ದೀಪಿಕಾ ಪಡುಕೋಣೆಗೆ ಸಿದ್ದರಾಮಯ್ಯ ಬೆಂಬಲ ! ಪದ್ಮಾವತಿಗೆ ಭದ್ರತೆ ನೀಡಿ ಅಂದ್ರು ಸಿಎಂ !!

ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿಯವರ ಬಹುನೀರಿಕ್ಷಿತ ಚಿತ್ರ ಪದ್ಮಾವತಿ ಚಿತ್ರ ಸಧ್ಯಕ್ಕೆ ಬಿಡುಗಡೆಯಾಗುವ ಯಾವುದೇ ಲಕ್ಷಣವಿಲ್ಲ. ಹೌದು ಈ ಚಿತ್ರದ ಸುತ್ತಲಿನ ವಿವಾದ ಸಧ್ಯ ನಿಲ್ಲುವ ಸಾಧ್ಯತೆ ಇದೆ. ಹೀಗಾಗಿ ಚಿತ್ರ ಪ್ರದರ್ಶನದ ನಿಗದಿಯಾಗಿದ್ದ ದಿನಾಂಕವನ್ನು ಮುಂದೂಡಲಾಗಿದೆ. ಈ ಮಧ್ಯೆ ಚಿತ್ರದಲ್ಲಿ ನಟಿಸಿರುವ ಕನ್ನಡತಿ ನಟಿ ದೀಪಿಕಾ ಪಡುಕೋಣೆ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

ಇನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ ಪಡುಕೋಣೆ ತಲೆಗೆ ಹರಿಯಾಣ ಬಿಜೆಪಿಯ ನಾಯಕ ಸೂರಜ್ ಪಾಲ್ ಅಮು 10 ಕೋಟಿ ರೂ. ಘೋಷಿಸಿದ್ದಾರೆ. ಜೊತೆಗೆ ತಲೆ ತಂದವರ ಕುಟುಂಬದ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ಬಿಜೆಪಿ ನಾಯಕ ಅನೌನ್ಸ್ ಮಾಡಿದ್ದಾರೆ. ಹಾಗೆಯೇ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ನಟ ರಣವೀರ್ ಸಿಂಗ್ ಕಾಲುಗಳನ್ನು ಕತ್ತರಿಸುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ. ಅಗತ್ಯಬಿದ್ದರೆ ಬಿಜೆಪಿ ಪಕ್ಷವನ್ನು ತ್ಯಜಿಸುತ್ತೇನೆ ಅಂತಲೂ ಅಮು ಹೇಳಿಕೊಂಡಿದ್ದಾರೆ.

ಆದರೇ ಕರ್ನಾಟಕ ಮೂಲದ ನಟಿ ದಿಪೀಕಾ ಪಡುಕೋಣೆ ವಿರುದ್ಧ ವ್ಯಕ್ತವಾಗಿರುವ ಆಕ್ರೋಶದ ಬಗ್ಗೆ ಕರ್ನಾಟಕದ ಪವರ್ ಮಿನಿಸ್ಟರ್​​ ಡಿ.ಕೆ.ಶಿವಕುಮಾರ್ ಗರಂ ಆಗಿದ್ದು, ಈ ಬಗ್ಗೆ ಟ್ವಿಟ್​ ಮಾಡಿ ತಮ್ಮ ಅಸಮಧಾನ ತೋಡಿಕೊಂಡಿದ್ದಾರೆ. ಕರ್ನಾಟಕದ ಮನೆಮಗಳು ದೀಪಿಕಾ ಪಡುಕೋಣೆಗೆ ಸೂಕ್ತ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲದೆ ದೀಪಿಕಾ ಪಡುಕೋಣೆ ಹಾಗೂ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಶಿರಚ್ಛೇದ ಮಾಡಿದ್ರೆ 10 ಕೋಟಿ ಬಹುಮಾನ ಘೋಷಣೆ ಮಾಡಿರುವ ಬಿಜೆಪಿ ಮುಖಂಡ ಸೂರಜ್ ಪಾಲ್​ ವಿರುದ್ಧ ಹರ್ಯಾಣಾ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಬಿಜೆಪಿ ಕ್ಷಮೆ ಕೇಳಬೇಕು ಮತ್ತು ಇನ್ನು ಮುಂದೆ ಆ ರೀತಿ ಮಾಡಲ್ಲ ಎಂದು ಭರವಸೆ ನೀಡಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಕೂಡ ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತಿದ್ದು, ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಈಗಾಗಲೇ ನಾನು ಹರ್ಯಾಣಾ ಸಿಎಂ ಜೊತೆ ಮಾತನಾಡಿದ್ದು, ದಿಪೀಕಾ ಪಡುಕೋಣೆಗೆ ಅಗತ್ಯ ಭದ್ರತೆ ನೀಡುವಂತೆ ಸೂಚಿಸಿದ್ದೇನೆ ಎಂದರು.