ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ದಶರಥ ಚಿತ್ರ ತಂಡಕ್ಕೆ ಸಂಕಷ್ಟ

ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ದಶರಥ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾದ ಹಾಡೊಂದಕ್ಕೆ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ಕಳಿಸಿದ್ದಾರೆ. ಸಂಗೀತ ನಿರ್ದೇಶಕ ಗುರುಕಿರಣ್. ಚಿತ್ರದ ನಿರ್ದೇಶಕ ಎಂ.ಎಸ್.ರಮೇಶ್. ಸಾಹಿತ್ಯ ರಚನೆಕಾರ ವಿ.ಮನೋಹರ್​ಗೆ​​​ ನೋಟಿಸ್ ನೀಡಲಾಗಿದೆ.

ದಶರಥ ಚಿತ್ರದ ವಿರುದ್ಧ ವಕೀಲ ಗಾದಿಲಿಂಗಪ್ಪ ಎಂಬುವರು ಸಿಟಿ ಸಿವಿಲ್ ಕೋರ್ಟ್​ಗೆ ದೂರು ನೀಡಿದ್ದಾರೆ. ಕರಿ ಕೋಟ್ ಹಾಕೋರೆಲ್ಲಾ.. ಅನ್ನೋ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಆ ಹಾಡು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ. ಈ ಬಗ್ಗೆ ಕಾನೂನಿನ ರೀತಿ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಗಾದಿ ಲಿಂಗಪ್ಪ ಆಗ್ರಹಿಸಿದ್ದಾರೆ.

ರವಿಚಂದ್ರನ್​ ಅಭಿನಯದ 'ದಶರಥ' ಚಿತ್ರ ತಂಡಕ್ಕೆ ವಕೀಲರೊಬ್ಬರಿಂದ ನೋಟಿಸ್…!

ರವಿಚಂದ್ರನ್​ ಅಭಿನಯದ 'ದಶರಥ' ಚಿತ್ರ ತಂಡಕ್ಕೆ ವಕೀಲರೊಬ್ಬರಿಂದ ನೋಟಿಸ್…!

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮಾರ್ಚ್ 5, 2019