ನೆಲಮಂಗಲ ಜ್ಯೂನಿಯರ್ ಕಾಲೇಜ್​ನಲ್ಲಿ ಶಿವಣ್ಣ- ದೀಪ್ತಿ ಗಾಯನಕ್ಕೆ ಮೆಚ್ಚಿದ ಹ್ಯಾಟ್ರಿಕ್ ಹಿರೋ!

 

ad

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಸರಳ ವ್ಯಕ್ತಿತ್ವದಿಂದಲೇ ಫೇಮಸ್​. ಅದರಲ್ಲೂ ಚಿಕ್ಕಮಕ್ಕಳಜೊತೆ ಶಿವಣ್ಣ ಮಗುವಾಗಿ ಬಿಡ್ತಾರೆ. ನೆಲಮಂಗಲದ ಸರ್ಕಾರಿ ಕಾಲೇಜಿನ ಆವರಣದಲ್ಲಿ ದ್ರೋಣ ಚಿತ್ರದ ಚಿತ್ರೀಕರಣ ವೇಳೆ ಶಾಲಾ ವಿದ್ಯಾರ್ಥಿಗಳ ಜೊತೆ ಶಿವಣ್ಣ ಸಮಯ ಕಳೆದಿದ್ದಾರೆ.

 

 

ಶಿವಣ್ಣ ಚಿತ್ರೀಕರಣದ ವೇಳೆಯಲ್ಲಿ ಫ್ರಿಯಾಗಿ ಕೂತಿದ್ದನ್ನು ನೋಡಿದ ಮಕ್ಕಳು ಶಿವಣ್ಣ ಬಳಿ ಬಂದು ಮಾತನಾಡಿಸಿದ್ದಾರೆ. ಈ ವೇಳೆ 6 ನೇ ತರಗತಿಯ ವಿದ್ಯಾರ್ಥಿ ದೀಪ್ತಿ ತನ್ನ ಸುಮಧುರ ಕಂಠದಿಂದ ಶಿಲೆಗಳು ಸಂಗೀತವಾ ಹಾಡಿವೆ ಹಾಡು ಹೇಳಿ ರಂಜಿಸಿದರು.

 

 

ಇಷ್ಟೇ ಅಲ್ಲ ಎಲ್ಲ ಮಕ್ಕಳು ಶಿವಣ್ಣನಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಕೇವಲ ಶಿವಣ್ಣ ಮಾತ್ರವಲ್ಲ ರಂಗಾಯಣ ರಘೂ ಸೇರಿದಂತೆ ಹಲವು ಕಲಾವಿದರು ಶಾಲಾ ಮಕ್ಕಳ ಸಂಭ್ರಮಕ್ಕೆ ಜೊತೆಯಾದರು. ಇದೀಗ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ದೀಪ್ತಿ ಸಖತ್ ಫೇಮಸ್ ಆಗ್ತಿದ್ದಾಳೆ.