ಸಕ್ಕರೆ ನಾಡಿನಲ್ಲಿ ಸ್ಯಾಂಡಲವುಡ್​ ಕ್ವೀನ್​ ಬರ್ತಡೇ ಸಂಭ್ರಮ- ಹುಟ್ಟುಹಬ್ಬಕ್ಕೂ ಗೈರಾದ ರಮ್ಯ!!

Mandya: Actress Ramya fans are preparing for Ramya's birthday.

ಸ್ಯಾಂಡಲವುಡ್​ ಕ್ವೀನ್​​ ಹಾಗೂ ಕಾಂಗ್ರೆಸ್​ನ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯ ಕ್ಷೇತ್ರ ಮಂಡ್ಯದಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಡ್ಯದ  ದೇವಾಲಯದಲ್ಲಿ  ಹಾಗೂ ರಮ್ಯ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಲಾಗುತ್ತಿದ್ದು, ಮಂಡ್ಯ ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಿಂದ ನೂರಾರು ಕಾರ್ಯಕರ್ತೆಯರು ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

 Mandya: Actress Ramya fans are preparing for Ramya's birthday.

Mandya: Actress Ramya fans are preparing for Ramya’s birthday.

Watch Here: https://youtu.be/qe8OqygzZ-w

ಮೊದಲಿಗೆ ರಮ್ಯ ಯಶಸ್ಸು ಕೋರಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತೆಯರು  ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಅಲ್ಲದೇ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದಲ್ಲದೇ ಪೂಜೆ. ಮಂಡ್ಯದ ವಿದ್ಯಾ ನಗರದಲ್ಲಿರುವ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ, KRDCL ನಿರ್ದೇಶಕ ಶಶಿಕುಮಾರ್ ನೇತೃತ್ವದಲ್ಲಿಯೂ ರಮ್ಯ ಹುಟ್ಟುಹಬ್ಬಕ್ಕೆ ಶುಭಕೋರಿ ಪೂಜೆ ಸಲ್ಲಿಸಲಾಯಿತು.

 Mandya: Actress Ramya fans are preparing for Ramya's birthday.

Mandya: Actress Ramya fans are preparing for Ramya’s birthday.

ಇದಲ್ಲದೇ ರಮ್ಯ ಅಭಿಮಾನಿಗಳಿಗೆ  ಸಿಹಿ ವಿತರಣೆ,  ಅಭಿಮಾನಿಗಳಿಂದ ಕ್ಯಾಲೆಂಡರ್ ಬಿಡುಗಡೆ ನಡೆಯಿತು. ನವೆಂಬರ್ 29 ರ ಹುಟ್ಟುಹಬ್ಬದ ದಿನದಂದೇ ರಮ್ಯ ಮಂಡ್ಯಕ್ಕೆ ಆಗಮಿಸಿ ತಮ್ಮ ಮನೆಯಲ್ಲಿ ಪೂಜೆ ಮಾಡಿ ವಾಸ್ತವ್ಯ ಹೂಡುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೇ ಹುಟ್ಟುಹಬ್ಬದಂದೂ ರಮ್ಯ ತಮ್ಮ ಸ್ವಕ್ಷೇತ್ರಕ್ಕೆ ಗೈರಾಗಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ರಮ್ಯ ಅಭಿಮಾನಿಗಳಲ್ಲಿ ಬೇಸರ ತಂದಿದ್ದರೂ  ಹುಟ್ಟುಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿಲ್ಲ.