ಮಾದಕ‌ ಚೆಲುವೆ ನಮಿತಾ ಕಲ್ಯಾಣ!!


ಬಹುಭಾಷಾ ನಟಿ, ಮಾದಕ ಚಲುವೆ ನಮಿತಾ ಸಧ್ಯದಲ್ಲೇ ಹೊಸಜೀವನಕ್ಕೆ ಕಾಲಿಡಲಿದ್ದು, ತಮಿಳು ನಟ-ನಿರ್ದೇಶಕ ಹಾಗೂ ಬಾಲ್ಯದ ಸ್ನೇಹಿತ ವಿರೇಂದ್ರ ಚೌಧರಿಯನ್ನು ವರಿಸಲಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ನಮಿತಾ ಹಾಗೂ ವೀರೇಂದ್ರ ಅವರ ಮದುವೆಗೆ ಕುಟುಂಬಸ್ಥರು ಗ್ರೀನ್ ಸಿಗ್ನಲ್​​ ನೀಡಿದ್ದಾರೆ.

ನವೆಂಬರ್ 24ರಂದು ನಮಿತಾ ಹಾಗೂ ವಿರೇಂದ್ರ ವಿವಾಹ ತಿರುಪತಿಯಲ್ಲಿ ನಡೆಯಲಿದೆ. ಇದನ್ನು ತಮ್ಮ ಇನ್​ಸ್ಟಾ ಗ್ರಾಂನಲ್ಲಿ ಸ್ವತಃ ನಮಿತಾ ಖಚಿತಪಡಿಸಿದ್ದು, ನವೆಂಬರ್​​ 24 ರಂದು ನಾನು ವೀರ್​ ಮದುವೆಯಾಗುತ್ತಿದ್ದೇವೆ. ನಿಮ್ಮ ಪ್ರೀತಿ-ಹಾರೈಕೆ ಹೀಗೆ ಇರಲಿ. ನಾನು ನವೆಂಬರ್ 24 ರಂದು ಮದುಮಗಳಾಗುತ್ತಿದ್ದೇವೆ. ಎಲ್ಲರಿಗೂ ಥ್ಯಾಂಕ್​​ ಎಂದಿದ್ದಾರೆ.

2002ರಲ್ಲಿ ತೆಲುಗಿನ ‘ಸ್ವತಂ’ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಮಿತಾ ರವಿಚಂದ್ರನ್ ಅಭಿನಯದ ನೀಲಕಂಠದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಯಾಗಿದ್ದರು. ಬಳಿಕ ದರ್ಶನ್ ಜೊತೆ ಇಂದ್ರದಲ್ಲೂ ಅಭಿನಯಿಸಿದ್ದಾರೆ. ಇದಲ್ಲದೇ ವಿಜಯ್, ಅಜಿತ್, ಮೋಹನ್‍ಲಾಲ್, ಶರತ್ ಕುಮಾರ್, ವೆಂಕಟೇಶ್, ಸತ್ಯರಾಜ್ ಜೊತೆ ಕೂಡಾ ನಮಿತಾ ನಟಿಸಿದ್ದಾರೆ.