ಯುಕೆಯಲ್ಲಿ ಡಿಸೆಂಬರ್ 1 ರಂದು ತೆರೆಕಾಣುತ್ತಾ ಪದ್ಮಾವತಿ?

'Padmavati' cleared by British censors for December 1 release.
'Padmavati' cleared by British censors for December 1 release.

: ಭಾರತದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಬಹುನೀರಿಕ್ಷಿತ ಪದ್ಮಾವತಿ ಚಿತ್ರದ ಬಿಡುಗಡೆಗೆ ಮುಹೂರ್ತ ಕೂಡಿ ಬರುವ ಲಕ್ಷಣಗಳೇ ಕಾಣುತ್ತಿಲ್ಲ. ಅಲ್ಲದೇ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರಕ್ಕೆ ಭಾರತೀಯ ಸೆನ್ಸಾರ್ ಮಂಡಳಿ ಪ್ರಮಾಣಪತ್ರವನ್ನು ನೀಡಿರಲಿಲ್ಲ. ಆದ್ರೀಗ, ಲಂಡನ್ ನಲ್ಲಿ ಪದ್ಮಾವತಿ ಚಿತ್ರ ಸೆನ್ಸಾರ್ ಮುಗಿಸಿದ್ದು, ಲಂಡನ್ ನಲ್ಲಿ ಚಿತ್ರ ಬಿಡುಗಡೆಗೆ ಕ್ಲೀನ್ ಚಿಟ್ ಸಿಕ್ಕಿದೆ.

'Padmavati' cleared by British censors for December 1 release.
‘Padmavati’ cleared by British censors for December 1 release.

ಭಾರತದಲ್ಲಿ ಪದ್ಮಾವತಿ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರಾಣಿ ಪದ್ಮಾವತಿಯನ್ನು ಚಿತ್ರದಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಕೂಗು ಕೇಳಿಬಂದಿದೆ. ಹೀಗಾಗಿ ಭಾರತದಲ್ಲಿ ಪದ್ಮಾವತಿ ಚಿತ್ರವನ್ನ ನಿ‍ಷೇಧಿಸಬೇಕು ಎಂದು ರಜಪೂತ ಕರಣಿ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಹಲವೆಡೆ ಭಾರತ್ ಬಂದ್ ಗೂ ಕರೆ ನೀಡಿದ್ದರು.

'Padmavati' cleared by British censors for December 1 release.
‘Padmavati’ cleared by British censors for December 1 release.

ಈ ಮಧ್ಯೆ ಭಾರತೀಯ ಸೆನ್ಸಾರ್ ಮಂಡಳಿ ಕೂಡ ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಿರಲಿಲ್ಲ. ಇದೀಗ, ಲಂಡನ್ ಸೆನ್ಸಾರ್ ಮಂಡಳಿ ಪದ್ಮಾವತಿ ಚಿತ್ರಕ್ಕೆ ಕ್ಲೀನ್ ಚೀಟ್ ನೀಡಿರುವುದು, ಭಾರತೀಯ ಸೆನ್ಸಾರ್ ಮಂಡಳಿಯನ್ನ ಪ್ರಶ್ನಿಸುವಂತಿದೆ. ಡಿಸೆಂಬರ್ 1 ರಂದು ವರ್ಲ್ಡ್ ವೈಡ್ ಪದ್ಮಾವತಿ ಚಿತ್ರವನ್ನ ಬಿಡುಗಡೆ ಮಾಡಲು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ಧರಿಸಿದ್ದರು. ಆದ್ರೆ, ಭಾರತದಲ್ಲಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈಗ ಲಂಡನ್ ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಯುಕೆಯಲ್ಲಿ ಪದ್ಮಾವತಿ ಡಿಸೆಂಬರ್ 1 ಕ್ಕೆ ತೆರೆ ಕಾಣುವ ಸಾಧ್ಯತೆ ಇದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.