ನೋ ಪಾರ್ಕಿಂಗ್​​ನಲ್ಲಿ ರಕ್ಷಿತ್​ ಶೆಟ್ಟಿ ಕಾರು- ಪೇಸ್​ಬುಕ್​ನಲ್ಲಿ ಈ ​ ಅವಾಂತರದ ವಿರುದ್ಧ ಕಿಡಿಕಾರಿದ ಟೆಕ್ಕಿ!

 

ad

ಸ್ಯಾಂಡಲವುಡ್​ ನಟ-ನಟಿಯರ ಸುತ್ತ ಯಾವಾಗ್ಲೂ ಒಂದಲ್ಲ ಒಂದು ವಿವಾದಗಳು ಸುತ್ತುತ್ತಲೇ ಇರುತ್ತವೆ. ಇದೀಗ ಅಂತಹುದೇ ನಿಯಮ ಉಲ್ಲಂಘನೆ ಕಿರಿಕ್​​ಗೆ ಸ್ಟಾರ್ ಆಕ್ಟರ್​​ ರಕ್ಷಿತ್ ಶೆಟ್ಟಿ ಗುರಿಯಾಗಿದ್ದಾರೆ. ಹೌದು ರೀಲ್​ ಲೈಫ್​​ನಲ್ಲಿ ನೀತಿ-ನಿಯಮಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ನಟರು ನಿಜಜೀವನದಲ್ಲಿ ಇದನ್ನು ಅನುಸರಿಸೋದಿಲ್ಲ ಅನ್ನೋ ಜನರ ಆಕ್ರೋಶ ಕಿರಿಕ್​ ಪಾರ್ಟಿ ನಟ ರಕ್ಷಿತ್ ಶೆಟ್ಟಿ ಕೂಡ ನೋ ಪಾರ್ಕಿಂಗ್​ ನಲ್ಲಿ ಕಾರು ನಿಲ್ಲಿಸಿ ಆಕ್ರೋಶಕ್ಕೆ ತುತ್ತಾಗಿದ್ದಾರೆ.

 

ಟೆಕ್ಕಿ ಧನಂಜಯ್ ಅನ್ನೋರು ರಕ್ಷತ್ ಶೆಟ್ಟಿ ನೋ ಫಾರ್ಕಿಂಗ್​ನಲ್ಲಿ ಕಾರ್​ ಪಾರ್ಕಿಂಗ್ ಮಾಡಿರೋ ಫೋಟೊ ಅಪ್​ಲೋಡ್​ ಮಾಡಿದ್ದು, ಹಲವು ಭಾರಿ ಹೇಳಿದ್ರೂ ರಕ್ಷಿತ್​ ಶೆಟ್ಟಿಯ ಚಾಲಕ ನಿಯಮ ಪಾಲಿಸುತ್ತಿಲ್ಲ. ರಕ್ಷಿತ್​ ಶೆಟ್ಟಿ ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಧನಂಜಯ್ ಪೋಟೋಗಳ ಜೊತೆ ಬರೆದುಕೊಂಡಿದ್ದು, ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.
ರಕ್ಷಿತ್ ಶೆಟ್ಟಿ ಜೆ.ಪಿ.ನಗರದ 6ನೇ ಹಂತದಲ್ಲಿ ಈ ಅವಾಂತರ ನಡೆದಿದ್ದು, ನೋ ಪಾರ್ಕಿಂಗ್​ ಜಾಗದಲ್ಲಿ ಕಾರು ನಿಲ್ಲಿಸಿದ ರಕ್ಷಿತ್ ಶೆಟ್ಟಿ ಚಾಲಕನಿಗೆ ಹಲವು ಬಾರಿ ಹೇಳಿದ್ರೂ ತೆಗೆದಿಲ್ಲ ಎಂದು ಟೆಕ್ಕಿ ಧನಂಜಯ್ ಆರೋಪಿಸಿದ್ದಾರೆ. ಇನ್ನು ಈ ಆರೋಪಕ್ಕೆ ರಕ್ಷಿತ್​ ಇನ್ನು ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಚಾಲಕ ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸ್ತಾ ಇರೋದು ರಕ್ಷಿತ್ ಗಮನಕ್ಕೆ ಬಂದಿದೆಯೋ ಇಲ್ವೋ ಅನ್ನೋದು ಕೂಡ ಸ್ಪಷ್ಟವಾಗಿಲ್ಲ.