ನಟಿ ದೀಪ್ತಿ ಕಾಪ್ಸೆಗೆ ಅಶ್ಲೀಲಮೆಸೆಜ್ ಕಾಟ!!

ಇತ್ತೀಚೆಗೆ ಸ್ಯಾಂಡಲ್‍ವುಡ್​​ನಲ್ಲಿ ನಟಿಯರಿಗೆ ಅದೃಷ್ಟವೇ ಸರಿ ಇದ್ದಂತಿಲ್ಲ. ಹೌದು ಪ್ರತಿನಿತ್ಯ ಒಂದಿಲ್ಲೊಂದು ನಟಿಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದ್ದರೇ, ಇನ್ನೊಂದೆಡೆ ನಟಿಯರಿಗೆ ಅಶ್ಲೀಲ ಮೆಸೆಜ್​ಗಳು ಬರುತ್ತಿರುವ ಸಂಗತಿಗಳು ಸಾಮಾನ್ಯವಾಗಿದೆ.

ad


ಇದೀಗ ಈ ಸಾಲಿಗೆ ಸಿನಿರಂಗದ ಯುವನಟಿ ದೀಪ್ತಿ ಕಾಪ್ಸೆ ಸೇರ್ಪಡೆಯಾಗಿದ್ದಾರೆ. ಕನ್ನಡ ಸಿನಿರಂಗದ ಯುವ ನಾಯಕಿ ದೀಪ್ತಿ ಕಾಪ್ಸೆಗೆ ಕಾಮುಕನ ಕಾಟ ಶುರುವಾಗಿದೆ. ನಟಿ ದೀಪ್ತಿ ಕಾಪ್ಸೆಗೆ ಅಪರಿಚಿತ ಯುವಕನೋರ್ವ ವಾಟ್ಸಪ್ ನಲ್ಲಿ ಸೆಕ್ಸ್ ವರ್ಕರ್ಸ್ ಬೇಕಾಗಿದ್ದಾರೆ, ನಿಮಗೆ ಯಾರಾದರು ಗೊತ್ತಿದ್ದರೆ ಹೇಳಿ 20 ವರ್ಷದಿಂದ 35 ವರ್ಷ ವಯಸ್ಸಿನವರಾಗಿರಬೇಕು ಎಷ್ಟು ಹಣ ಬೇಕಾದರು ಕೊಡುತ್ತೇನೆ ಅಂದಿದ್ದಾನೆ ಆ ಕಾಮುಕ ಆಸಾಮಿ. ಯುವಕನ ಈ ಮೆಸೇಜ್​ ನೋಡಿ ಆಕ್ರೋಶಗೊಂಡ ದೀಪ್ತಿ, ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ರಿಪ್ಲೈ ಮಾಡಿದ್ದಾರೆ.

ಅಷ್ಟೆ ಅಲ್ಲ ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಎಂದು ದೀಪ್ತಿ ಕಾಪ್ಸೆ ಖಡಕ್ಕಾಗಿ ಉತ್ತರಿಸಿದ್ದಾರೆ. ಈ ಬಗ್ಗೆ ದೀಪ್ತಿ ತಮ್ಮ ಫೇಸ್ ಬುಕ್ ಪೇಜಿನಲ್ಲಿ ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್ ತೆಗೆದು ಅಪ್ಲೋಡ್ ಮಾಡಿಕೊಂಡು ಆಕ್ರೋಶವನ್ನು ಹೊರಹಾಕಿದ್ದಾರೆ. ಕನ್ನಡದಲ್ಲಿ ಹನಿ ಹನಿ ಇಬ್ಬನಿ, ಜ್ವಲಂತಂ, ಮಾಲ್ಗುಡಿ ಡೇಸ್, ಕಿರೀಟ ಮತ್ತು ಉಪೇಂದ್ರ ಮತ್ತೆ ಬಾ ಸಿನಿಮಾಗಳಲ್ಲಿ ದೀಪ್ತಿ ನಟಿಸಿದ್ದಾರೆ. ಸಧ್ಯ ಬ್ಯಸಿನೆಸ್ ಮ್ಯಾನ್​​​ ಜತೆ ಮದುವೆ ಆಗಿರೋ ದೀಪ್ತಿ ಈ ತರ ಮೆಸೇಜ್​ ಮಾಡಿದವನ ವಿರುದ್ಧ ದೂರು ದಾಖಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.