ಅಪ್ಪನ ಶ್ರಾದ್ಧಕ್ಕೆ ಕ್ಯಾಬ್ ಚಾಲಕನಾದ ಸ್ಯಾಂಡಲ್ ವುಡ್ ನಟ !! ಇದು ಚಾಮಯ್ಯಮೇಷ್ಟ್ರ ಮಗನ ಸ್ವಾಭಿಮಾನದ ಕಥೆ!!

Mysuru: Great Actor Ashwath son now Cab Driver.
Mysuru: Great Actor Ashwath son now Cab Driver.

ಕನ್ನಡದ ಮಹಾನ್ ನಟ ಹಾಗೂ ಸ್ವಾಭಿಮಾನಿ ಹಿರಿ ಜೀವ ಚಾಮಯ್ಯ ಮೇಷ್ಟ್ರನ್ನು ಕನ್ನಡ ಚಿತ್ರರಂಗವಾಗಲಿ ಅಥವಾ ಚಿತ್ರರಸಿಕರಾಗಲಿ ಮರೆತಿಲ್ಲ. ತಮ್ಮ ಮನೋಜ್ಞ ಅಭಿನಯ ಹಾಗೂ ಪ್ರಾಮಾಣಿಕತೆಯಿಂದಲೇ ಕನ್ನಡಿಗರ ಮನಗೆದ್ದ ನಟ ಅಶ್ವತ್ಥ.

ಅಶ್ವತ್ಥ ಅವರ ಪುತ್ರ ಶಂಕರ ಅಶ್ವತ್ಥ ಕೂಡ ತಂದೆಯ ಹಾದಿಯನ್ನೇ ತುಳಿದು ಕನ್ನಡ ಚಿತ್ರರಂಗಕ್ಕೆ ಬಂದು ಹಲವಾರು ಚಿತ್ರ, ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಆದರೇ ಇತ್ತೀಚಿಗೆ ಚಿತ್ರರಂಗ ಅವರನ್ನು ಮರೆತಿದ್ದು, ಅವಕಾಶ ಕೊರತೆಯಿಂದ ನರಳುತ್ತಿರುವ ನಟ ಶಂಕರ್ ಅಶ್ವತ್ಥ ಜೀವನ ನಿರ್ವಹಣೆಗಾಗಿ ಕ್ಯಾಬ್​ ಡ್ರೈವರ್​​ ಆಗಿ ದುಡಿಯುತ್ತಿದ್ದಾರೆ. ಚಿತ್ರರಂಗದ ಹಿರಿಯ ನಟನ ಪುತ್ರ ಇದೀಗ ಪ್ರಯಾಣಿಕರ ಸಾರಥಿಯಾಗಿದ್ದು, ಕನ್ನಡದಲ್ಲಿ ಅವಕಾಶವಂಚಿತರಾಗಿ ನೊಂದ ನಟ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಹೌದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಬರ್​ ಸೇವೆ ಬಳಸುವ ಪ್ರಯಾಣಿಕರು ನೀವಾಗಿದ್ದರೇ ನಿಮಗೊಂದು ದಿನ ನೀವು ಕಿರು ಮತ್ತೆ ಹಿರಿತೆರೆಯಲ್ಲಿ ನೋಡಿದ ನಟ ಶಂಕರ್ ಅಶ್ವತ್ಥ ಚಾಲಕರಾಗಿ ಎದುರಾದರೇ ಅಚ್ಚರಿಯೇನಿಲ್ಲ. ಹೌದು ಅವಕಾಶಗಳ ಕೊರತೆಯಿಂದ ಕಂಗಾಲಾಗಿರುವ ನಟ ಶಂಕರ್ ಅಶ್ವತ್ಥ ಇದೀಗ ಜೀವನ ನಿರ್ವಹಣೆಗಾಗಿ ಉಬರ್​​ ಚಲಾಯಿಸಲು ಆರಂಭಿಸಿದ್ದಾರೆ.

 

ಈ ಬಗ್ಗೆ ಬಿಟಿವಿ ನ್ಯೂಸ್​ ಪ್ರತಿನಿಧಿ ರಾಘವೇಂದ್ರ ಅವರ ಜೊತೆ ತಮ್ಮ ಮನದಾಳದ ನೋವು ಹಂಚಿಕೊಂಡಿರುವ ಶಂಕರ್ ಅಶ್ವತ್ಥ ಚಿತ್ರರಂಗದಲ್ಲಿ ಸಿಗುತ್ತಿರುವ ಕಡಿಮೆ ಅವಕಾಶಗಳಿಂದ ಬದುಕು ಸಾಗಿಸುವುದು ದುಸ್ತರವಾಗುತ್ತಿದೆ. ಚಿತ್ರೀಕರಣದಲ್ಲಿರುವ ದಿನಗಳಿಗಿಂತ ಬಿಡುವು ದಿನಗಳೇ ಅಧಿಕವಾಗುತ್ತದೆ. ಸಿನಿಮಾ ಮಾಧ್ಯಮ ವಿಸ್ತಾರವಾಗಿದ್ದರೂ ಅದು ಜನರೇಷನ್​ ಗ್ಯಾಪ್​ನಿಂದಲೋ ಏನು..ನನ್ನಂತಹವರಿಗೆ ಅವಕಾಶಗಳು ಕ್ಷೀಣಿಸಿವೆ. ಹಾಗೆಂದು ಸಿನಿಮಾರಂಗವನ್ನು ಧೂಷಿಸಲು ನಾನು ಸಿದ್ಧನಿಲ್ಲ. ನಮ್ಮ ತಂದೆ ನನಗೆ ಸ್ವಾಭಿಮಾನದಿಂದ ಬದುಕುವುದನ್ನ ಕಲಿಸಿಕೊಟ್ಟಿದ್ದಾರೆ. ಯಾವತ್ತು ಯಾರ ಮುಂದೆಯೂ ಅವಕಾಶಕ್ಕಾಗಿಯಾಗಲಿ, ಹಣಕ್ಕಾಗಿಯಾಗಲಿ ಕೈಚಾಚಿ ನಿಲ್ಲುವ ಸ್ವಭಾವ ನಮ್ಮ ಕುಟುಂಬದ್ದಲ್ಲ. ಹಾಗಾಗಿ ನನ್ನ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಉಬರ್​​ ಚಾಲನೆಗೆ ಮುಂಧಾಗಿದ್ದೇನೆ ಎಂದರು.
ಜನವರಿ ತಿಂಗಳಲ್ಲಿ ನನ್ನ ತಂದೆಯ 8ನೇ ವರ್ಷದ ಶ್ರಾದ್ಧ ಬರುತ್ತಿದೆ. ಶ್ರಾದ್ಧ ಕಾರ್ಯಕ್ಕೆ ಸಾಲ ಮಾಡಿ, ಚಿನ್ನ ಮಾರಿ ಮಾಡುವಂತಿಲ್ಲ. ಕಷ್ಟಪಟ್ಟು ಸಂಪಾದಿಸಿದ ಹಣದಲ್ಲೇ ಅದನ್ನ ನೆರವೇರಿಸಿ ತಂದೆಯವರ ಆತ್ಮವನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದಲೇ ಉಬೇರ್​ ಕ್ಯಾಬ್​ಗೆ ಚಾಲಕನಾಗಿ ಸೇವೆ ಆರಂಭಿಸಿದ್ದೇನೆ. ಇದರಿಂದ ನಮ್ಮ ಆರ್ಥಿಕ ಸಮಸ್ಯೆ ಸ್ವಲ್ಪಮಟ್ಟಿಗೆ ನೀಗಿದೆ. ಪ್ರಾಮಾಣಿಕವಾಗಿ ಯಾವ ಕೆಲಸ ಮಾಡಿದರೂ ಅದು ತಪ್ಪಲ್ಲ ಅಲ್ವೇ ಎಂದು ಪ್ರಶ್ನಿಸಿದ್ದಾರೆ. ಆದರೂ ಚಿತ್ರರಂಗದ ದಿಗ್ಗಜ ನಟರ ಪುತ್ರ ಕೆಲಸಕ್ಕಾಗಿ ರಸ್ತೆಗಿಳಿಯುವಂತಾಗಿದ್ದು ಮಾತ್ರ ದುರಂತವೇ ಸರಿ. ಚಿತ್ರರಂಗ ಇವರ ಕಷ್ಟಕ್ಕೆ ಸ್ಪಂದಿಸುತ್ತಾ ಕಾದುನೋಡಬೇಕಿದೆ.