‘ನನ್ನ ಗಂಡನೇ ವಿಡಿಯೋ ಮಾಡಿದ್ದು..! ಎಂದ ಅಗ್ನಿಸಾಕ್ಷಿ ರಾಜೇಶ್ ಪತ್ನಿ

ನಾನು ಯಾರ ಮುಂದೆಯೂ ಕುಡಿದು ಗಲಾಟೆ ಮಾಡಿಲ್ಲ.. ನನ್ನ ಗಂಡನ ಮುಂದೆಯೇ ಕುಡಿದಿದ್ದು. ನಾನು ಕುಡಿಯೋ ವಿಡಿಯೋವನ್ನ ಸ್ವತಹ ನನ್ನ ಗಂಡನೇ ಮಾಡಿದ್ದು ಅಂತ ಅಗ್ನಿಸಾಕ್ಷಿ ಸೀರಿಯಲ್ ನ ರಾಜೇಶ್ ಪತ್ನಿ ಶೃತಿ ಮಾದ್ಯಮಗಳ ಮುಂದೆ ಹೇಳಿದ್ದಾರೆ.

ಬೆಂಗಳೂರಿನ ಬಸವಗುಡಿ ಮಹಿಳಾ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿ ಮಾತನಾಡಿದ ಅವರು ನನಗೆ ಪತಿ ರಾಜೇಶ್ ಮೇಲೆ ಯಾವುದೇ ಕೋಪವಿಲ್ಲ. ಅವರು ನನ್ನನ್ನು ಮನೆಗೆ ಕರೆದುಕೊಂಡು ಹೋಗಲಿ.. ನಾನು ಕುಡಿಯುವಾಗ ಅವರೇ ತಮಾಷೆಗೆ ವಿಡಿಯೋ ಮಾಡಿದ್ದು ಎಂದರು. ಅಷ್ಟೇ ಅಲ್ಲಾ ಅವರ ತಾಯಿಯನ್ನ ನೋಡಿಕೊಂಡಿಲ್ಲ ಎಂದು ರಾಜೇಶ್ ಹೇಳಿದ್ದಾರೆ.. ಆದ್ರೆ ಅವರ ತಾಯಿ ಈಗ ಧಾರವಾಡದಲ್ಲಿದ್ದಾರೆ ಎಂದರು..

ಇದೇ ತಿಂಗಳು 21 ನೇ ತಾರೀಖು ಅಗ್ನಿಸಾಕ್ಷಿ ಸಿರೀಯಲ್ ನ ನಟ ರಾಜೇಶ್ ಪತ್ನಿ ಶೃತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಬಂದು,.. ತನ್ನ ಗಂಡ ವರದಕ್ಷಿಣಿ ತರುವಂತೆ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ಕೊಡ್ತಿದ್ದಾನೆ. ಅಷ್ಟೇ ಅಲ್ಲಾ ವರದಕ್ಷಿಣಿ ತಂದಿಲ್ಲ ಎಂದು ಮನೆಯಿಂದ ಹೊರ ಹಾಕಿದ್ದಾನೆ ಎಂದು ದೂರು ಕೊಟ್ಟಿದ್ದರು.

ದೂರಿನ ಆಧಾರದ ಮೇಲೆ ರಾಜೇಶ್ ನನ್ನು ಠಾಣೆಗೆ ಕರೆಸಿದ್ದ ಇನ್ಸ್ ಪೆಕ್ಟರ್ ಸತ್ಯವತಿ ವಿಚಾರಣೆ ನಡೆಸಿದ್ರು. ವಿಚಾರಣೆ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ್ದ ರಾಜೇಶ್ .. ತನ್ನ ಹೆಂಡತಿ ಕುಡಿದ ಮತ್ತಿನಲ್ಲಿ ತನಗೂ ಮತ್ತು ತನ್ನ ತಾಯಿಗೂ ಮಾನಸಿಕವಾಗಿ ಹಿಂಸೆ ಕೊಡ್ತಿದ್ದಾರೆ.. ನಾನು ಈಗಾಗಲೇ  ಆಕೆಯ ವಿರುದ್ಧ ಕುಮರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆ.. ಆದ್ರೀಗ ತನ್ನ ಮೇಲೆ ವರದಕ್ಷಿಣೆ ಆರೋಪ ಮಾಡಿದ್ದಾಳೆ. ನಾನು ಅವಳ ಬಳಿ ಒಂದು ರೂಪಾಯಿ ಹಣವನ್ನು ಕೇಳಿಲ್ಲ ಎಂದಿದ್ದರು.

ಇನ್ನು ರಾಜೇಶ್ ವಿಚಾರಣೆ ನಡೆಸಿದ ಮೇಲೆ ಶೃತಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ರು.. ನೋಟಿಸ್ ನೀಡಿದ ಹಿನ್ನೆಲೆ ಇಂದು ಠಾಣೆಗೆ ಹಾಜರಾದ ಶೃತಿ ಹೇಳಿದ್ದಿಷ್ಟು.