ವಿಶ್ವ ಮಹಿಳಾ ದಿನಾಚರಣೆಯಂದೇ ತಮ್ಮ ಪತ್ನಿಗೆ ಐಶಾರಾಮಿ ಕಾರು ಗಿಫ್ಟ್ ಮಾಡಿದ ಅಪ್ಪು

ಚಿಕ್ಕಂದಿನಿಂದಲೂ ಬೈಕ್ ಹಾಗೂ ಕಾರು ಕ್ರೇಜ್ ಹೊಂದಿರುವ ಅಪ್ಪು ಮನೆಗೆ ಈಗ ಕೋಟಿ ಬೆಲೆಯ ಐಶಾರಾಮಿ ಬಂದಿದೆ. ವಿಶ್ವ ಮಹಿಳಾ ದಿನಾಚರಣೆಯಂದೇ ತಮ್ಮ ಪತ್ನಿಗೆ ಅಪ್ಪು ಈ ಕಾರು ಗಿಫ್ಟ್ ಮಾಡಿದ್ದಾರೆ.

ad

 

ಈಗಾಗಲೇ ಜಾಗ್ವಾರ್, ಆಡಿ ಹಾಗೂ ಮಿನಿ ಕೂಪರ್​​ನಂತಹ ಐಶಾರಾಮಿ ಕಾರುಗಳ ಒಡೆಯರಾಗಿರುವ ಪವರ್ ಸ್ಟಾರ್, ಇದೀಗ ತಮ್ಮ ಬಹು ದಿನದ ಕನಸಿನ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ. ಅಪ್ಪು ಅವರ ಪತ್ನಿ ಅಶ್ವಿನಿ ಅವರಿಗೆ ಈ ಕಾರು ಖರೀದಿಸಬೇಕೆನ್ನುವ ಆಸೆಯಿತ್ತು. ಈಗ ಅದು ಈಡೇರಿದ್ದು, 5 ಕೋಟಿ ಬೆಲೆಯ ಕಾರು ಸದ್ಯ ಸದಾಶಿವನಗರದಲ್ಲಿರುವ ಅಪ್ಪು ಮನಗೆ ಬಂದಿದೆ.
ಇನ್ನು ಈಗಾಗಲೇ ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಬಳಿ ಲ್ಯಾಂಬೋರ್ಗಿನಿ ಕಾರು ಇದೆ