ಸರ್ಕಾರಿ ಶಾಲಾ ಮಕ್ಕಳಿಗೆ ಪವರ್ ಸ್ಟಾರ್ ಕೊಟ್ಟ ಸಂದೇಶ ಏನು ಗೊತ್ತಾ??

Power Star Puneeth Rajkumar Gave Message to Government School's Children.
Power Star Puneeth Rajkumar Gave Message to Government School's Children.

ದೊಡ್ಮನೆ ಹುಡುಗ ಅಪ್ಪುಗೆ ಮಕ್ಕಳೆಂದರೆ ತುಂಬಾ ಇಷ್ಟಾ.ಅಷ್ಟೆ ಅಲ್ಲ ಅಪ್ಪು ಅಂದ್ರೆ ಮಕ್ಕಳಿಗೂ ಸಿಕ್ಕಾಪಟ್ಟೆ ಪ್ರೀತಿ.

ad

ಅಪ್ಪು ಹಾಗು ಮಕ್ಕಳ ಮಧ್ಯೆ ಒಂದು ಕನೆಕ್ಷನ್ ಇದೆ. ಹೀಗಾಗಿ ಅಪ್ಪು ಸರ್ಕಾರಿ ಶಾಲೆಯಲ್ಲಿ ಓದುತ್ತಿರೋ ಮಕ್ಕಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಆ ಸಂದೇಶ ಕೇಳಿದ್ರೆ ಇದು ಹೌದು ಅಲ್ವಾ ಅಂತ ಅನ್ನಿಸುತ್ತೆ.. ಹಾಗಾದ್ರೆ ಸನ್​ ಆಫ್​ ರಾಜಕುಮಾರ ಸರ್ಕಾರಿ ಶಾಲಾ ಮಕ್ಕಳಿಗೆ ಕೊಟ್ಟ ಆ ಸಂದೇಶ ಏನು ನೀವೆ ನೋಡಿ.
ಪುನೀತ್​ ರಾಜ್​ಕುಮಾರ್​.. ರೊಮ್ಯಾಂಟಿಕ್​​, ಸೆಂಟಿಮೆಂಟ್​​, ಆ್ಯಕ್ಷನ್ ಹೀಗೆ ಯಾವುದೇ ಪಾತ್ರದಲ್ಲೂ ಲೀಲಾಜಾಲವಾಗಿ ನಟಿಸೋ ಸ್ಟಾರ್​ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಅದನ್ನ ಹೊರತುಪಡಿಸಿ ಪುನೀತ್​​ ಬಗ್ಗೆ ಹೇಳೋದಾದ್ರೆ ಹೆಸರಲ್ಲೇ ಒಂದು ಪ್ರೀತಿ ಇದೆ. ಅಭಿಮಾನ ಕಾಣುತ್ತೆ. ಸರಳತೆ ತೋರುತ್ತೆ. ವಿಶ್ವಾಸ ಹುಟ್ಟುತ್ತೆ.

ನಂಬಿಕೆ ಬೆಳೆಯುತ್ತೆ. ಯಾಕಂದ್ರೆ ಪುನೀತ್​​​​ ರಾಜ್​ಕುಮಾರ್​​ಗೆ ಇರೋ ಪವರ್​ ಅಂಥದ್ದು.
ಪವರ್ ಸ್ಟಾರ್ ಪುನೀತ್​​ಗೆ ಮಕ್ಕಳಂದ್ರೆ ಸಿಕ್ಕಾಪಟ್ಟೆ ಪ್ರೀತಿ. ಬಡ ಮಕ್ಕಳ ಮೇಲೆ ಒಂದು ಹಿಡಿ ಜಾಸ್ತಿಯೇ ಪ್ರೀತಿ ತೋರಿಸ್ತಾರೆ. ಹೀಗಾಗಿ ಈ ದೊಡ್ಮನೆಯ ಸನ್​ ಆಫ್​ ರಾಜಕುಮಾರ್​ ತಮ್ಮ ಟ್ರಸ್ಟ್​​ ಮೂಲಕ ಬಡ ಮಕ್ಕಳ ಅಭಿವೃದ್ದಿಯ ಕೆಲಸ ಮಾಡ್ತಿದ್ದಾರೆ. ಆದ್ರೆ ಇದನ್ನ ಪುನೀತ್ ಎಂದೂ ಎಲ್ಲೂ ಹೇಳ್ಕೊಂಡಿಲ್ಲ. ಇತ್ತೀಚೆಗೆ ಸರ್ಕಾರಿ ಸ್ಕೂಲ್​​ನಲ್ಲಿ ಓದೋರ ಸಂಖ್ಯೆ ಕಡಿಮೆ. ಎಲ್ರು ಖಾಸಗಿ ಶಾಲೆಯಲ್ಲೇ ತಮ್ಮ ಮಕ್ಕಳು ಓದ್ಬೇಕು ಅಂತ ಎಗ್ಗಿಲ್ಲದೆ ಹಣ ಖರ್ಚು ಮಾಡಿ ಪ್ರೈವೇಟ್​ ಸ್ಕೂಲ್​​ಗೆ ಸೇರಿಸ್ತಾರೆ. ಇದೀಗ ಅಪ್ಪು, ಸರ್ಕಾರಿ ಶಾಲೆಯ ಮಹತ್ವ ಗೊತ್ತಿಲ್ಲದೇ ಇದ್ದೋರಿಗೆ ಹಾಗು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದವರಿಗೆ ಒಂದು ಸಂದೇಶ ರವಾಗಿನಿಸಿದ್ದಾರೆ..

ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಇದನ್ನ ಅರ್ಥ ಮಾಡಿಕೊಂಡಿರೋ ಅಪ್ಪು ಸರ್ಕಾರಿ ಶಾಲೆಯಲ್ಲಿ ಓದಿದವರ ಮಹತ್ವ ಏನು ಅನ್ನೋದನ್ನ ತಮ್ಮ ಮಾತುಗಳಲ್ಲಿ ಹೇಳಿದ್ದಾರೆ. ವಿದ್ಯೆ ಅನ್ನೋದು ಎಲ್ಲರಿಗೂ ಬರುವಂಥದ್ದು, ಇದನ್ನ ಸರಿಯಾಗಿ ಬಳಸಿಕೊಳ್ಳಬೇಕು. ಅದ್ರಲ್ಲೂ ದೇಶ ಮುನ್ನಡೆಯುತ್ತಿರೋದು ಸರ್ಕಾರಿ ಸಾಲೆಗಳಲ್ಲಿ ಓದಿದವರಿಂದ.. ಎಲ್ಲಾ ಮಕ್ಕಳು ಚೆನ್ನಾಗಿ ಓದಬೇಕು ಅಂತ ಅಪ್ಪು ಹೇಳಿದ್ದಾರೆ.. ಪುನೀತ್ ಈ ಹಿಂದೆ ಮೇಲುಕೋಟೆಯಲ್ಲಿರುವ ಸುಮಾರು 140 ವರ್ಷಗಳ ಇತಿಹಾಸ ಹೊಂದಿರೋ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಅಭಿವೃದ್ದಿಗೆ ಪಣ ತೊಟ್ಟಿದ್ರು. ಅಷ್ಟೆ ಅಲ್ಲ ಆ ಸರ್ಕಾರಿ ಶಾಲೆಯನ್ನ ಆಧುನಿಕರಣ ಮಾಡೋಕೆ ಅಪ್ಪು ಅಭಯ ಹಸ್ತ ನೀಡಿದ್ರು, ಈಗ ಪುನೀತ್​​ ಸರ್ಕಾರಿ ಶಾಲೆಯಲ್ಲಿ ಓದೋ ಎಲ್ಲಾ ಮಕ್ಕಳು ಚೆನ್ನಾಗಿ ಓದಬೇಕು ಅಂತ ಹೇಳಿದ್ದಾರೆ..