ಬಿಲ್ಡಪ್​​​ಗಾಗಿ ಸ್ನೇಹಮಯಿ ಕೃಷ್ಣ-ಪ್ರಥಮ್​ ಫೈಟಿಂಗ್​​- ಸ್ಯಾಂಡಲ್​ವುಡ್​​​ನಲ್ಲಿ ಸದ್ದು ಮಾಡ್ತಿದೆ ಮತ್ತೊಂದು ಟೈಟಲ್​ ವಿವಾದ!

Snehamayi Krishna Objection to Buildup movie Title
Snehamayi Krishna Objection to Buildup movie Title

ಸ್ಯಾಂಡಲ್​ ವುಡ್​​ ನಲ್ಲಿ ಟೈಟಲ್​ ಗಲಾಟೆ ಸಾಮಾನ್ಯ. ಒಂದು ಟೈಟಲ್​ಗಾಗಿ ಹಲವಾರು ಜನರು ಕಿತ್ತಾಡೋದು ಸಾಕಷ್ಟು ಭಾರಿ ನಡೆದಿದೆ.

ಇದೀಗ ಈ ಸಾಲಿಗೆ ಒಳ್ಳೆಯ ಹುಡುಗ ಪ್ರಥಮ್​ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ಒಳ್ಳೆಯ ಹುಡುಗ ಪ್ರಥಮ್ ರ ಬಿಲ್ಡಪ್​​​ ಸಿನಿಮಾ ಟೈಟಲ್​ ಈಗ ವಿವಾದಕ್ಕೆ ಕಾರಣವಾಗಿದ್ದು, ಬಿಲ್ಡಪ್​ ಟೈಟಲ್​ ರಜಿಸ್ಟರ್​ ಮಾಡಿಸಿಕೊಂಡಿರುವ ಸ್ನೇಹಮಯಿ ಕೃಷ್ಣ ಒಳ್ಳೆಯ ಹುಡುಗ ಪ್ರಥಮ್ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.  ಈ ಬಗ್ಗೆ ಮಾತನಾಡಿರುವ ಸ್ನೇಹಮಯಿ ಕೃಷ್ಣ ಕೆಲ ದಿನದ ಹಿಂದೆ ನನ್ನ ಬಳಿ ಬಂದ ಒಳ್ಳೆಯ ಹುಡುಗ ಪ್ರಥಮ್ ಬಿಲ್ಡಪ್​ ನನ್ನ ಬಳಿ ಟೈಟಲ್​ ಕೇಳಿದ್ದರು. ಆದರೆ ನಾನು ಟೈಟಲ್​ ನೀಡಲು ನಿರಾಕರಿಸಿದ್ದೆ.

ಅಲ್ಲದೇ ಅವರಿಗೆ ಪ್ರಥಮ್​ ಬಿಲ್ಡಪ್​ ಎಂಬ ಹೆಸರಿಟ್ಟುಕೊಳ್ಳಲು ಸೂಚಿಸಿದ್ದೆ. ಆದರೇ ಇದೀಗ ಪ್ರಥಮ್​ ಚಿತ್ರದ ಶೀರ್ಷಿಕೆಯಲ್ಲಿ ಪ್ರಥಮ್​ ಎಂಬುದನ್ನು ಚಿಕ್ಕದಾಗಿ ಹಾಕಿ ಬಿಲ್ಡಪ್​ ಎಂದು ದೊಡ್ಡದಾಗಿ ಹಾಕಿಕೊಂಡಿದ್ದಾನೆ. ಇದು ಸರಿಯಲ್ಲ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.  ಇನ್ನು ಈ ಬಗ್ಗೆ ಹಲವಾರು ಭಾರಿ ಪ್ರಥಮ್ ನನಗೆ ದೂರವಾಣಿ ಕರೆ ಮಾಡಿದ್ದರು. ಆದರೇ ನಾನು ಕರೆಯನ್ನು ಸ್ವೀಕರಿಸಿರಲಿಲ್ಲ. ಬಳಿಕ ಬೇರೆ ನಂಬರ್​ನಿಂದ ಕರೆಮಾಡಿದ ಪ್ರಥಮ್​ ನನ್ನ ಬಳಿ ಮಾತನಾಡಲು ಯತ್ನಿಸಿದರು.

ಆದರೇ ನಾನು ನಿಮ್ಮೊಂದಿಗೆ ಮಾತನಾಡಲು ಇಷ್ಟ ಇಲ್ಲ ಎಂದು ಹೇಳಿದೆ. ಇದಕ್ಕೆ ಪ್ರಥಮ್​ ನನ್ನು ಚಪ್ಪಲಿ ಬಿಡುಗೆ ಜಾಗಕ್ಕೆ ಹೋಲಿಸಿ ಮಾತನಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಈಗಾಗಲೇ ಸ್ನೇಹಮಯಿ ಕೃಷ್ಣ ನನ್ನ ಬಿಲ್ಡಪ್​​ ಚಿತ್ರದ ಟೈಟಲ್​​ ವಿಚಾರಕ್ಕೆ ನ್ಯಾಯಕೊಡಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ದೂರು ನೀಡಿದ್ದಾರೆ. ಇನ್ನು ಇದಕ್ಕೆ ಇನ್ನು ಪ್ರಥಮ್ ಉತ್ತರಿಸಿಲ್ಲ. ಒಟ್ಟಿನಲ್ಲಿ ಮುಂದಿನ ದಿನದಲ್ಲಿ ಈ ಬಿಲ್ಡಪ್​​ ಟೈಟಲ್​​ ವಿವಾದ ಎಲ್ಲಿಗೆ ತಲುಪುತ್ತೋ ಕಾದು ನೋಡಬೇಕಿದೆ.