಷಕರು,ವಿಮರ್ಶಕರು,ಪ್ರದರ್ಶನಕರು ಹೀಗೆ ಎಲ್ಲಾ ವರ್ಗದ ಜನರು ಮನಸಾರೆ ಹೊಗಳಿದ್ರು.

ಮಫ್ತಿ ಚಿತ್ರದ ಶಿವಣ್ಣನ ಪಾತ್ರ ಎಷ್ಟು ಆಳವಾಗಿತ್ತು ಅಂದ್ರೆ,ಅದಕ್ಕೆ ಎಂಥಹಾ ಅದ್ಬುತಾ ರೆಸ್ಪಾನ್ಸ್ ಸಿಕ್ಕಿತು ಅಂದ್ರೆ ಶಿವಣ್ಣನ ಅಭಿಮಾನಿಗಳು ದಿಲ್ ಖುಷ್ ಆಗಿ ಥಿಯೇಟರ್ ಗೆ ಲಗ್ಗೆ ಹಾಕಿದ್ರು. ಹೀಗಾಗಿ ಚಿತ್ರ ಬಾಕ್ಸ್ ಆಫೀಸ್​​​ನಲ್ಲಿ ಚಿಂದಿ ಉಡಾಯಿಸಿತು. ಮಫ್ತಿ ಚಿತ್ರದಲ್ಲಿ ಶಿವಣ್ಣ ರೌಡಿ ಆದರೂ ಅಂತರಂಗದಲ್ಲಿ ಎಲ್ಲರಿಗೂ ಒಳ್ಳೆಯದನ್ನೇ ಬಯಸೋರಾಗಿ ಸಖತ್ ಆಗೇ ಮಿಂಚಿದ್ರು. ಶಿವಣ್ಣನ ಈ ಪಾತ್ರ ಪಾತ್ರ ಸ್ಯಾಂಡಲ್ ವುಡ್ ಮಾತ್ರವಲ್ಲ ಕನ್ನಡದ ಗಡಿ ದಾಟಿ ಬೇರೆ ರಾಜ್ಯದಲ್ಲೂ ಸುದ್ದಿ ಮಾಡಿತ್ತು. ಇತ್ತಿಚೆಗೆ ಬಂದ ಬಿಸಿ ಬಿಸಿ ಸಿಹಿ ಸುದ್ದಿಯೆಂದ್ರೆ ಮಫ್ತಿ ಚಿತ್ರ ನೋಡಿ ಟಾಲಿವುಡ್​​​ನ ಬಾಲಕೃಷ್ಣ ಸಖತ್ ಖುಷಿ ಆಗಿದ್ದಾರಂತೆ. ಹೇಳಿ ಕೇಳಿ ಶಿವಣ್ಣ ಬಾಲಣ್ಣ ಆತ್ಮೀಯ ಸ್ನೇಹಿತರು. ರಾಜ್ ಕುಮಾರ್ ಮತ್ತು ಎನ್ ಟಿ ಆರ್ ಕುಂಟುಂಬದ ನಡುವೆ ಯಾವಾಗಲೂ ಮಧುರ ಭಾಂದವ್ಯ ಇತ್ತು.

ಹೀಗಾಗಿ ಬಾಲಣ್ಣನ ಗೌತಮಿಪುತ್ರ ಶಾತಕರ್ಣಿ ಚಿತ್ರದ ಹಾಡೊಂದರಲ್ಲಿ ಶಿವಣ್ಣ ಕಾಣಿಸಿಕೊಂಡಿದ್ರು. ಇದೀಗ ಶಿವಣ್ಣನ ಮಪ್ತಿ ಸಿನಿಮಾ ತೆಲುಗಿಗೆ ರಿಮೇಕ್​​ ಆಗ್ತಿದೆ. ಇತ್ತ ಶಿವಣ್ಣನ ಬೈರತಿ ರಣಗಲ್​​​ ಪಾತ್ರಕ್ಕೆ ಫಿದಾ ಆಗಿರೋ ನಂದ ಮೂರಿ ಬಾಲಕೃಷ್ಣ ಆ ಕ್ಯಾರೆಕ್ಟರ್​ ಮಾಡುವ ಆಶಯ ವ್ಯಕ್ತ ಪಡಿಸಿದ್ರು. ಇದೀಗ ಮಫ್ತಿಯ ತೆಲುಗು ರೈಟ್ಸ್ ಖರೀದಿಸಿರೋದು ಬಾಲಣ್ಣನಿಗೆ ಅಪ್ರೋಚ್ ಮಾಡಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್​​ವುಡ್​​​ನಲ್ಲಿ ಮಫ್ತಿಯ ಬೈರತಿ ರಣಗಲ್​​ ಪಾತ್ರಕ್ಕೆ ಒಂದು ಗತ್ತು ತಂದುಕೊಟ್ಟಿದ್ದು ಶಿವಣ್ಣ. ಇದೀಗ ಟಾಲಿವುಡ್​​ನಲ್ಲಿ ಆ ಪಾತ್ರಕ್ಕೆ ಜೀವ ತುಂಬಲು ಸಜ್ಜಾಗ್ತಿರೋದು ಟಾಲಿವುಡ್​ ಲಯನ್​​ ಬಾಲಣ್ಣ. ಹೀಗಾಗಿ ಬೈರತಿ ರಣಗಲ್​​ ಮತ್ತೊಮ್ಮೆ ಕ್ರೇಜ್​​ ಸೃಷ್ಟಿಸೋದರಲ್ಲಿ ಅನುಮಾನ ಇಲ್ಲ.