ಮಾನವ ಕಳ್ಳಸಾಗಾಣಿಕೆ ಆರೋಪ- ಬಾಲಿವುಡ್​ ಗಾಯಕ ದಲೇರಮೆಹಂದಿ ಎರಡು ವರ್ಷ ಜೈಲಿಗೆ!

Sentenced to 2 years in Prison to Bollywood Daler Mehndi.

ಬಾಲಿವುಡ್​​ ನಟರು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರೋದು ಇದೇ ಮೊದಲಲ್ಲ.

ಸಂಜಯ್ ದತ್ತ ಸೇರಿದಂತೆ ಹಲವು ಜೈಲು ಶಿಕ್ಷೆ ಅನುಭವಿಸಿದ ಬೆನ್ನಲ್ಲೇ ಇದೀಗ ಈ ಸಾಲಿಗೆ ಬಾಲಿವುಡ್​ ಖ್ಯಾತ ಗಾಯಕ ದಲೇರ್​​ ಮೆಹಂದಿ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ವಿಶ್ವದಾದ್ಯಂತ ತಮ್ಮ ಹಾಡುಗಳಿಂದಲೇ ಮೋಡಿ ಮಾಡಿದ ಗಾಯಕ ದಲೇರ್ ಮೆಹಂದಿ ಅತ್ಯಂತ ಗಂಭೀರವಾದ ಮಾನವ ಕಳ್ಳಸಾಗಾಣಿಕೆ ಕೇಸ್​​ನಲ್ಲಿ ದೋಷಿ ಎಂದು ಸಾಬಿತಾಗಿದ್ದು, ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದಾರೆ.

ಬಾಲಿವುಡ್​ ಗಾಯಕ ದಲೇರ ಮೆಹಂದಿ ಮೇಲೆ 2003ರಲ್ಲಿ ಪ್ರಕರಣ ದಾಖಲಾಗಿತ್ತು. ಅನುಮತಿಯಿಲ್ಲದೇ ವಿದೇಶಕ್ಕೆ ಮಾನವ ಕಳ್ಳಸಾಗಾಣಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕಾರ್ಯಕ್ರಮದ ಹೆಸರಿನಲ್ಲಿ ಯುವತಿಯರನ್ನು ವಿದೇಶಕ್ಕೆ ಕರೆದೊಯ್ಯುತ್ತಿದ್ದ ದಲೇರ್ ಮೆಹಂದಿ ಕಾರ್ಯಕ್ರಮದ ಬಳಿಕ ಆ ಯುವತಿಯರನ್ನು ಅಲ್ಲಿಯೇ ಬಿಟ್ಟು ಬಂದಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಪಂಜಾಬ್​ನ ಪಟಿಯಾಲ್​ ಕೋರ್ಟ್​​​​ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಕೇವಲ ದಲೆರ್ ಮೆಹಂದಿ ಮಾತ್ರವಲ್ಲದೇ ಅವರ ಸಹೋದರ ಶಮ್ಮೇರ್​ ಮೆಹಂದಿಯನ್ನು ಕೂಡ ಆಪರಾಧಿ ಎಂದು ನ್ಯಾಯಾಲಯ ತೀರ್ಪಿತ್ತಿದೆ. ಒಟ್ಟಿನಲ್ಲಿ ಬಾಲಿವುಡ್​​ ಗಾಯಕ ದಲೇರ್ ಮೆಹಂದಿ ಜೈಲು ಸೇರೊದು ಖಚಿತವಾದಂತಾಗಿದೆ.